For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2021: ಒಡಿಶಾ ಎಫ್‌ಸಿ ವಿರುದ್ಧ ಸೋಲು ಕಂಡ ಬೆಂಗಳೂರು ಎಫ್‌ಸಿ

ISL 2021-22: match 5, BFC vs OFC, Odisha fc won by 3-1 against Bengaluru fc Highlights

ಐಎಸ್‌ಎಲ್‌ನ ಈ ಬಾರಿಯ ಆವೃತ್ತಿಯ 6ನೇ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ ಮೊದಲ ಸೋಲು ಅನುಭವಿಸಿದೆ. ಬಿಎಫ್‌ಸಿ ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿರುವ ಎರಡನೇ ಪಂದ್ಯದಲ್ಲಿ ಈ ಸೋಲು ಅನುಭವಿಸಿದ್ದು ಒಡಿಶಾ ಎಫ್‌ಸಿ ಬಿಎಫ್‌ಸಿಗೆ 3-1 ಅಂತರದ ದೊಡ್ಡ ಆಘಾತ ನೀಡಿದೆ. ಈ ಮೂಲಕ ಸುನಿಲ್ ಛೇಟ್ರಿ ಪಡೆ ಆಘಾತ ಅನುಭವಿಸಿದೆ.

ಈ ಪಂದ್ಯದ ಆರಂಭದಿಂದಲೇ ಒಡಿಶಾ ಎಫ್‌ಸಿ ಮೇಲುಗೈ ಸಾಧಿಸಲು ಆರಂಭಿಸಿತ್ತು. ಪಂದ್ಯ ಆರಂಭವಾದ ಮೂರೇ ನಿಮಿಷಕ್ಕೆ ಒಡಿಶಾ ಎಫ್‌ಸಿ ಪರವಾಗಿ ಮೆಕ್ಸಿಕೋ ಮೂಲದ ಆಟಗಾರ ಜೇವಿಯರ್ ಹೆರ್ನಾಂಡೇಜ್ ಗೋಲು ಬಾರಿಸಿ ಒಡಿಶಾಗೆ ಮುನ್ನಡೆ ಒದಗಿಸಿದ್ದರು. ಆದರೆ ನಂತರ 21ನೇ ನಿಮಿಷದಲ್ಲಿ ಬಿಎಫ್‌ಸಿ ಕೂಡ ಗೋಲು ಗಳಿಸುವ ಮೂಲಕ ಸಮಬಲ ಸಾಧಿಸಿತು. ಬಿಎಫ್‌ಸಿ ಪರವಾಗಿ ಅಲನ್ ಕೋಸ್ಟ್ ಗೋಲು ಗಳಿಸಿ ಸಮಬಲಕ್ಕೆ ಕಾರಣವಾದರು.

ನಂತರ ದ್ವಿತೀಯಾರ್ಧದಲ್ಲಿ ಪಂದ್ಯದ 51ನೇ ನಿಮಿಷದಲ್ಲಿ ಜೇವಿಯರ್ ಹೆರ್ನಾಂಡೇಜ್ ಮತ್ತೊಂದು ಗೋಲು ಗಳಿಸಿ ಒಡಿಶಾಗೆ ಮತ್ತೊಮ್ಮೆ ಮುನ್ನಡೆ ಸಾಧಿಸಲು ಕಾರಣವಾದರು. ಈ ಮೂಲಕ ಒಡಿಶಾ 2-1 ಅಂತರದ ಮುನ್ನಡೆ ಸಾಧಿಸಿತು. ಅದಾದ ನಂತರ ಪಂದ್ಯದ ಅಂತಿಮ ನಿಮಿಷದಲ್ಲಿ ಒಡಿಶಾ ತಂಡ ಮತ್ತೊಂದು ಗೋಲು ಗಳಿಸುವ ಮೂಲಕ ಮುನ್ನಡೆಯನ್ನು ಹೆಚ್ಚಿಸಿತು. ಈ ಮೂಲಕ ಒಡಿಶಾ ಎಫ್‌ಸಿ ತಂಡ 3-1 ಅಂತರದಿಂದ ಭರ್ಜರಿ ಗೆಲುವು ಸಾಧಿಸಿತು.

ಇದು ಒಡಿಶಾ ಎಫ್‌ಸಿ ತಂಡದ ಈ ಆವೃತ್ತಿಯ ಪ್ರಥಮ ಪಂದ್ಯವಾಗಿದ್ದು ಟೂರ್ನಿಯಲ್ಲಿ ಅದ್ಭುತ ಆರಂಬವನ್ನು ಪಡೆದುಕೊಳ್ಳುವಲ್ಲಿ ಒಡಿಶಾ ಯಶಸ್ವಿಯಾಗಿದೆ. ಆದರೆ ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ಫುಟ್ಬಾಲ್ ಕ್ಲಬ್‌ ವಿರುದ್ಧ 4-2 ಅಂತರದ ಭರ್ಜರಿ ಗೆಲುವು ಸಾಧಿಸಿದ್ದ ಬಿಎಫ್‌ಸಿ ಮೊದಲ ಸೋಲು ಅನುಭವಿಸಿದೆ.

ಈ ಸೋಲಿನೊಂಡಿಗೆ ಬಿಎಫ್‌ಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ. ಒಡಿಶಾ ಎಫ್‌ಸಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಮುಂಬೈ ಎಫ್‌ಸಿ ಇದ್ದರೆ 2ನೇ ಸ್ಥಾನದಲ್ಲಿ ಎಟಿಕೆ ಮೋಹಮ್ ಬಾಗನ್ ಇದೆ. ಚೆನ್ನೈಯಿನ್ ಎಫ್‌ಸಿ ಅಗ್ರ ನಾಲ್ಕರಲ್ಲಿರುವ ಮತ್ತೊಂದು ತಂಡವಾಗಿದೆ.

ಬೆಂಗಳೂರು ಎಫ್‌ಸಿ ಪ್ಲೇಯಿಂಗ್ XI
ಗುರುಪ್ರೀತ್ ಸಂಧು (ಗೋಲ್‌ ಕೀಪರ್), ಆಶಿಕ್ ಕುರುನಿಯನ್, ಅಲನ್ ಕೋಸ್ಟಾ, ರೋಷನ್ ನೌರೆಮ್, ಯರೋಂಡು ಮುಸಾವು-ಕಿಂಗ್, ಜಯೇಶ್ ರಾಣೆ, ಬ್ರೂನೋ ಸಿಲ್ವಾ, ಸುರೇಶ್ ವಾಂಗ್ಜಮ್, ಉದಾಂತ ಸಿಂಗ್, ಪ್ರಿನ್ಸ್ ಇಬಾರಾ ಮತ್ತು ಸುನಿಲ್ ಛೆಟ್ರಿ (ನಾಯಕ).

ಒಡಿಶಾ ಎಫ್‌ಸಿ ಪ್ಲೇಯಿಂಗ್ XI: ಕಮಲ್ಜಿತ್ ಸಿಂಗ್ (ಗೋಲ್‌ಕೀಪರ್), ವಿಕ್ಟರ್ ಮೊಂಗಿಲ್, ಹೆಕ್ಟರ್ ರಾಮಿರೆಜ್, ಲಾಲ್ರುಅತ್ತರಾ, ಹೆಂಡ್ರಿ ಆಂಟೊನಾಯ್, ವಿನಿತ್ ರೈ (ನಾಯಕ), ಜೇವಿಯರ್ ಹೆರ್ನಾಂಡೆಜ್, ತೊಯ್ಬಾ ಸಿಂಗ್, ಜೆರ್ರಿ ಮಾವಿಹ್ಮಿಂಗ್ತಂಗ, ಜೊನಾಥಸ್ ಕ್ರಿಸ್ಟಿಯನ್ ಮತ್ತು ನಂದಕುಮಾರ್ ಸೇಕರ್.

Story first published: Thursday, November 25, 2021, 13:55 [IST]
Other articles published on Nov 25, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+