ಐಎಸ್‌ಎಲ್: ಹೈದರಾಬಾದ್ ಎಫ್‌ಸಿ ವಿರುದ್ಧ ಕೇರಳ ಬ್ಲಾಸ್ಟರ್ಸ್ ಜಯಭೇರಿ

ಇಂಡಿಯನ್ ಸೂಪರ್ ಲೀಗ್‌ನ 55ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಭಾನುವಾರ ಮುಖಾಮುಖಿಯಾಗಿದೆ. ಟೂರ್ನಿಯ ಎರಡು ಬಲಿಷ್ಠ ತಂಡಗಳ ನಡುವಿನ ಸೆಣೆಸಾಟದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಕೆಬಿಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಮಹತ್ವದ ಸಾಧನೆ ಮಾಡಿದ್ದು ಮೊದಲ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳ ಮಧ್ಯೆ ಜಿದ್ದಾಜಿದ್ದಿನ ಪ್ರದರ್ಶನ ನಡೆಯಿತು. ಇದರಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಒಂದು ಹಂತದಲ್ಲಿ ಹೈದರಾಬಾದ್ ತಂಡಕ್ಕಿಂತ ಮೇಲುಗೈ ಸಾಧಿಸಲು ಯಶಸ್ವಿಯಾಗಿದ್ದು ಈ ಮುನ್ನಡೆಯನ್ನು ಕೊನೆಯವರೆಗೂ ಮುಂದುವರಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಪಂದ್ಯದಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.
ಈ ಪಂದ್ಯದ 42ನೇ ನಿಮಿಷದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಗೋಲಿನ ಖಾತೆಯನ್ನು ತೆರೆಯಲು ಯಶಸ್ವಿಯಾಗಿತ್ತು. ಅಲ್ವಾರೊ ವಜ್ಕ್ವೆಜ್ ಈ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಮುನ್ನಡೆಯನ್ನು ಸಾಧಿಸಿದ ಎದುರಾಳಿಗೆ ಗೋಲು ಗಳಿಸುವ ಯಾವ ಅವಕಾಶವನ್ನು ಕೂಡ ನೀಡಲಿಲ್ಲ. ಅಂತಿಮವಾಗಿ ಕೇರಳ ಬ್ಲಾಸ್ಟರ್ಸ್ ತಂಡ 1-0 ಅಂತರದಿಂದ ಗೆದ್ದು ಬೀಗಿದೆ.
ಈ ಗೆಲುವಿನೊಂದಿಗೆ ಕೇರಳ ಬ್ಲಾಸ್ಟರ್ಸ್ ತಂಡ ಅಂಕಪಟ್ಟಿಯಲ್ಲಿ ಮಹತ್ವದ ಸಾಧನೆ ಮಾಡಿದೆ. ಮೊದಲ ಸ್ಥಾನದಲ್ಲಿದ್ದ ಮುಂಬೈ ಸಿಟಿ ಎಫ್ ತಂಡವನ್ನು ಹಿಂದಕ್ಕೆ ತಳ್ಳಿರುವ ಕೇರಳ ಬ್ಲಾಸ್ಟರ್ಸ್ ತಂಡ ಮೊಸಲ ಸ್ಥಾನವನ್ನು ಪಡೆದುಕೊಂಡಿದೆ. ಇನ್ನು ಈ ಪಂದ್ಯದಲ್ಲಿ ಸೋಲು ಕಂಡ ಹೈದರಾಬಾದ್ ಎಫ್‌ಸಿ ತಂಡ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ.
ಹೈದರಾಬಾದ್ ಎಫ್‌ಸಿ ಪ್ಲೇಯಿಂಗ್ XI: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್ ಕೀಪರ್), ಆಸಿಶ್ ರೈ, ಚಿಂಗ್ಲೆನ್ಸನಾ ಸಿಂಗ್, ಜುವಾನನ್, ಆಕಾಶ್ ಮಿಶ್ರಾ, ಜೋವೊ ವಿಕ್ಟರ್ (ನಾಯಕ), ಹಿತೇಶ್ ಶರ್ಮಾ, ನಿಖಿಲ್ ಪೂಜಾರಿ, ಎಡು ಗಾರ್ಸಿಯಾ, ಅನಿಕೇತ್ ಜಾಧವ್, ಬಾರ್ತಲೋಮಿವ್ ಓಗ್ಬೆಚೆ.
ಕೇರಳ ಬ್ಲಾಸ್ಟರ್ಸ್ ಎಫ್‌ಸಿ: ಪ್ರಭುಸುಖಾನ್ ಗಿಲ್ (ಗೋಲ್ ಕೀಪರ್), ರುಯಿವಾ ಹಾರ್ಮಿಪಾಮ್, ಮಾರ್ಕೊ ಲೆಸ್ಕೋವಿಕ್, ಜೆಸೆಲ್ ಕಾರ್ನೆರೊ (ನಾಯಕ), ಹರ್ಮನ್‌ಜೋತ್ ಖಬ್ರಾ, ಸಹಲ್ ಸಮದ್, ಜೀಕ್ಸನ್ ಸಿಂಗ್, ಲಾಲ್ತತಂಗ ಖಾಲ್‌ಹ್ರಿಂಗ್, ಆಡ್ರಿಯನ್ ಲೂನಾ, ಅಲ್ವಾರೊ ವಜ್ಕ್ವೆಜ್, ಜಾರ್ಜ್ ಡಯಾಜ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications