Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಚೆನ್ನೈಯಿನ್ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿದ ಮುಂಬೈ ಸಿಟಿ ಎಫ್‌ಸಿ

ISL 2021-22: match 83 MCFC vs CFC, Mumbai City FC match won by 1-0 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 83ನೇ ಪಂದ್ಯ ನಡೆದಿದ್ದು ಈ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಮುಂಬೈ ಸಿಟಿ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ 1-0 ಅಂತರದಿಂದ ರೋಚಕವಾಗಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಒಂದು ಸ್ಥಾನಗಳ ಏರಿಕೆ ಕಂಡಿದೆ.

ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ ಗೋಲು ಗಳಿಸಲು ವಿಫಲವಾಗಿದ್ದವು. ದ್ವಿತಿಯಾರ್ಧದ ಬಹುತೇಕ ಅವಧಿ ಕೂಡ ಹೀಗೆಯೇ ಸಾಗಿತ್ತು. ಆದರೆ ಪಂದ್ಯದ ನಿಗದಿತ ಅವಧಿಯ ಮುಕ್ತಾಯಕ್ಕೆ ಕೇವಲ 5 ನಿಮಿಷಗಳಿರುವಾಗ ಮುಂಬೂ ಸಿಟಿ ಎಫ್‌ಸಿ ಪರ ಗೋಲು ದಾಖಲಾಯಿತು. ಮುಂಬೈ ಸಿಟಿ ಎಫ್‌ಸಿ ತಂಡದ ವಿಕ್ರಮ್ ಪ್ರತಾಪ್ ಸಿಂಗ್ ಪಂದ್ಯದ ಏಕೈಕ ಗೋಲು ಸಿಡಿಸುವಲ್ಲಿ ಯಶಸ್ವಿಯಾಗಿದ್ದರು. ಅದಾದ ಬಳಿಕವೂ ಚೆನ್ನೈಯಿನ್ ತಂಡ ಗೋಲು ಗಳಿಸಲು ಸಾಧ್ಯವಾಗಲೇ ಇಲ್ಲ. ಹಾಗಾಗಿ ಮುಂಬೈ ಸಿಟಿ ಎಫ್‌ಸಿ ತಂಡ ರೋಚಕ ಗೆಲುವು ಸಾಧಿಸಿದೆ.

ಈ ಗೆಲುವಿನಿನೊಂದಿಗೆ ಮುಂಬೈ ಸಿಟಿ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಒಂದು ಸ್ಥಾನಗಳ ಏರಿಕೆ ಕಂಡಿದೆ. 6ನೇ ಸ್ಥಾನದಲ್ಲಿದ್ದ ತಂಡ ಐದನೇ ಸ್ಥಾನಕ್ಕೆ ಜಿಗಿದಿದೆ. 5ನೇ ಸ್ಥಾನದಲ್ಲಿದ್ದ ಎಟಿಕೆ ಮೋಹನ್ ಬಾಗನ್ 6ನೇ ಸ್ಥಾನಕ್ಕೆ ಕುಸಿದಿದೆ. ಮುಂಬೈ ಸಿಟಿ ಎಫ್‌ಸಿ ತಂಡ ಈವರೆಗೆ 14 ಪಂದ್ಯಗಳನ್ನು ಆಡಿದ್ದು 6 ಗೆಲುವು ಸಾಧಿಸಿದರೆ 4 ಡ್ರಾ ಹಾಗೂ 4 ಸೋಲು ಅನುಭವಿಸಿದೆ.

ಈ ಗೆಲುವಿನಿನೊಂದಿಗೆ ಮುಂಬೈ ಸಿಟಿ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಒಂದು ಸ್ಥಾನಗಳ ಏರಿಕೆ ಕಂಡಿದೆ. 6ನೇ ಸ್ಥಾನದಲ್ಲಿದ್ದ ತಂಡ ಐದನೇ ಸ್ಥಾನಕ್ಕೆ ಜಿಗಿದಿದೆ. 5ನೇ ಸ್ಥಾನದಲ್ಲಿದ್ದ ಎಟಿಕೆ ಮೋಹನ್ ಬಾಗನ್ 6ನೇ ಸ್ಥಾನಕ್ಕೆ ಕುಸಿದಿದೆ. ಮುಂಬೈ ಸಿಟಿ ಎಫ್‌ಸಿ ತಂಡ ಈವರೆಗೆ 14 ಪಂದ್ಯಗಳನ್ನು ಆಡಿದ್ದು 6 ಗೆಲುವು ಸಾಧಿಸಿದರೆ 4 ಡ್ರಾ ಹಾಗೂ 4 ಸೋಲು ಅನುಭವಿಸಿದೆ.

ಇನ್ನು ಚೆನ್ನೈಯಿನ್ ಎಫ್‌ಸಿ ತಂಡ ಈ ಪಂದ್ಯದಲ್ಲಿ ಸೋಲಿನ ಹೊರತಾಗಿಯೂ ಅಂಕಪಟ್ಟಿಯಲ್ಲಿ ಇದ್ದ ಸ್ಥಾನದಲ್ಲಿಯೇ ಮುಂದಿವರಿದಿದೆ. 15 ಪಂದ್ಯಗಳನ್ನು ಆಡಿರುವ ಚೆನ್ನೈಯಿನ್ ಎಫ್‌ಸಿ ಈವರೆಗೆ 5 ಗೆಲುವು ಸಾಧಿಸಿದ್ದು 4 ಡ್ರಾ ಹಾಗೂ 6 ಸೋಲು ಅನುಭವಿಸಿದೆ. ಈ ಮೂಲಕ 7ನೇ ಸ್ಥಾನದಲ್ಲಿಯೇ ಮುಂದುವರಿದಿದೆ.

ಇನ್ನು ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೈದರಾಬಾದ್ ಎಫ್‌ಸಿ ಅಗ್ರ ಸ್ಥಾನದಲ್ಲಿದ್ದು ಕೇರಳ ಬ್ಲಾಸ್ಟರ್ಸ್ ತಂಡ ಎರಡನೇ ಸ್ಥಾನದಲ್ಲಿದೆ. ಇನ್ನು ಬೆಂಗಳೂರು ಎಫ್‌ಸಿ ತಮಡ ಮೂರನೇ ಸ್ಥಾನದಲ್ಲಿದ್ದು ಜೆಮ್ಶೆಡ್ಪುರ ಎಫ್‌ಸಿ ನಾಲ್ಕನೇ ಸ್ಥಾನದಲ್ಲಿದೆ.

ಮುಂಬೈ ಸಿಟಿ ಎಫ್‌ಸಿ: ಮೊಹಮದ್ ನವಾಜ್ (ಗೋಲ್‌ ಕೀಪರ್), ರಾಹುಲ್ ಭೇಕೆ, ಮೆಹ್ತಾಬ್ ಸಿಂಗ್, ಕ್ಯಾಸಿಯೊ ಗೇಬ್ರಿಯಲ್, ಅಹ್ಮದ್ ಜಹೌಹ್, ಇಗೊರ್ ಅಂಗುಲೋ, ಮೌರ್ತಡಾ ಫಾಲ್ (ನಾಯಕ), ಬಿಪಿನ್ ಸಿಂಗ್, ಲಾಲಿಯನ್ಜುವಾಲಾ ಚಾಂಗ್ಟೆ, ಲಾಲೆಂಗ್ಮಾವಿಯಾ, ಮಂದರ್ ದೇಸಾಯಿ

ಚೆನ್ನೈಯಿನ್ ಎಫ್‌ಸಿ: ದೇಬ್ಜಿತ್ ಮಜುಂದರ್ (ಗೋಲ್‌ ಕೀಪರ್), ನೆರಿಜಸ್ ವಲ್ಸ್ಕಿಸ್, ನಿಂಥೋಯಿಂಗನ್ಬಾ ಮೀಟೆಲ್, ಅನಿರುದ್ಧ್ ಥಾಪಾ (ನಾಯಕ), ಏರಿಯಲ್ ಬೊರಿಸಿಯುಕ್, ಜೆರ್ರಿ ಲಾಲ್ರಿಂಜುವಲಾ, ನಾರಾಯಣ್ ದಾಸ್, ಸ್ಲಾವ್ಕೊ ದಮ್ಜಾನೋವಿಕ್, ಜರ್ಮನ್‌ಪ್ರೀತ್ ಸಿಂಗ್, ಸುಹೇಲ್ ಪಾಶಾ, ಲುಕಾಸ್ಜ್ ಗಿಕಿವಿಚ್.

Story first published: Monday, February 7, 2022, 0:13 [IST]
Other articles published on Feb 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+