Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಬಿಎಫ್‌ಸಿ ದೊಡ್ಡ ಬೇಟೆ: ಮುಂಬೈ ಸಿಟಿ ವಿರುದ್ಧ ಭರ್ಜರಿ ಗೆಲುವು

ISL 2021-22: match 56 BFC vs MCFC, Bengaluru FC won the match by 3-0, Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 56ನೇ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಮುಂಬೈ ಸಿಟಿ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಬಲಿಷ್ಠ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಬೆಂಗಳೂರು ಎಫ್‌ಸಿ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವು ಬೆಂಗಳೂರು ಎಫ್‌ಸಿ ತಂಡದ ಪಾಲಿಗೆ ಭಾರೀ ಆತ್ಮವಿಶ್ವಾಸವನ್ನು ನೀಡಿದೆ.

ಬಾರಿಯ ಇಂಡಿಯನ್ ಸೂಪರ್ ಲೀಗ್‌ನ ಆರಂಭಿಕ ಪಂದ್ಯದಲ್ಲಿ ಗೆಲುವಿನೊಂದಿಗೆ ಟೂರ್ನಿ ಶುಭಾರಂಭ ಮಾಡಿದ್ದರೂ ಬಿಎಫ್‌ಸಿ ನಂತರ ನಿರಾಸೆಯ ಮೇಲೆ ನಿರಾಸೆ ಅನುಭವಿಸಿತು. ಗೆಲ್ಲುವ ಪಂದ್ಯಗಳನ್ನು ಡ್ರಾ ಮಾಡಿಕೊಂಡು, ಡ್ರಾ ಮಾಡಿಕೊಳ್ಳುವ ಪಂದ್ಯಗಳನ್ನು ಸೋತು ಹೀನಾಯ ಸ್ಥಿತಿಗೆ ತಲುಪಿತ್ತು. ಆದರೆ ಇದೀಗ ತಂಡದ ಪಾಲಿಗೆ ಆಶಾದಾಯಕ ಗೆಲುವೊಂದು ದೊರೆತಿದೆ. ಈ ಗೆಲುವಿನಿಂದ ಆಟಗಾರರು ಹಾಗೂ ಅಭಿಮಾನಿಗಳ ಉತ್ಸಾಹ ಹೆಚ್ಚಿದ್ದು ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಅದ್ಭುತ ಪ್ರದರ್ಶನ ನೀಡುವ ವಿಶ್ವಾಸ ಮೂಡಿಸಿದೆ.

ಮುಂಬೈ ಸಿಟಿ ಎಫ್‌ಸಿ ಈ ಬಾರಿಯ ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು. ಈ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಬೆಂಗಳೂರು ಎಫ್‌ಸಿ ತಂಡ 3-0 ಅಂತರದಿಂದ ಗೆಲುವು ಸಾಧಿಸಿದೆ. ಆರಂಭದಿಂದಲೇ ಪಂದ್ಯದಲ್ಲಿ ಹಿಡಿತ ಸಾಧಿಸುತ್ತಾ ಸಾಗಿತು ಬೆಂಗಳೂರು ಎಫ್‌ಸಿ ತಂಡ. ಪಂದ್ಯ ಆರಂಭವಾದ 8ನೇ ನಿಮಿಷದಲ್ಲಿ ಬಿಎಫ್‌ಸಿ ಪರವಾಗಿ ಮೊದಲ ಗೋಲು ದಾಖಲಾಗಿತ್ತು. ಡ್ಯಾನಿಶ್ ಫಾರೂಕ್ ತಂಡದ ಪರ ಮೊದಲ ಬಾರಿಗೆ ಈ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು.

ನಂತರ ಪಂದ್ಯದ 23ನೇ ನಿಮಿಷದಲ್ಲಿ ಬಿಎಫ್‌ಸಿ ತಂಡ ಎರಡನೇ ಗೋಲು ದಾಖಲಿಸಿತ್ತು. ಪ್ರಿನ್ಸ್ ಇಬಾರಾ ಬಿಎಫ್‌ಸು ಪರವಾಗಿ ಈ ಪಂದ್ಯದಲ್ಲಿ ಎರಡನೇ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಪಂದ್ಯದಲ್ಲಿ ಬಿಎಫ್‌ಸಿ 2-0 ಅಂತರದಿಂದ ಮೇಲುಗೈ ಸಾಧಿಸಿತು. ನಂತರ ಮೊದಲಾರ್ಧದ ಅಂತಿಮ ಹಂತದಲ್ಲಿ ಬಿಎಫ್‌ಸಿ ತಂಡದ ಪರವಾಗಿ ಪ್ರಿನ್ಸ್ ಇಬಾರಾ ತಂಡದ ಮೂರನೇ ಹಾಗೂ ವೈಯಕ್ತಿಕ ಎರಡನೇ ಗೋಲು ದಾಖಲಿಸಿದರು. ಈ ಮೂಲಕ ಮೊದಲಾರ್ಧದ ಅಂತ್ಯದಲ್ಲಿಯೇ ಬಿಎಫ್‌ಸಿ ತಂಡ 3-0 ಅಂತರದಿಂದ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ದ್ವಿತಿಯಾರ್ಧದಲ್ಲಿ ಎರಡು ತಂಡಗಳು ಕೂಡ ಯಾವುದೇ ಗೋಲು ಗಳಿಸುವಲ್ಲಿ ವಿಫಲವಾಯಿತು. ಅಂತಿಮವಾಗಿ ಬಿಎಫ್‌ಸಿ ತಂಡ 3-0 ಅಂತರದಿಂದ ಗೆಲುವು ಸಾಧಿಸಿದೆ.

ಇನ್ನು ಇಂದಿನ ಪಂದ್ಯದಲ್ಲಿ ಸೋಲು ಕಂಡ ಹೊರತಾಗಿಯೂ ಮುಂಬೈ ಸಿಟಿ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿಯೇ ಮುಂದುವರಿದಿದೆ. 11 ಪಂದ್ಯಗಳ್ನು ಆಡಿರುವ ಮುಂಬೈ ಎಫ್‌ಸಿ ಐದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಎರಡು ಪಂದ್ಯದಲ್ಲಿ ಡ್ರಾ ಸಾಧಿಸಿದೆ. ನಾಲ್ಕು ಪಂದ್ಯದಲ್ಲಿ ಸೋಲು ಕಂಡಿದೆ. ಇನ್ನು ಬೆಂಗಳೂರು ಎಫ್‌ಸಿ ತಮಡ ಈ ಪಂದ್ಯದ ಆರಂಭಕ್ಕೂ ಮುನ್ನ 9ನೇ ಸ್ಥಾನದಲ್ಲಿತ್ತು. ಈ ಭರ್ಜರಿ ಗೆಲುವಿನಿಂದ ಎರಡು ಸ್ಥಾನಗಳ ಏರಿಕೆ ಕಂಡಿದ್ದು 7ನೇ ಸ್ಥಾನವನ್ನು ಪಡೆದುಕೊಂಡಿದೆ.

ಬೆಂಗಳೂರು ಎಫ್‌ಸಿ: ಗುರುಪ್ರೀತ್ ಸಂಧು (ಗೋಲ್‌ ಕೀಪರ್/ ನಾಯಕ), ರೋಶನ್ ನವೋರೆಮ್, ಪ್ರತೀಕ್ ಚೌಧರಿ, ಅಲನ್ ಕೋಸ್ಟಾ, ಆಶಿಕ್ ಕುರುನಿಯನ್, ಸುರೇಶ್ ವಾಂಗ್ಜಮ್, ಬ್ರೂನೋ ಸಿಲ್ವಾ, ಡ್ಯಾನಿಶ್ ಫಾರೂಕ್, ಉದಾಂತ ಸಿಂಗ್, ಕ್ಲಿಟನ್ ಸಿಲ್ವಾ ಮತ್ತು ಪ್ರಿನ್ಸ್ ಇಬಾರಾ.

ಮುಂಬೈ ಸಿಟಿ ಎಫ್‌ಸಿ: ಫುರ್ಬಾ ಲಾಚೆನ್ಪಾ (ಗೋಲ್ ಕೀಪರ್), ಮೊಹಮದ್ ರಾಕಿಪ್, ಮೌರ್ತಡಾ ಫಾಲ್ (ನಾಯಕ), ರಾಹುಲ್ ಭೇಕೆ, ವಿಘ್ನೇಶ್ ದಕ್ಷಿಣಮೂರ್ತಿ, ಲಾಲೆಂಗ್ಮಾವಿಯಾ, ವಿನಿತ್ ರೈ, ಬ್ರಾಡೆನ್ ಇನ್ಮನ್, ಕ್ಯಾಸಿಯೊ ಗೇಬ್ರಿಯಲ್, ಬಿಪಿನ್ ಸಿಂಗ್ ಮತ್ತು ಯೊಗೊರ್ ಕ್ಯಾಟಟೌ.

Story first published: Monday, January 10, 2022, 23:32 [IST]
Other articles published on Jan 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+