ಐಎಸ್‌ಎಲ್: ಮುಂಬೈ ಸಿಟಿ ಎಫ್‌ಸಿ ವಿರುದ್ಧ ಜೆಮ್ಶೆಡ್ಪುರ ಎಫ್‌ಸಿ ರೋಚಕ ಗೆಲುವು

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇವತ್ತು 67ನೇ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಹಾಗೂ ಜೆಮ್ಶಡ್ಪುರ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ರೋಚಕವಾಗಿ ನಡೆದ ಈ ಸೆಣೆಸಾಟದಲ್ಲಿ ಜೆಮ್ಶೆಡ್ಪುರ ಎಫ್‌ಸಿ 3-2 ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನೊಂದಿಗೆ ಜೆಮ್ಶೆಡ್ಪುರ ಎಫ್‌ಸಿ ಅಂಕಪಟ್ಟಿಯಲ್ಲಿ ಒಂದು ಸ್ಥಾನಗಳ ಏರೊಕೆ ಕಂಡಿದ್ದು 3ನೇ ಸ್ಥಾನಕ್ಕೇರಿದೆ. ಕೇರಳ ಬ್ಲಾಸ್ಟರ್ಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಪಂದ್ಯ ಆರಂಭವಾದ 9ನೇ ನಿಮಿಷದಲ್ಲಿಯೇ ಜೆಮ್ಶೆಡ್ಒಪುರ ಎಫ್‌ಸಿ ತಂಡ ಆರಂಭಿಕ ಮೇಲುಗೈ ಸಾಧಿಸಲು ಯಶಸ್ವಿಯಾಗಿತ್ತು. ಅಲೆಕ್ಸಾಂಡರ್ ಜೇಮ್ಸ್ ಸ್ಟೆವರ್ಟ್ ಮೊದಲ ಗೋಲು ಸಿಡಿಸಿ ತಂಡಕ್ಕೆ ಮೇಲುಗೈ ಒದಗಿಸಿದ್ದರು. ಅದಾದ ಬಳಿಕ ಪಂದ್ಯದ 30ನೇ ನಿಮಿಷದಲ್ಲಿ ಜೆಮ್ಶೆಡ್ಪುರ ಪರವಾಗಿ ಎರಡನೇ ಗೋಲು ದಾಖಲಾಗಿತ್ತು. ರಿತ್ವಿಕ್ ಕುಮಾರ್ ದಾಸ್ ಈ ಗೋಲು ಸಿಡಿಸಿ ತಂಡದ ಮೇಲುಗೈ ಹೆಚ್ಚಿಸಿದರು. ಮೊದಲಾರ್ಧದುದ್ದಕ್ಕೂ ಈ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಜೆಮ್ಶೆಡ್ಪುರ ಯಶಸ್ವುಯಾಗಿತ್ತು. ಹೋಗಾಗಿ ಮೊದಲಾರ್ಧದ ಅಂತ್ಯದಲ್ಲಿ ಜೆಮ್ಶೆಡ್ಪುರ ಎಫ್‌ಸಿ 2-0 ಅಂತರದ ಮುನ್ನಡೆ ಸಾಧಿಸಿತ್ತು.
ದ್ವಿಯಾರ್ಧದಲ್ಲಿ ಮುಂಬೈ ಹಿಡಿತವನ್ನು ಸಾಧಿಸಲು ಆರಂಭಿಸಿತ್ತು. ಪಂದ್ಯದ 57ನೇ ನಿಮಿಷದಲ್ಲಿ ಮುಂಬೈ ಸಿಟಿ ತಂಡದ ಪರವಾಗಿ ಮೊದಲ ಗೋಲು ದಾಖಲಾಗಿತ್ತು. ರಾಹುಲ್ ಶಂಕರ್ ಬೇಕೆ ಈ ಗೋಲು ಸಿಡಿಸಿದ್ದರು. ಈ ಮೂಲಕ ತಂಡದ ಹಿನ್ನಡೆಯನ್ನು ಕುಗ್ಗಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಮತ್ತೆ ಎರಡು ತಂಡಗಳ ಪೈಪೋಟಿ ಮುಂದುವರಿಯಿತು. 86ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡ ಮುಂಬೈ ಮತ್ತೊಂದು ಗೋಲು ಸಿಡಿಸಲು ಯಶಸ್ವಿಯಾಗಿತ್ತು. ಇದರ ಪರಿಣಾಮವಾಗಿ ಪಂದ್ಯ 2-2 ಅಂತರದಿಂದ ಸಮಬಲಗೊಂಡಿತ್ತು. ನಂತರ ಹೆಚ್ಚುವರಿ ಅವಧಿಯಲ್ಲಿ ಜೆಮ್ಶೆಡ್ಒಉರ ಎಫ್‌ಸಿ ತಂಡ ಕೂಡ ಫೆನಾಲ್ಟಿ ಅವಕಾಶವನ್ನು ಗಳಿಸಿಕೊಂಡಿತ್ತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ಗ್ರೇಗ್ ಸ್ಟೆವರ್ಟ್ ಯಶಸ್ವಿಯಾಗಿದ್ದರು. ಈ ಮೂಲಕ ಪಂದ್ಯದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ರೋಚಕ ಗೆಲುವು ಸಾಧಿಸಿದೆ.
