ಐಎಸ್‌ಎಲ್: ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಶರಣಾದ ಬಿಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ನಲ್ಲಿನ 61ನೇ ಪಂದ್ಯ ಭಾನುವಾರ ನಡೆಯಿತು. ಕೊರೊನಾವೈರಸ್ ಕಾರಣದಿಂದಾಗಿ ಮುಂದೂಡಲಾಗಿದ್ದ ಪಂದ್ಯ ಭಾನುವಾರ ನಡೆದಿತ್ತು. ಈ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳು ಮುಖಾಮುಖಿಯಾಗಿದ್ದು ಇದರಲ್ಲಿ ಬೆಂಗಳೂರು ತಂಡವನ್ನು ಎಟಿಕೆ ಮೋಹನ್ ಬಾಗನ್ ತಂಡ ಸುಲಭವಾಗಿ ಮಣಿಸಿದೆ. ಈ ಮೂಲಕ ಬೆಂಗಳುರು ಎಫ್‌ಸಿ ತಂಡ ಮುಂದಿನ ಹಂತಕ್ಕೆರುವ ಕನಸನ್ನು ಬಹುತೇಕ ಭಗ್ನಗೊಳಿಸಿದೆ.
ಮೊದಲಾರ್ಧದಲ್ಲಿ ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಎರಡು ತಂಡಗಳು ಕುಡ ಜಿದ್ದಾಜಿದ್ದಿನ ಪ್ರದರ್ಶನ ನೀಡಿದವು. ಆದರೆ ಬಹುತೇಕ ಅವಧಿಯಲ್ಲಿ ಎರಡೂ ತಂಗಳು ಕೂಡ ಗೋಲು ಗಳಿಸಲು ವಿಫಲವಾಗಿದ್ದವು. ಆದರೆ ಪಂದ್ಯದ ಮೊದಲಾರ್ಧದ ಅಂತಿಮ ಕ್ಷಣಸಲ್ಲಿ ಎಟಿಕೆ ಮೋಹನ್ ಬಾಗನ್ ತಂಡ ಮೊದಲ ಗೋಲು ಬಾರಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಮುನ್ನಡೆ ಪಡೆಯಿತು. ಎಟಿಕೆ ಮೋಹನ್ ಬಾಗನ್ ಪರವಾಗಿ ಲಿಸ್ಟನ್ ಕೊಲಾಕೋ ಗೋಲು ಗಳಿಸುವ ಮೂಲಕ ಈ ಮುನ್ನಡೆಗೆ ಕಾರಣವಾದರು.
ನಂತರ ದ್ವಿತಿಯಾರ್ಧದಲ್ಲಿಯೂ ಎರಡೂ ತಂಡಗಳು ಸಾಕಷ್ಟು ಪೈಪೋಟಿ ನಡೆಸಿದವು. ಆದರೆ ಬೆಂಗಳುರು ಎಫ್‌ಸಿ ತಂಡ ಗೋಲು ಗಳಿಸಲು ಸಂಪೂರ್ಣ ವಿಫಲವಾಯಿತು. ಆದರೆ ಪಂದ್ಯದ 85ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಎಟಿಕೆ ಮೋಹನ್ ಬಾಗನ್ ಪರವಾಗಿ ಎರಡನೇ ಗೋಲು ಗಳಿಸಲು ಕಾರಣವಾದರು. ಈ ಮೂಲಕ ಎಟಿಕೆ ಮೋಹನ್ ಬಾಗನ್ ತಂಡ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು. ಈ ಮೂಲಕ ಪಂದ್ಯದ ಅವಧಿ ಸಂಪೂರ್ಣವಾಗುವ ವೇಳೆಗೆ 2-0 ಅಂತರದ ಮೇಲುಗೂ ಸಾಧಿಸಿದ ಎಟಿಕೆ ಮೋಹನ್ ಭಾಗನ್ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಇನ್ನು ಈ ಗೆಲುವು ಎಟಿಕೆ ಮೋಹನ್ ಬಾಗನ್ ತಂಡಕ್ಕೆ ಮುಂದಿನ ಹಂತಕ್ಕೇರಲು ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ಅಂಕಪಟ್ಟಿಯಲ್ಲ ಎಟಿಕೆ ಮೋಹನ್ ಬಾಗನ್ ತಂಡ ಮೂರನೇ ಸ್ಥಾನದಲ್ಲಿದ್ದು ಸಾಕಷ್ಟು ಪೈಪೋಟಿಯನ್ನು ಎದುರಿಸುತ್ತಿದೆ. ಈ ಮಧ್ಯೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಹೋರಾಟ ನಡೆಸಿದ ಬೆಂಗಳೂರು ಎಫ್‌ಸಿ ತಂಡಕ್ಕೆ ಈ ಸೋಲು ಭಾರೀ ಹಿನ್ನಡೆಯುಂಟು ಮಾಡಿದೆ. ಬೆಂಗಳುರು ಎಫ್‌ಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಬೆಂಗಳೂರು ಎಫ್‌ಸಿ ಆರಂಭಿಕ ಪ್ಲೇಯಿಂಗ್ XI: ಲಾರಾ ಶರ್ಮಾ (ಗೋಲ್ ಕೀಪರ್), ರೋಷನ್ ನೌರೆಮ್, ಪರಾಗ್ ಶ್ರೀವಾಸ್, ಆಶಿಕ್ ಕುರುನಿಯನ್, ಅಲನ್ ಕೋಸ್ಟಾ, ಬ್ರೂನೋ ಸಿಲ್ವಾ, ಅಜಯ್ ಛೆಟ್ರಿ, ಪ್ರಿನ್ಸ್ ಇಬಾರಾ, ಸುನಿಲ್ ಛೆಟ್ರಿ (ನಾಯಕ), ಉದಾಂತ ಸಿಂಗ್, ಕ್ಲಿಟನ್ ಸಿಲ್ವಾ.
ಎಟಿಕೆ ಮೋಹನ್ ಭಾಗನ್ ರಂಭಿಕ ಪ್ಲೇಯಿಂಗ್ XI: ಅಮರಿಂದರ್ ಸಿಂಗ್ (ಗೋಲ್ ಕೀಪರ್), ತಿರಿ, ಸಂದೇಶ್ ಜಿಂಗನ್, ಅಶುತೋಷ್ ಮೆಹ್ತಾ, ಸುಭಾಸಿಶ್ ಬೋಸ್, ಪ್ರೀತಮ್ ಕೋಟಾಲ್ (ನಾಯಕ), ಜೋನಿ ಕೌಕೊ, ಕಾರ್ಲ್ ಮೆಕ್‌ಹಗ್, ಲಿಸ್ಟನ್ ಕೊಲಾಕೊ, ಹ್ಯೂಗೋ ಬೌಮಸ್, ಮನ್ವಿರ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications