For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2021: ನಾರ್ಥ್‌ಈಸ್ಟ್ ಯುನೈಟೆಡ್ vs ಕೇರಳ ಬ್ಲಾಸ್ಟರ್ಸ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯ

ISL 2021-22: match 7 NEUFC vs KBFC, match draw, Highlights

ಐಎಸ್‌ಎಲ್ 2021-22ರ ಆವೃತ್ತಿಯ 7ನೇ ಪಂದ್ಯ ಇಂದು ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಮಧ್ಯೆ ನಡೆದಿದೆ. ಈ ಪಂದ್ಯದಲ್ಲಿ ಎರಡು ತಮಡಗಳು ಕೂಡ ಯಾವುದೇ ಗೋಲು ಗಳಿಸಲು ವಿಫಲವಾಗಿದ್ದು ಪಂದ್ಯ ನೀರಸವಾಗಿ ಅಂತ್ಯವಾಗಿದೆ. ಈ ಬಾರಿಯ ಆವೃತ್ತಿಯ ಮೊದಲ ಗೋಲು ರಹಿತ ಡ್ರಾ ಪಂದ್ಯ ಇದಾಗಿದೆ.

ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಜಿದ್ದಾಜಿದ್ದಿನ ಪೈಪೋಟಿಯನ್ನು ನಡೆಸಿತು. ಎರಡು ತಮಡಗಳು ಕೂಡ ಕೆಲ ಉತ್ತಮ ಅವಕಾಶಗಳನ್ನು ಕೂಡ ಗಳಿಸಿಕೊಂಡಿತ್ತು. ಆದರೆ ಎಲ್ಲಾ ಅವಕಾಶಗಳು ಕೂಡ ವಿಫಲವಾಗಿದ್ದು ಯಾವುದೇ ಗೋಲು ದಾಖಲಿಸಲು ಎರಡು ತಂಡಗಳಿಗೂ ಸಾಧ್ಯವಾಗಲಿಲ್ಲ. ಎರಡು ತಂಡಗಳ ರಕ್ಷಣ ವಿಭಾಗದ ಪ್ರದರ್ಶನ ಅತ್ಯುನ್ನತವಾಗಿತ್ತು ಎಂಬುದು ಗಮನಾರ್ಹ ಸಂಗತಿ. ಒಂದು ಹಂತದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ತೀವ್ರ ಆಕ್ರಮಣಕಾರಿ ಆಟಕ್ಕೆ ಮುಂದಾಯಿತಾದರು ಕೂಡ ಅದರಿಂದ ತಂಡಕ್ಕೆ ಹೆಚ್ಚಿನ ಲಾಭವಾಗಲಿಲ್ಲ. ನಾರ್ಥ್‌ಈಸ್ಟ್ ಯುನೈಟೆಡ್ ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ.

ಇನ್ನು ಇಂದಿನ ಈ ಪಂದ್ಯ ಕೇರಳ ಹಾಗೂ ನಾರ್ಥ್‌ಈಸ್ಟ್ ಎರಡು ತಂಡಗಳಿಗೂ ಎರಡನೇ ಪಂದ್ಯವಾಗಿದೆ. ಆದರೆ ಎರಡನೇ ಪಂದ್ಯದಲ್ಲಿಯೂ ಈ ತಂಡಗಳು ಗೆಲುವನ್ನು ಸಾಧಿಸಲು ವಿಫಲವಾಗಿದೆ. ಕೇರಳ ಬ್ಲಾಸ್ಟರ್ಸ್ ತಂಡ ತನ್ನ ಮೊದಲ ಪಂದ್ಯವನ್ನು ಎಟಿಕೆ ಮೋಹನ್ ಬಾಗನ್ ವಿರುದ್ಧ ಆಡಿದ್ದು ಆ ಪಂದ್ಯದಲ್ಲಿ 2-4 ಅಂತರದಿಂದ ಸೋಲು ಕಂಡಿತ್ತು. ಮತ್ತೊಂದೆಡೆ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡ ಬೆಂಗಳುರು ಎಪ್‌ಸಿ ತಂಡವನ್ನು ಮೊದಲ ಪಂದ್ಯದಲ್ಲಿ ಎದುರಿಸಿದ್ದು ಅದು ಕೂಡ 2-4 ಅಂತರದಿಂದ ಸೋಲು ಕಂಡಿತ್ತು.

ಈ ಡ್ರಾ ಫಲಿತಾಂಶದಿಂದಾಗಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಹಾಗೂ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ತಂಡಗಳು ತಮ್ಮ ಖಾತೆಗೆ ತಲಾ ಒಂದೊಂದು ಅಂಕಗಳನ್ನು ಸೇರಿಸಿಕೊಂಡಿದೆ. ಅಲ್ಲದೆ ಎರಡು ತಂಡಗಳು ಕೂಡ ಒಂದೊಂದು ಸ್ಥಾನಗಳ ಏರಿಕೆ ಕಂಡಿದೆ. ಕೇರಳ ಬ್ಲಾಸ್ಟರ್ಸ್ ಎಫ್‌ಸಿ 8 ಹಾಗೂ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ 9ನೇ ಸ್ಥಾನದಲ್ಲಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂಬೈ ಎಫ್‌ಸಿ ಇದ್ದರೆ 2ನೇ ಸ್ಥಾನದಲ್ಲಿ ಎಟಿಕೆ ಮೋಹಮ್ ಬಾಗನ್ ಇದೆ. ಮೂರನೇ ಸ್ಥಾನದಲ್ಲಿ ಒಡಿಶಾ ಎಫ್‌ಸಿ ಇದ್ದು ಚೆನ್ನೈಯಿನ್ ಎಫ್‌ಸಿ ಅಗ್ರ ನಾಲ್ಕರಲ್ಲಿರುವ ಮತ್ತೊಂದು ತಂಡವಾಗಿದೆ. ಬೆಂಗಳೂರು ಎಫ್‌ಸಿ ಐದನೇ ಸ್ಥಾನವನ್ನು ಪಡೆದುಕೊಂಡಿದೆ.

IPL 2022: ಪಂಜಾಬ್‌ ತಂಡದಿಂದ ಹೊರಕ್ಕೆ, ಲಖನೌ ತಂಡವನ್ನ ಮುನ್ನೆಡೆಸಲಿದ್ದಾರೆ ಕೆ.ಎಲ್ ರಾಹುಲ್?
ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಪ್ಲೇಯಿಂಗ್ XI: ಅಲ್ಬಿನೋ ಗೋಮ್ಸ್ (ಗೋಲ್‌ ಕೀಪರ್), ಎನೆಸ್ ಸಿಪೊವಿಕ್, ಜೆಸೆಲ್ ಕಾರ್ನೆರೊ (ನಾಯಕ), ಮಾರ್ಕೊ ಲೆಸ್ಕೋವಿಕ್, ಆಯುಷ್ ಅಧಿಕಾರಿ, ಹರ್ಮನ್ಜೋತ್ ಖಬ್ರಾ, ಸಹಲ್ ಸಮದ್, ಆಡ್ರಿಯನ್ ಲೂನಾ, ಜೀಕ್ಸನ್ ಸಿಂಗ್, ವಿನ್ಸಿ ಬ್ಯಾರೆಟ್ಟೊ ಮತ್ತು ಜಾರ್ಜ್ ಡಯಾಜ್.

ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಪ್ಲೇಯಿಂಗ್ XI: ಸುಭಾಶಿಶ್ ರಾಯ್ (ಗೋಲ್‌ಕೀಪರ್), ಪ್ಯಾಟ್ರಿಕ್ ಫ್ಲೋಟ್‌ಮನ್, ಪ್ರೊವತ್ ಲಾಕ್ರಾ, ಗುರ್ಜಿಂದರ್ ಕುಮಾರ್, ಖಾಸ್ಸಾ ಕ್ಯಾಮೆರಾ, ಹೆರ್ನಾನ್ ಸಂತಾನಾ (ನಾಯಕ), ಪ್ರಗ್ಯಾನ್ ಗೊಗೊಯ್, ಸುಹೇರ್ ವಡಕ್ಕೆಪೀಡಿಕಾ, ಲಾಲ್ದನ್ಮಾವಿಯಾ ರಾಲ್ಟೆ, ಡೆಶೋರ್ನ್ ಬ್ರೌನ್ ಮತ್ತು ಲಾಲ್‌ಖಾವ್ಪುಮಾವಿಯಾ.

Story first published: Thursday, November 25, 2021, 22:26 [IST]
Other articles published on Nov 25, 2021
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+