ಐಎಸ್‌ಎಲ್: ಅಂತಿಮ ಕ್ಷಣದಲ್ಲಿ ಗೋಲು: ಒಡಿಶಾ ವಿರುದ್ಧ ರೋಚಕ ಡ್ರಾ ಸಾಧಿಸಿದ ಗೋವಾ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 78ನೇ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಹಾಗೂ ಎಫ್‌ಸಿ ಗೋವಾ ತಂಡಗಳು ಮುಖಾಮುಖಿಯಾಗಿದ್ದು ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ಸೋಲುವ ಹಂತದಲ್ಲಿದ್ದ ಎಫ್‌ಸಿ ಗೋವಾ ಅಂತಿಮ ಸೆಕೆಂಡ್‌ನಲ್ಲಿ ಗೋಲು ಗಳಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಗಿತ್ತು. ಆದರೆ ದ್ವಿತಿಯಾರ್ಧದಲ್ಲಿ ಪಂದ್ಯದ 61ನೇ ನಿಮಿಷದಲ್ಲಿ ಎಫ್‌ಸಿ ಗೋವಾ ತಂಡ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಜೊನಾಥಾಸ್ ಕ್ರಿಶ್ಚಿಯನ್ ಈ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಪಂದ್ಯದಲ್ಲಿ ಒಡಿಶಾ ಮೇಲುಗೈ ಸಾಧಿಸಿತ್ತು. ಈ ಮೇಲುಗೈಯನ್ನು ಒಡಿಶಾ ತಂಡ ಅಂತಿಮ ಹಂತದವರೆಗೂ ಮುನ್ನಡೆಸುವಲ್ಲಿ ಯಶಸ್ವಿಯಾಗಿತ್ತು.
90ನೇ ನಿಮಿಷದವರೆಗೂ ಒಡಿಶಾ ತಂಡ ಮೇಲುಗೈ ಸಾಧಿಸಿತ್ತು. ನಿಗದಿತ ಅವಧಿ ಮುಕ್ತಾಯದ ಬಳಿಕ ನಾಲ್ಕು ನಿಮಿಷಗಳ ಹೆಚ್ಚವರಿ ಅವಧಿಯನ್ನು ನೀಡಲಾಗಿತ್ತು. ಈ ಅವಧಿಯಲ್ಲಿಯೂ ಅಂತಿಮ ಕ್ಷಣದವರೆಗೆ ಗೆಲುವಿನ ನಿರೀಕ್ಷೆಯಲ್ಲಿದ್ದ ಒಡಿಶಾ ತಂಡಕ್ಕೆ ಅಂತಿಮ ಸೆಕೆಂಡ್‌ನಲ್ಲಿ ಭಾರೀ ಆಘಾತ ಉಂಡಾಯಿತು. ಅಲೆಕ್ಸಾಂಡರ್ ರೊಮ್ಯಾರಿಯೋ ಅಂತಿಮ ಕ್ಷಣದಲ್ಲಿ ಗೋಲು ಸಿಡಸುವ ಮೂಲಕ ರೋಚಕ ತಿರುವು ನೀಡಿದರು, ಪಂದ್ಯವನ್ನು ಎಫ್‌ಸಿ ಗೋವಾ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಈ ಡ್ರಾ ಫಲಿತಾಂಶದಿಂದಾಗಿ ಅಂಕಪಟ್ಟಿಯಲ್ಲಿ ಯಾವುದೇ ಮಹತ್ವದ ಬದಲಾವಣೆಯಾಗಿಲ್ಲ. ಒಡಿಶಾ ಎಫ್‌ಸಿ ಒಂದು ಸ್ಥಾನದ ಏರಿಕೆ ಕಂಡಿದ್ದು 7ನೇ ಸ್ಥಾನಕ್ಕೆ ಭಡ್ತಿ ಪಡೆದಿದೆ. ಚೆನ್ನೈಯಿನ್ 8ನೇ ಸ್ಥಾನಕ್ಕೆ ಕುಸಿದಿದೆ. ಉಳಿದಂತೆ ಎಲ್ಲಾ ತಂಡಗಳ ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಒಡಿಶಾ ಎಫ್‌ಸಿ: ಅರ್ಷದೀಪ್ ಸಿಂಗ್ (ಗೋಲ್ ಕೀಪರ್), ಲಾಲ್ಹ್ರೆಜುವಾಲಾ ಸೈಲುಂಗ್, ಗೌರವ್ ಬೋರಾ, ವಿಕ್ಟರ್ ಮೊಂಗಿಲ್ (ನಾಯಕ), ಸಾಹಿಲ್ ಪನ್ವಾರ್, ತೊಯ್ಬಾ ಸಿಂಗ್, ಐಸಾಕ್ ಚಕ್ಚುವಾಕ್, ಲಿರಿಡಾನ್ ಕ್ರಾಸ್ನಿಕಿ, ಜೇವಿಯರ್ ಹೆರ್ನಾಂಡೆಜ್, ಜೆರ್ರಿ ಮಾವಿಹ್ಮಿಂಗ್ತಂಗ ಮತ್ತು ಅರಿದೈ ಸೌರೆಜ್.
ಎಫ್‌ಸಿ ಗೋವಾ: ನವೀನ್ ಕುಮಾರ್ (ಗೋಲ್ ಕೀಪರ್), ಅನ್ವರ್ ಅಲಿ, ಸೆರಿಟನ್ ಫೆರ್ನಾಂಡಿಸ್, ಇವಾನ್ ಗೊನ್ಜಾಲೆಜ್, ಐಬಾನ್ ಡೊಹ್ಲಿಂಗ್, ಬ್ರಾಂಡನ್ ಫೆರ್ನಾಂಡಿಸ್ (ನಾಯಕ), ಎಡು ಬೆಡಿಯಾ, ಆಲ್ಬರ್ಟೊ ನೊಗುರಾ, ಪ್ರಿನ್ಸ್‌ಟನ್ ರೆಬೆಲ್ಲೊ, ಮಕನ್ ಚೋಥೆ ಮತ್ತು ಐರಾಮ್ ಕ್ಯಾಬ್ರೆರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications