ಐಎಸ್‌ಎಲ್: ಈಸ್ಟ್ ಬೆಂಗಾಲ್ vs ಚೆನ್ನೈಯಿನ್ ಪಂದ್ಯ ಡ್ರಾದಲ್ಲಿ ಅಂತ್ಯ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 79ನೇ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಹಾಗೂ ಚೆನ್ನೈಯಿನ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿದ್ದು ರೋಚಕ ಹಣಾಹಣಿ ನಡೆದಿದೆ. ಆದರೆ ಅಂತಿಮವಾಗಿ ಎರಡು ತಂಡಗಳು ಕೂಡ ತಲಾ ಎರಡು ಗೋಲು ಗಳಿಸಿದ ಕಾರಣ ಪಂದ್ಯ ಡ್ರಾ ಫಲಿತಾಂಶವನ್ನು ಕಂಡಿದೆ.
ಸಾಕಷ್ಟು ರೋಚಕವಾಗಿ ನಡೆದ ಪಂದ್ಯದಲ್ಲಿ ಎರಡು ತಂಡಗಳ ಆಟಗಾರರು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದ್ದಾರೆ. ಮೊದಲಾರ್ಧದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಮೇಲುಗೈ ಸಾಧಿಸಿದ್ದರೆ ದ್ವಿತೀಯಾರ್ಧದಲ್ಲಿ ಈಸ್ಟ್ ಬೆಂಗಾಲ್ ಭರ್ಜರಿಯಾಗಿ ತಿರುಗಿ ಬೀಳುವಲ್ಲಿ ಯಶಸ್ವಿಯಾಯಿತು. ಇದರ ಪರಿಣಾಮವಾಗಿ ಪಂದ್ಯ ಡ್ರಾ ಫಲಿತಾಂಶವನ್ನು ಕಂಡಿದೆ.
ಪಂದ್ಯ ಆರಂಭವಾದ ಎರಡನೇ ನಿಮಿಷದಲ್ಲಿಯೇ ಚೆನ್ನೈಯಿನ್ ಎಫ್‌ಸಿ ತಂಡ ಮೊದಲ ಗೋಲು ಗಳಿಸಿತ್ತು. ಎದುರಾಳಿ ತಂಡದ ಆಟಗಾರ ಹೀರಾ ಮೊಂಡಾಲ್ ಓನ್ ಗೋಲು ದಾಖಲಿಸುವ ಮೂಲಕ ಚೆನ್ನೈಯಿನ್‌ಗೆ ಉಡುಗೊರೆಯಾಗಿ ಗೋಲು ನೀಡಿದರು. ಅದಾದ ಬಳಿಕ 15ನೇ ನಿಮಿಷದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಎರಡನೇ ಗೋಲು ದಾಖಲಿಸಿತು. ನಿಂಥೋಯಿಂಗನ್ಬಾ ಮೀಟೆಲ್ ಈ ಗೋಲು ದಾಖಲಿಸುವ ಮೂಲಕ ಚೆನ್ನೈಯಿನ್ ತಂಡದ ಮುನ್ನಡೆಯನ್ನು ಎರಡಕ್ಕೆ ಏರಿಸಿದರು. ಮೊದಾಲಾರ್ಧದ ಅಂತ್ಯದವರೆಗೂ ಈ ಮುನ್ನಡೆಯನ್ನು ಕಾಪಾಡಲು ಚೆನ್ನೈಯಿನ್ ಯಶಸ್ವಿಯಾಗಿತ್ತು.
ದ್ವಿತೀಯಾರ್ಧದಲ್ಲಿ ಈಸ್ಟ್ ಬೆಂಗಾಲ್ ತಿರುಗೇಟು ನೀಡಲು ಯಶಸ್ವಿಯಾಗಿತ್ತು. ಪಂದ್ಯದ 61ನೇ ನಿಮಿಷದಲ್ಲಿ ಈಸ್ಟ್ ಬೆಂಗಾಲ್ ಮೊದಲ ಗೋಲು ಗಳಿಸಿತು. ಡ್ಯಾರೆನ್ ಸಿಡೊಯೆಲ್ ಈ ಗೋಲು ಸಿಡಿಸಿ ತಂಡದ ಅಂತರವನ್ನು ಕುಗ್ಗಿಸುವಲ್ಲಿ ಯಶಸ್ವಿಯಾದರು. ಅದಾದ ಬಳಿಕ ಸಾಕಷ್ಟು ಪ್ರಯತ್ನ ನಡೆಸಿದ ಬಳಿಕ 90ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸುವಲ್ಲಿ ಈಸ್ಟ್ ಬೆಂಗಾಲ್ ಯಶಸ್ವಿಯಾಗಿತ್ತು. ಈ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಪಂದ್ಯ ಸಮಬಲಗೊಂಡಿತ್ತು, ಹೆಚ್ಚುವರಿ ಅವಧಿಯನ್ನು ನೀಡಿದರಾದರೂ ಈ ಅವಧಿಯಲ್ಲಿ ಎರಡು ತಂಡಗಳು ಕೂಡ ಗೋಲು ದಾಖಲಿಸಲು ವಿಫಲವಾದವು. ಹೀಗಾಗಿ ಪಂದ್ಯ ಡ್ರಾ ಫಲಿತಾಂಶವನ್ನು ಪಡೆದುಕೊಂಡಿದೆ.
ಇನ್ನು ಈ ಫಲಿತಾಂಶದ ನಂತರ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆಯಾಗಿಲ್ಲ. 8ನೇ ಸ್ಥಾನದಲ್ಲಿದ್ದ ಚೆನ್ನೈಯಿನ್ ಎಫ್‌ಸಿ 6ನೇ ಸ್ಥಾನಕ್ಕೆ ಏರಿಕೆಯಾಗಿದೆ. ಮುಂಬೈ ಸಿಟಿ ಎಫ್‌ಸಿ ಹಾಗೂ ಒಡಿಶಾ ತಣಡಗಳು ತಲಾ ಒಂದೊಂದು ಸ್ಥಾನಗಳ ಕುಸಿತ ಅನುಭವಿಸಿದೆ. ಇನ್ನು ಈಸ್ಟ್ ಬೆಂಗಾಲ್ ಅಂತಿಮ ಸ್ಥಾನವನ್ನು ನಾರ್ಥ್‌ಈಸ್ಟ್ ಯುನೈಟೆಡ್ ತಂಡಕ್ಕೆ ಬಿಟ್ಟುಕೊಟ್ಟಿದ್ದು 10ನೇ ಸ್ಥಾನಕ್ಕೆ ಏರಿಕೆಯಾಗಿದೆ.
ಚೆನ್ನೈಯಿನ್ ಎಫ್‌ಸಿ: ದೇಬ್ಜಿತ್ ಮಜುಂದರ್ (ಗೋಲ್ ಕೀಪರ್), ಮೊಹಮ್ಮದ್ ಸಾಜಿದ್ ಧೋತ್, ಜೆರ್ರಿ ಲಾಲ್ರಿಂಜುಲಾ, ನಾರಾಯಣ್ ದಾಸ್, ಸ್ಲಾವ್ಕೊ ದಮ್ಜಾನೋವಿಕ್, ನಿಂಥೋಯಿಂಗನ್ಬಾ ಮೀಟೆಲ್, ಅನಿರುದ್ಧ್ ಥಾಪಾ (ನಾಯಕ), ಏರಿಯಲ್ ಬೊರಿಸಿಯುಕ್, ವ್ಲಾಡಿಮಿರ್ ಕೋಮನ್, ಸುಹೇಲ್ ಪಾಶಾ, ನೆರಿಜಸ್ ವಾಲ್ಸ್ಕಿಸ್.
ಎಸ್‌ಸಿ ಈಸ್‌ಟ ಬೆಂಗಾಲ್: ಅರಿಂದಮ್ ಭಟ್ಟಾಚಾರ್ಜ (ಗೋಲ್ ಕೀಪರ್), ಆದಿಲ್ ಖಾನ್ (ನಾಯಕ), ಹೀರಾ ಮೊಂಡಲ್, ಫ್ರಾಂಜೊ ಪ್ರೈಸ್, ಡ್ಯಾರೆನ್ ಸಿಡೊಯೆಲ್, ವಹೆಂಗ್‌ಬಾಮ್ ಲುವಾಂಗ್, ಸೌರವ್ ದಾಸ್, ಅಮರ್‌ಜಿತ್ ಕಿಯಾಮ್, ಆಂಟೋನಿಯೊ ಪೆರೊಸೆವಿಕ್, ಮಾರ್ಸೆಲೊ ರಿಬೇರೊ, ನವೊರೆಮ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications