Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಈಸ್ಟ್ ಬೆಂಗಾಲ್ ವಿರುದ್ಧ 1-0 ಅಂತರದಿಂದ ಗೆದ್ದ ಜೆಮ್ಶೆಡ್ಪುರ ಎಫ್‌ಸಿ

ISL 2021-22: match 57 SCEB vs JFC, Jamshedpur FC match won by 1-0 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು ನಡೆದ 57ನೇ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ಎಫ್‌ಸಿ ಹಾಗೂ ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಗೋಲು ಗಳಿಸಲು ಯಶಸ್ವಿಯಾದ ಜೆಮ್ಶೆಡ್ಪುರ ಎಫ್‌ಸಿ ತಂಡ ಪಂದ್ಯದಲ್ಲಿ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಅಂಕಪೊಟ್ಟಿಯಲ್ಲಿಯೂ ಅದ್ಭುತ ಸಾಧನೆ ಮಾಡಿರುವ ಜೆಮ್ಶೆಡ್ಪುರ ಎಫ್‌ಸಿ ತಂಡ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

ಪಂದ್ಯದ ಆರಂಭದಿಂದಲೂ ಸಾಕಷ್ಟು ಜಿದ್ದಾಜಿದ್ದಿನಿಂದ ಎರಡು ತಂಡಗಳು ಕೂಡ ಕಾದಾಟವನ್ನು ನಡೆಸಿದೆ. ಆದರೆ ಯಾವ ಗೋಲು ಗಳಿಸಲು ಎರಡು ತಂಡಗಳು ಕೂಡ ವಿಫಲವಾಗಿತ್ತು. ಮೊದಲಲಾರ್ಧ ಯಾವುದೇ ಗೋಲಿಲ್ಲದೆ ಅಂತ್ಯವಾಗಿತ್ತು. ದ್ವಿತಿಯಾರ್ಧ ಕೂಡ ಅದೇ ಹಾದಿಯಲ್ಲಿ ಸಾಗಿತ್ತು. ಆದರೆ 88ನೇ ನಿಮಿಷದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಗೋಲು ಗಳಿಸಲು ಯಶಸ್ವಿಯಾಯಿತು. ಇಶಾನ್ ಪಂಡಿತ ತಂಡದ ಪರ ಈ ಗೋಲನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಅಂತಿಮವಾಗಿ ಪಂದ್ಯವನ್ನು ಗೆಲ್ಲುವಲ್ಲಿ ತಂಡ ಯಶಸ್ವಿಯಾಯಿತು.

ಈ ಗೆಲುವಿನಿಂದಿಗೆ ಜೆಮ್ಶೆಡ್ಪುರ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಆಡಿದ 11 ಪಂದ್ಯಗಳಲ್ಲಿ ಐದು ಗೆಲುವು ಸಾಧಿಸಿರುವ ಜೆಮ್ಶೆಡ್ಪುರ ಎಫ್‌ಸಿ ತಂಡ ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಅಗ್ರ ಸ್ಥಾನದಲ್ಲಿದ್ದ ಕೇರಳ ಬ್ಲಾಸ್ಟರ್ಸ್ ತಂಡವನ್ನು ಎರಡನೇ ಸ್ಥಾನಕ್ಕೆ ತಳ್ಳಿದೆ.

ಇನ್ನು ಎಸ್‌ಸಿ ಈಸ್ಟ್ ಬೆಂಗಾಲ್ ಈ ಟೂರ್ನಿಯಲ್ಲಿ 11 ಪಂದ್ಯಗಳನ್ನು ಆಡಿಯೂ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಒಂದೇ ಒಂದು ಪಂದ್ಯ ಗೆಲ್ಲಲು ವಿಫಲವಾಗಿರುವ ಈಸ್ಟ್ ಬೆಂಗಾಲ್ 6 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 5 ಪಂದ್ಯಗಳಲ್ಲಿ ಸೋಲು ಕಂಡಿದೆ. ಈ ಮೂಲಕ ಟೂರ್ನಿಯ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲಿಯೇ ನೆಲೆಯೂರಿದೆ.

ಆರಂಭದಿಂದಲೂ ಸಾಕಷ್ಟು ಜಿದ್ದಾಜಿದ್ದಿನಿಂದ ಎರಡು ತಂಡಗಳು ಕೂಡ ಕಾದಾಟವನ್ನು ನಡೆಸಿದೆ. ಆದರೆ ಯಾವ ಗೋಲು ಗಳಿಸಲು ಎರಡು ತಂಡಗಳು ಕೂಡ ವಿಫಲವಾಗಿತ್ತು. ಮೊದಲಲಾರ್ಧ ಯಾವುದೇ ಗೋಲಿಲ್ಲದೆ ಅಂತ್ಯವಾಗಿತ್ತು. ದ್ವಿತಿಯಾರ್ಧ ಕೂಡ ಅದೇ ಹಾದಿಯಲ್ಲಿ ಸಾಗಿತ್ತು. ಆದರೆ 88ನೇ ನಿಮಿಷದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಗೋಲು ಗಳಿಸಲು ಯಶಸ್ವಿಯಾಯಿತು. ಇಶಾನ್ ಪಂಡಿತ ತಂಡದ ಪರ ಈ ಗೋಲನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ. ಅಂತಿಮವಾಗಿ ಪಂದ್ಯವನ್ನು ಗೆಲ್ಲುವಲ್ಲಿ ತಂಡ ಯಶಸ್ವಿಯಾಯಿತು.

ಎಸ್‌ಸಿ ಈಸ್ಟ್ ಬೆಂಗಾಲ್: ಅರಿಂದಮ್ ಭಟ್ಟಾಚಾರ್ಜ (ಗೋಲ್‌ ಕೀಪರ್/ ನಾಯಕ), ಅಂಕಿತ್ ಮುಖರ್ಜಿ, ಆದಿಲ್ ಖಾನ್, ಹೀರಾ ಮೊಂಡಲ್, ಮೊಹಮ್ಮದ್ ರಫೀಕ್, ಸೌರವ್ ದಾಸ್, ಲಾಲ್ರಿನ್ಲಿಯಾನಾ ಹ್ನಾಮ್ಟೆ, ವಹೆಂಗ್‌ಬಾಮ್ ಲುವಾಂಗ್, ಅಮರ್‌ಜಿತ್ ಕಿಯಾಮ್, ಥೋಂಗ್‌ಕೋಸಿಯೆಮ್ ಹಾಕಿಪ್ ಮತ್ತು ನವೋರೆಮ್ ಸಿಂಗ್.

ಜೆಮ್ಶೆಡ್ಪುರ ಎಫ್‌ಸಿ: ಪವನ್ ಕುಮಾರ್ (ಗೋಲ್‌ ಕೀಪರ್), ಲಾಲ್ಡಿನ್ಲಿಯಾನಾ ರೆಂತ್ಲೀ, ಎಲಿ ಸಬಿಯಾ, ಪೀಟರ್ ಹಾರ್ಟ್ಲಿ (ನಾಯಕ), ರಿಕಿ ಲಲ್ಲಾವ್ಮಾ, ಬೋರಿಸ್ ಸಿಂಗ್, ಜಿತೇಂದ್ರ ಸಿಂಗ್, ಮೊಬಾಶಿರ್ ರೆಹಮಾನ್, ಸೀಮಿನ್ಲೆನ್ ಡೌಂಗೆಲ್, ಗ್ರೆಗ್ ಸ್ಟೀವರ್ಟ್ ಮತ್ತು ಜೋರ್ಡಾನ್ ಮುರ್ರೆ.

Story first published: Tuesday, January 11, 2022, 22:23 [IST]
Other articles published on Jan 11, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+