Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ 2-0 ಅಂತರದಿಂದ ಗೆದ್ದ ಒಡಿಶಾ ಎಫ್‌ಸಿ

ISL 2021-22: match 64 NEUFC vs OFC, Odisha FC match won by 2-0 Highlights

ಇಂಡಿಯನ್ ಸೂಪರ್ ಲೀಗ್‌ನ 64ನೇ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಹಾಗೂ ಒಡಿಶಾ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಒಡಿಶಾ ಎಫ್‌ಸಿ ತಂಡ ನಾರ್ಥ್‌ಇಸ್ಟ್ ಎಫ್‌ಸಿ ತಂಡದ ವಿರುದ್ಧ ಭರ್ಜರಿ 2-0 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ 5ನೇ ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿಯೂ 5ನೇ ಸ್ಥಾನಕ್ಕೆ ಜಿಗಿದಿದೆ. ನಾರ್ಥ್‌ಈಸ್ಟ್ ಯುನೈಟೆಡ್ ತಮಡ ಮತ್ತೊಂದು ಸೋಲನ್ನು ಅನುಭವಿಸಿದೆ.

ಫಟೋರ್ಡಾದ ಪಿಜಿಎನ್ ಸ್ಟೇಡಿಯಂನಲ್ಲಿ ನಡೆದ ಮುಖಾಮುಖಿಯಲ್ಲಿ ಒಡಿಶಾ ಎಫ್‌ಸಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ 2-0 ಗೆಲುವಿನೊಂದಿಗೆ ಐದನೇ ಸ್ಥಾನಕ್ಕೆ ಏರಿದೆ. ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿಗಿಂತ ಕೇವಲ ಒಂದು ಅಂಕದಿಂದ ಹಿಂದುಳಿದಿರು ಒಡಿಶಾ ಎಫ್‌ಸಿ ಐದನೇ ಸ್ಥಾನದಲ್ಲದೆ. ಮತ್ತೊಂದೆಡೆ ಖಾಲಿದ್ ಜಮಿಲ್ ನೇತೃತ್ವದ ನಾರ್ಥ್‌ಈಸ್ಟ್ ಯುನೈಟೆಡ್ ಸತತ ಐದನೇ ಪಂದ್ಯದಲ್ಲಿಯೂ ಗೆಲುವು ಸಾಧಿಸಲು ವಿಫಲವಾಗಿರುವ ಕಾರಣ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ

ಡೇನಿಯಲ್ ಲಾಲ್‌ಲಿಂಪೂಯಾ 17 ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಒಡಿಶಾ ಎಫ್‌ಸಿ ತಂಡಕ್ಕೆ ಆರಂಭಿಕ ಮುನ್ನಡೆ ನೀಡಿದರು. ಅದಾದ ಬಳಿಕ ಅರಿದೈ ಸೌರೆಜ್ 22 ನೇ ನಿಮಿಷದಲ್ಲಿ ಮತ್ತೊಮದು ಗೋಲು ಗಳಿಸಿದರು. ಈ ಮೂಲಕ ಪಂದ್ಯದಲ್ಲಿ ಒಡಿಶಾ ಎಫ್‌ಸಿ ತಂಡ ಎರಡನೇ ಗೋಲು ದಾಖಲಿಸಿದೆ.

ಒಡಿಶಾ ಎಫ್‌ಸಿ ಪ್ಲೇಯಿಂಗ್ XI: ಅರ್ಶ್ದೀಪ್ ಸಿಂಗ್ (ಗೋಲ್‌ ಕೀಪರ್), ಲಾಲ್ಹ್ರೆಜುವಾಲಾ ಸೈಲುಂಗ್, ಹೆಕ್ಟರ್ ರಾಮಿರೆಜ್, ವಿಕ್ಟರ್ ಮೊಂಗಿಲ್ (ನಾಯಕ), ಸಾಹಿಲ್ ಪನ್ವಾರ್, ಐಸಾಕ್ ಚಕ್ಚುವಾಕ್, ಜೇವಿಯರ್ ಹೆರ್ನಾಂಡೆಜ್, ಥೋಯ್ಬಾ ಸಿಂಗ್, ಡೇನಿಯಲ್ ಲಾಲ್ಲಿಂಪೂಯಾ, ಜೆರ್ರಿ ಮಾವಿಹ್ಮಿಂಗ್ತಂಗ, ಅರಿದೈ ಸೌರೆಜ್.

ನಾರ್ಥ್ ಈಸ್ಟ್ ಯುನೈಟೆಡ್ ಎಫ್ ಸಿ ಪ್ಲೇಯಿಂಗ್ XI: ಮಿರ್ಷಾದ್ ಮಿಚು (ಗೋಲ್‌ ಕೀಪರ್), ಗುರ್ಜಿಂದರ್ ಕುಮಾರ್, ಪ್ರೊವತ್ ಲಾಕ್ರಾ, ಪ್ಯಾಟ್ರಿಕ್ ಫ್ಲೋಟ್‌ಮನ್, ಮಶೂರ್ ಶೆರೀಫ್, ಮೊಹಮ್ಮದ್ ಇರ್ಷಾದ್, ಹೆರ್ನಾನ್ ಸಂತಾನಾ (ನಾಯಕ), ಇಮ್ರಾನ್ ಖಾನ್, ಸೆಹನಾಜ್ ಸಿಂಗ್, ಲಾಲ್‌ಖಾವ್ಪುಮಾವಿಯಾ, ಸುಹೇರ್ ವಡಕ್ಕೆಪೀಡಿಕಾ.

Story first published: Tuesday, January 18, 2022, 21:59 [IST]
Other articles published on Jan 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+