ಈ ಗೆಲುವಿನ ಮೂಲಕ ಜೆಮ್ಶೆಡ್ಪುಪುರ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ನಾಲ್ಕನೇ ಸ್ಥಾನದಲ್ಲಿದ್ದ ತಂಡ ಮೂರನೇ ಸ್ಥಾನಕ್ಕೆ ಏರಿಕೆಯಾಗಿದೆ. ಕೇರಳ ಬ್ಲಾಸ್ಟರ್ಸ್ ಒಂದು ಸ್ಥಾನ ಕುಸಿತ ಕಂಡಿದ್ದು 4ನೇ ಸ್ಥಾನದಲ್ಲಿದೆ. ಇನ್ನು ಆಘಾತಕಾರಿ ರೀತಿಯಲ್ಲಿ ಸೋಲು ಕಂಡ ಮುಂಬೈ ಸಿಟಿ 5ನೇ ಸ್ಥಾನದಲ್ಲಿ ಮುಂದುವರಿದಿದೆ. ಹೈದರಾಬಾದ್ ಎಫ್‌ಸಿ ಹಾಗು ಎಟಿಕೆ ಮೋಹನ್ ಭಾಗನ್ ಅಗ್ರ ಎರಡು ತಂಡಗಳಾಗಿ ಮುಂದುವರಿದಿದೆ. ಬೆಂಗಳೂರು ಎಫ್‌ಸಿ 6ನೇ ಸ್ಥಾನದಲ್ಲಿದೆ.
ಜೆಮ್ಶೆಡ್ಪುರ ಎಫ್‌ಸಿ: ಟಿಪಿ ರೆಹನೇಶ್ (ಗೋಲ್ ಕೀಪರ್), ಪೀಟರ್ ಹಾರ್ಟ್ಲಿ (ನಾಯಕ), ಲಾಲ್ಡಿನ್ಲಿಯಾನಾ ರೆಂತ್ಲೀ, ಎಲಿ ಸಬಿಯಾ, ರಿಕಿ ಲಲ್ಲಾವ್ಮಾ, ಜಿತೇಂದ್ರ ಸಿಂಗ್, ಬೋರಿಸ್ ಸಿಂಗ್, ಪ್ರಣಯ್ ಹಾಲ್ಡರ್, ರಿತ್ವಿಕ್ ದಾಸ್, ಗ್ರೆಗ್ ಸ್ಟೀವರ್ಟ್, ಡೇನಿಯಲ್ ಚುಕ್ವು.
ಮುಂಬೈ ಸಿಟಿ ಎಫ್‌ಸಿ: ಮೊಹಮದ್ ನವಾಜ್ (ಗೋಲ್ ಕೀಪರ್), ರಾಹುಲ್ ಭೇಕೆ, ಮೆಹ್ತಾಬ್ ಸಿಂಗ್, ಮೌರ್ತಡಾ ಫಾಲ್ (ನಾಯಕ), ಮಂದರ್ ದೇಸಾಯಿ, ಕ್ಯಾಸಿಯೊ ಗೇಬ್ರಿಯಲ್, ಅಹ್ಮದ್ ಜಹೌಹ್, ಲಾಲಿಯನ್ಜುವಾಲಾ ಚಾಂಗ್ಟೆ, ಬಿಪಿನ್ ಸಿಂಗ್, ಇಗೊರ್ ಅಂಗುಲೋ, ಲಾಲೆಂಗ್ಮಾವಿಯಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications