
ಇಂಡಿಯನ್ ಸೂಪರ್ ಲೀಗ್‌ನ 76ನೇ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಬಿಎಫ್‌ಸಿ ತಂಡ ಅಮೋಘ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಬೆಂಗಳೂರು ಅಂಕಪಟ್ಟಿಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದು ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪಂದ್ಯದಲ್ಲಿ ಎರಡು ತಂಡಗಳು ಕೂಡ ಮೊದಲಾರ್ಧದಲ್ಲಿ ಸಾಕಷ್ಟು ಪೈಪೋಟಿಯನ್ನು ನಡೆಸಿತು. ಆದರೆ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಯಿತು. ಹೀಗಾಗಿ ಮೊದಲಾರ್ಧ ಗೋಲು ರಹಿತವಾಗಿ ಅಂತ್ಯಕಂಡಿತು. ಆದರೆ ದ್ವಿತೀಯಾರ್ಧದಲ್ಲಿ ಬೆಂಗಳೂರು ಎಫ್‌ಸಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಪಂದ್ಯದ 56ನೇ ನಿಮಿಷದಲ್ಲಿ ರೋಷನ್ ನೌರೆಮ್ ಅಮೋಘ ಗೋಲೊಂದನ್ನು ದಾಖಲಿಸಿ ತಂಡದ ಮುನ್ನಡೆಗೆ ಕಾರಣವಾದರು. ಈ ಗೋಲು ಬಿಎಫ್‌ಸಿ ಗೆಲುವಿಗೆ ಕಾರಣವಾಯಿತು. ಅದಾದ ಬಳಿಕ ಎರಡು ತಮಡಗಳು ಕೂಡ ಗೋಲು ಗಳಿಸಲು ವಿಫಲವಾಗಿದೆ. ಹೀಗಾಗಿ ಬಿಎಫ್‌ಸಿ ಪಂದ್ಯವನ್ನು 1-0 ಅಂತರದಿಂದ ಗೆದ್ದುಕೊಂಡಿದೆ.
ಈ ಗೆಲುವಿನ ನಂತರ ಬಿಎಫ್‌ಸಿ ಅಂಕಪಟ್ಟಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಸತತ ಸೋಲು ಹಾಗೂ ಡ್ರಾ ಮಾಡಿಕೊಂಡು ಹಿನ್ನಡೆ ಅನುಭವಿಸಿದ್ದ ಬಿಎಫ್‌ಸಿ ಮತ್ತೆ ಗೆಲುವಿನ ಲಯಕ್ಕೆ ಮರಳಿದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಬಿಎಫ್‌ಸಿ ಈವರೆಗೆ ಒಟ್ಟು 14 ಪಂದ್ಯಗಳನ್ನು ಆಡಿದ್ದು ಇದರಲ್ಲಿ 5 ಗೆಲುವು 5 ಸೋಲು ಅನುಭವಿಸಿದೆ. ನಾಲ್ಕು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಹೀಗಾಗಿ 4ನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಸ್ಥಾನದಲ್ಲಿ ಮುಂದುವರಿಯುವುದು ಬಿಎಫ್‌ಸಿಗೆ ಸುಲಭವಾಗಿಲ್ಲ. ಯಾಕೆಂದರೆ ಬಿಎಫ್‌ಸಿ ತಮಡ ಈಗಾಗಲೇ 14 ಪಂದ್ಯಗಳನ್ನು ಆಡಿದ್ದು ಇತರ ತಂಡಗಳಿಗೆ ಹೋಲಿಸಿದರೆ ಕಡಿಮೆ ಪಂದ್ಯಗಳು ಬಿಎಫ್‌ಸಿಗೆ ಉಳಿದುಕೊಂಡಿದೆ. ಮುಂದಿನ ಪಂದ್ಯಗಳಲ್ಲಿಯೂ ಗೆಲುವಿನ ಸಾಧನೆ ಮುಂದುವರಿಸಿದರೆ ಮಾತ್ರವೇ ಅಂಕಪಟ್ಟಿಯಲ್ಲಿ ಆಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಿದೆ.
ಮತ್ತೊಂದೆಡೆ ಟಾಪ್ 3 ತಂಡವಾಗಿರುವ ಕೇರಳ ಬ್ಲಾಸ್ಟರ್ಸ್ ಈ ಪಂದ್ಯದಲ್ಲಿನ ಸೋಲಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ ಸ್ಥಾನ ಬದಲಾವಣೆಯಾಗಿಲ್ಲ. 12 ಪಂದ್ಯಗಳನ್ನು ಆಡಿರುವ ಕೇರಳ ಬ್ಲಾಸ್ಟರ್ಸ್ 5 ಗೆಲುವು 5 ಡ್ರಾ ಹಾಗೂ 2 ಸೋಲು ಅನುಭವಿಸಿದೆ.
ಬೆಂಗಳೂರು ಎಫ್‌ಸಿ: ಗುರುಪ್ರೀತ್ ಸಂಧು (ಗೋಲ್ ಕೀಪರ್), ಪ್ರತೀಕ್ ಚೌಧರಿ, ವುಂಗ್‌ಗಯಂ ಮುಯಿರಾಂಗ್, ಪರಾಗ್ ಶ್ರೀವಾಸ್, , ಡ್ಯಾನಿಶ್ ಫಾರೂಕ್, ಸುರೇಶ್ ವಾಂಗ್‌ಜಮ್, ಬ್ರೂನೋ ಸಿಲ್ವಾ, ಪ್ರಿನ್ಸ್ ಇಬಾರಾ, ಉದಾಂತ ಸಿಂಗ್, ರೋಷನ್ ನೌರೆಮ್, ಸುನಿಲ್ ಛೆಟ್ರಿ (ನಾಯಕ).
ಕೇರಳ ಬ್ಲಾಸ್ಟರ್ಸ್ ಎಫ್‌ಸಿ: ಪ್ರಭುಸುಖಾನ್ ಗಿಲ್ (ಗೋಲ್ ಕೀಪರ್), ನಿಶು ಕುಮಾರ್, ರುಯಿವಾ ಹಾರ್ಮಿಪಮ್, ಮಾರ್ಕೊ ಲೆಸ್ಕೋವಿಕ್, ಲಾಲ್ತತಂಗ ಖೌಲ್ರಿಂಗ್, ಹರ್ಮನ್ಜೋತ್ ಖಬ್ರಾ (ನಾಯಕ), ಸಹಲ್ ಸಮದ್, ಆಡ್ರಿಯನ್ ಲೂನಾ, ಜೀಕ್ಸನ್ ಸಿಂಗ್, ಜಾರ್ಜ್ ಡಯಾಜ್, ಅಲ್ವಾರೊ ವಾಜ್ಕ್ವೆಜ್