ಐಎಸ್‌ಎಲ್ 2021: ಎಫ್‌ಸಿ ಗೋವಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಜೆಮ್ಶೆಡ್ಪುರ ಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ನ 8ನೇ ಆವೃತ್ತಿಯ 8ನೇ ಪಂದ್ಯ ಎಫ್‌ಸಿ ಗೋವಾ ಹಾಗೂ ಜೆಮ್ಶೆಡ್ಪುರ ಎಫ್‌ಸಿ ಮಧ್ಯೆ ನಡೆಸಿದೆ. ಈ ಪಂದ್ಯದಲ್ಲಿ ಎಫ್‌ಸಿ ಗೋವಾ ವಿರುದ್ಧ ಜೆಮ್ಶೆಡ್ಪುರ ಎಫ್‌ಸಿ ತಂಡ 3-1 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಈ ಆವೃತ್ತಿಯಲ್ಲಿ ಪ್ರಥಮ ಗೆಲುವು ದಾಖಲಿಸಿದೆ ಜೆಮ್ಶೆಡ್ಪುರ ಎಫ್‌ಸಿ.
ಎರಡು ತಂಡಗಳ ನಡುವಿನ ಜಿದ್ದಾಜಿದ್ದಿನ ಕದನದಲ್ಲಿ ಮೊದಲಾರ್ಧದಲ್ಲಿ ಎರಡು ತಮಡಗಳು ಕೂಡ ಗೋಉಗಳಿಸಲು ವಿಫಲವಾಗಿದ್ದರು. ಆದರೆ ದ್ವಿತೀಯಾರ್ಧದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ತನ್ನ ಗೇರ್ ಬದಲಾಯಿಸಿಕೊಂಡಿತ್ತು. ಹೆಚ್ಚು ಆಕ್ರಮಣಕಾರಿಯಾಗಿ ಆಡಿದ ತಂಡ ಅದರ ಲಾಭವನ್ನು ಪಡೆದುಕೊಂಡಿತು. 51ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸುವಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಯಶಸ್ವಿಯಾಯಿತು. ಲಿಥುವೇನಿಯಾ ಮೂಲದ ಆಟಗಾರ ನೆರಿಜುಸ್ ವಲ್ಸ್ಕಿಸ್ 51ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಗ್ರೆಗ್ ಸ್ಟೆವರ್ಟ್ ಅವರಿಂದ ಪಡೆದ ಚೆಂಡನ್ನು ನೆರಿಜುಸ್ ವಲ್ಸ್ಕಿಸ್ ಗೋಲು ಪೆಟ್ಟಿಗೆಗೆ ಸೇರಿಸಿದ್ದರು.
ಅದಾದ ಹತ್ತು ನಿಮಿಷದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಮತ್ತೊಂದು ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಈ ಬಾರಿಯೂ ಜೆಮ್ಶೆಡ್ಪುರ ಪರವಾಗಿ ಗೋಲಿ ಸಿಡಿಸಿದ ಆಟಗಾರ ನೆರಿಜುಸ್ ವಲ್ಸ್ಕಿಸ್. ಪಂದ್ಯದ 61ನೇ ನಿಮಿಷದಲ್ಲಿ ಈ ಭರ್ಜರಿ ಗೋಲು ಸಿಡಿಸಿತ್ತು ಜೆಮ್ಶೆಡ್ಪುರ ಎಫ್‌ಸಿ.
ನಂತರ ಪಂದ್ಯದ 80ನೇ ನಿಮಿಷದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡಕ್ಕೆ ಮತ್ತೊಂದು ಯಶಸ್ಸು ಲಭಿಸಿತು. ಜೋರ್ಡನ್ ಮರ್ರೆ ತಂಡದ ಪರವಾಗಿ ಮೂರನೇ ಗೋಲು ದಾಖಲಸಿ ಮಿಂಚಿದರು. ಅದಾದ ಬಳಿಕ 86ನೇ ನಿಮಿಷದಲ್ಲಿ ಗೋವಾ ತಂಡ ಕೂಡ ಮೊದಲ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಐರೆನ್ ಕ್ಯಾಬ್ರೆರಾ ಗೋವಾ ತಂಡಕ್ಕೆ ಈ ಯಶಸ್ಸು ನೀಡಿದರು. ಆದರೆ ಅದಾಗಲೇ ಕಾಲ ಮಿಂಚಿತ್ತು. ಗೋವಾ ತಂಡಕ್ಕೆ ಪಂದ್ಯಕ್ಕೆ ಮರಳಲು ಅವಕಾಶವೇ ದೊರೆಯಲಿಲ್ಲ. ಅಂತಿಮವಾಗಿ 1-3 ಅಂತರದಿಂದ ಜೆಮ್ಶೆಡ್ಪುರ ತಂಡಕ್ಕೆ ಗೋವಾ ಎಫ್‌ಸಿ ಶರಣಾಗಿದೆ.
ಇನ್ನು ಈ ಗೆಲುವಿನೊಂದಿಗೆ ಜೆಮ್ಶೆಡ್ಪುರ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಮೊದಲ ಮೊದಲ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಡ್ರಾ ಮಾಡಿಕೊಂಡಿದ್ದ ಜೆಮ್ಶೆಡ್ಪುರ ತಂಡ ಎರಡನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದೆ. ಇನ್ನು ಎಫ್‌ಸಿ ಗೋವಾ ತಂಡಕ್ಕೆ ಇದು ಎರಡನೇ ಸೋಲಾಗಿದ್ದು ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನವನ್ನು ಪಡೆದುಕೊಂಡಿದೆ.
ಜೆಮ್ಶೆಡ್ಪುರ ಎಫ್‌ಸಿ ಪ್ಲೇಯಿಂಗ್ XI: ಟಿಪಿ ರೆಹನೇಶ್ (ಗೋಲ್ ಕೀಪರ್), ನರೇಂದರ್ ಗಹ್ಲೋಟ್, ರಿಕಿ ಲಲ್ಲಾವ್ಮಾ, ಲಾಲ್ಡಿನ್ಲಿಯಾನಾ ರೆಂತ್ಲೀ, ಪೀಟರ್ ಹಾರ್ಟ್ಲಿ (ನಾಯಕ), ಜಿತೇಂದ್ರ ಸಿಂಗ್, ಸೀಮಿನ್ಲೆನ್ ಡೌಂಗೆಲ್, ಕೋಮಲ್ ಥಾಟಲ್, ಅಲೆಕ್ಸಾಂಡ್ರೆ ಲಿಮಾ, ನೆರಿಜಸ್ ವಾಲ್ಸ್ಕಿಸ್ ಮತ್ತು ಗ್ರೆಗ್ ಸ್ಟೀವರ್ಟ್.
ಎಫ್‌ಸಿ ಗೋವಾ ಪ್ಲೇಯಿಂಗ್ XI
ಧೀರಜ್ ಮೊಯಿರಾಂಗ್ಥೆಮ್ (ಗೋಲ್‌ಕೀಪರ್), ಸ್ಯಾನ್ಸನ್ ಪೆರೇರಾ, ಸೆರಿಟನ್ ಫೆರ್ನಾಂಡಿಸ್, ಇವಾನ್ ಗೊನ್ಜಾಲೆಜ್, ಐಬಾನ್ ಡೊಹ್ಲಿಂಗ್, ಅಲ್ಬರ್ಟೊ ನೊಗುರಾ, ಅಲೆಕ್ಸಾಂಡರ್ ಜೆಸುರಾಜ್, ಎಡು ಬೆಡಿಯಾ (ನಾಯಕ), ಗ್ಲಾನ್ ಮಾರ್ಟಿನ್ಸ್, ಜಾರ್ಜ್ ಒರ್ಟಿಜ್ ಮತ್ತು ದೇವೇಂದ್ರ ಮುರ್ಗಾಂವ್ಕರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications