ಐಎಸ್‌ಎಲ್: ನಾರ್ಥ್‌ಈಸ್ಟ್ ವಿರುದ್ಧ ಡ್ರಾ ಸಾಧಿಸಿದ ಮುಂಬೈ ಸಿಟಿ ಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ನ 71ನೇ ಪಂದ್ಯದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಹಾಗೂ ಮುಂಬೈ ಸಿಟಿ ಎಫ್‌ಸಿ ತಮಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ತಲಾ ಒಂದು ಗೋಲು ದಾಖಲಿಸಿದ್ದು ಡ್ರಾ ಸಾಧಿಸಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಮುಂಬೈ ಸಿಟಿ ಎಫ್‌ಸಿಗೆ ಈ ಡ್ರಾ ಫಲಿತಾಂಶ ಹಿನ್ನಡೆಯುಂಟು ಮಾಡಿದರೂ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಮತ್ತೆ ಸೇರಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಅಹ್ಮದ್ ಜಹೌಹ್ 30 ನೇ ನಿಮಿಷದಲ್ಲಿ ಹಾಲಿ ಚಾಂಪಿಯನ್ನರಿಗೆ ಮುನ್ನಡೆ ಸಾಧಿಸಲು ಸಹಾಯ ಮಾಡಿದರು. ಆದರೆ ಪಟ್ಟುಬಿಡದ ನಾರ್ತ್ ಈಸ್ಟ್ ಯುನೈಟೆಡ್ ಒತ್ತಡವನ್ನು ಹೆಚ್ಚಿಸುತ್ತಲೇ ಇತ್ತು. ಅಂತಿಮವಾಗಿ 79 ನೇ ನಿಮಿಷದಲ್ಲಿ ಬದಲಿ ಆಟಗಾರ ಇರ್ಷಾದ್ ಗೋಲು ಗಳಿಸುವ ತಮ್ಮ ಸಮಬಲ ಸಾಧಿಸಲು ಕಾರಣವಾದರು.
ಇದರ ಪರಿಣಾಮವಾಗಿ ಮುಂಬೈ ತನ್ನ ಕೊನೆಯ ಆರು ಪಂದ್ಯಗಳಲ್ಲಿ ಜಯ ಗಳಿಸಲು ಸಾಧ್ಯವಾಗದಂತಾಗಿದೆ. ಹಾಗಿದ್ದರೂ ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಮರಳಿ ಸಂಪಾದಿಸಿದೆ. 12 ಪಂದ್ಯಗಳಿಂದ ಕೇವಲ 18 ಅಂಕಗಳನ್ನು ಮಾತ್ರವೇ ಮುಂಬೈ ಹೊಂದಿದೆ. ಬುಧವಾರ (ಜನವರಿ 26) ಬೆಂಗಳೂರು ಎಫ್‌ಸಿಯನ್ನು ವಿರುದ್ಧ ಚೆನ್ನೈಯಿನ್ ಎಫ್‌ಸಿ ಸೆಣೆಸಾಟ ನಡೆಸಲಿದೆ
ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ: ಸುಭಾಸಿಶ್ ರಾಯ್ (ಗೋಲ್‌ಕೀಪರ್) (ನಾಯಕ), ಪ್ರೊವತ್ ಲಾಕ್ರಾ, ಮಶೂರ್ ಶೆರೀಫ್, ಜಕಾರಿಯಾ ಡಿಯಲ್ಲೊ, ಗುರ್ಜಿಂದರ್ ಕುಮಾರ್, ಮಾರ್ಕೊ ಸಹನೆಕ್, ಸೆಹ್ನಾಜ್ ಸಿಂಗ್, ಹೆರ್ನಾನ್ ಸಂತಾನಾ, ಇಮ್ರಾನ್ ಖಾನ್, ಸುಹೇರ್ ವಡಕ್ಕೆಪೀಡಿಕಾ ಮತ್ತು ಮಾರ್ಸೆಲೊ ಪೆರೇರಾ
ಮುಂಬೈ ಸಿಟಿ ಎಫ್‌ಸಿ: ಮೊಹಮದ್ ನವಾಜ್ (ಗೋಲ್‌ಕೀಪರ್), ಅಮಿ ರಾನವಾಡೆ, ಮೌರ್ತಡಾ ಫಾಲ್ (ನಾಯಕ), ಮೆಹ್ತಾಬ್ ಸಿಂಗ್, ವಿಘ್ನೇಶ್ ದಕ್ಷಿಣಮೂರ್ತಿ, ಅಹ್ಮದ್ ಜಹೌಹ್, ಬ್ರಾಡೆನ್ ಇನ್ಮನ್, ಲಾಲೆಂಗ್ಮಾವಿಯಾ, ಕ್ಯಾಸಿಯೊ ಗೇಬ್ರಿಯಲ್, ವಿಕ್ರಮ್ ಸಿಂಗ್ ಮತ್ತು ಬಿಪಿನ್ ಸಿಂಗ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications