ಐಎಸ್‌ಎಲ್: ಚೆನ್ನೈಯಿನ್ ವಿರುದ್ಧ ಗೋಲಿನ ಸುರಿಮಳೆಗೈಯ್ದ ