For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಎಟಿಕೆ ಮೋಹನ್ ಬಾಗನ್

ISL 2021-22: match 85 ATKMB vs HFC, Hyderabad FC match won by 2-1 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 85ನೇ ಮುಖಾಮುಖಿ ನಡೆದಿದ್ದು ಈ ಪಂದ್ಯದಲ್ಲಿ ಹೈದರಾಬಾದ್ ಎಪ್‌ಸಿ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳು ಸೆಣೆಸಾಡಿದೆ. ಈ ಪಂದ್ಯದಲ್ಲಿ ಎಟಿಕೆ ಮೋಹನ್ ತಂಡ 2-1 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಎಟಿಕೆ ಮೋಹನ್ ಬಾಗನ್ ತಂಡ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದುಕೊಂಡಿದೆ.

ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ಸಂಪೂರ್ಣವಾಗಿ ವಿಫಲವಾಗಿದ್ದವು. ಹೀಗಾಗಿ ಗೋಲಿಲ್ಲದೆ ಮೊದಲಾರ್ಧ ಅಂತ್ಯವಾಗಿತ್ತು. ಆದರೆ ದ್ವಿತಿಯಾರ್ಧದ ಹೋರಾಟ ತೀವ್ರ ಪೈಪೋಟಿಯಿಂದ ಕೂಡಿತ್ತು. ಅದರಲ್ಲೂ ಎಟಿಕೆ ಮೋಹನ್ ಬಾಗನ್ ತಂಡದ ಆಟಗಾರರು ಪಂದ್ಯದಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

ಪಂದ್ಯದ 56ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಾಗಿತ್ತು. ಲಿಸ್ಟನ್ ಕೊಲಾಕೋ ಈ ಗೋಲು ಗಳಿಸುವ ಮೂಲಕ ಎಟಿಕೆ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು. ಅದಾದ ಮೂರನೇ ನಿಮಿಷದಲ್ಲಿಯೇ ಎಟಿಕೆ ಮೋಹನ್ ಬಾಗನ್ ಮತ್ತೊಂದು ಗೋಲು ಗಳಿಸಲು ಯಶಸ್ವಿಯಾಗಿತ್ತು. ಮನ್ವಿರ್ ಸಿಂಗ್ ಅವರಿಂದ ಈ ಗೋಲು ದಾಖಲಾಗಿತ್ತು. ಈ ಮೂಲಕ ಎಟಿಕೆ ಮೋಹನ್ ಬಾಗನ್ 2-0 ಅಂತರದ ಮುನ್ನಡೆಯನ್ನು ಸಾಧಿಸಿತು.

ಅದಾದ ಕೆಲವೇ ನಿಮಿಷಗಳ ಅಂತರದಲ್ಲಿ ಹೈದರಾಬಾದ್ ಎಫ್‌ಸಿ ಕೂಡ ತನ್ನ ಮೊದಲ ಗೋಲು ಗಳಿಸಿತು. ಪಂದ್ಯದ 67ನೇ ನಿಮಿಷದಲ್ಲಿ ಜೋಯೆಲ್ ಜೋಸೆಫ್ ಹೈದರಾಬಾದ್ ಪರವಾಗಿ ಮೊದಲ ಹಾಗೂ ಪಂದ್ಯದ ಎಕೈಕ ಗೋಲು ಸಿಡಿಸಿದರು. ಅದಾದ ಬಳಿಕ ಹೈದರಾಬಾದ್ ತಂಡ ಗೋಲು ಗಳಿಸಲು ವಿಫಲವಾಯಿತು. ಹೀಗಾಗಿ ಪಂದ್ಯದ ಪೂರ್ಣಾವಧಿ ಅಂತ್ಯವಾಗುವ ವೇಳೆಗೆ ಎಟಿಕೆ ಮೋಈಹನ್ ಬಾಗನ್ 2-1 ಅಂತರದ ಗೆಲುವು ಸಾಧಿಸಿತು.

ಇನ್ನು ಈ ಗೆಲುವಿನೊಂದಿಗೆ ಎಟಿಕೆ ಮೋಹನ್ ಬಾಗನ್ ತಂಡ ಮತ್ತೊಮ್ಮೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಜೆಮ್ಶೆಡ್ಪುರ ಎಫ್‌ಸಿ ಅಗ್ರ ನಾಲ್ಕರಿಂದ ಕುಸಿತ ಕಂಡಿದ್ದು ಮುಂಬೈ ಸಿಟಿ ಎಫ್‌ಸಿ 6ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಈ ಪಂದ್ಯದಲ್ಲಿನ ಸೋಲಿನ ಹೊರತಾಗಿಯೂ ಹೈದರಾಬಾದ್ ಎಫ್‌ಸಿ ಅಗ್ರ ಸ್ಥಾನದಲ್ಲಿಯೇ ಮುಂದುವರಿದಿದೆ.

ಎಟಿಕೆ ಮೋಹನ್ ಬಾಗನ್: ಅಮರಿಂದರ್ ಸಿಂಗ್ (ಗೋಲ್‌ ಕೀಪರ್), ತಿರಿ, ಸುಭಾಸಿಶ್ ಬೋಸ್, ಪ್ರೀತಮ್ ಕೋಟಾಲ್ (ನಾಯಕ), ಪ್ರಬೀರ್ ದಾಸ್, ಕಾರ್ಲ್ ಮೆಕ್‌ಹಗ್, ಲೆನ್ನಿ ರಾಡ್ರಿಗಸ್, ಡೇವಿಡ್ ವಿಲಿಯಮ್ಸ್, ಹ್ಯೂಗೋ ಬೌಮಸ್, ಮನ್ವಿರ್ ಸಿಂಗ್, ಲಿಸ್ಟನ್ ಕೊಲಾಕೊ.

ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ ಕೀಪರ್), ಚಿಂಗ್ಲೆನ್ಸನಾ ಸಿಂಗ್, ಜುವಾನನ್, ಆಕಾಶ್ ಮಿಶ್ರಾ, ಆಶಿಶ್ ರೈ, ಜೋವೊ ವಿಕ್ಟರ್(ನಾಯಕ), ಅನಿಕೇತ್ ಜಾಧವ್, ಸೌವಿಕ್ ಚಕ್ರಬರ್ತಿ, ನಿಖಿಲ್ ಪೂಜಾರಿ, ಜೋಯಲ್ ಚಿಯಾನೀಸ್, ಬಾರ್ತಲೋಮಿವ್ ಓಗ್ಬೆಚೆ.

Story first published: Tuesday, February 8, 2022, 22:09 [IST]
Other articles published on Feb 8, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+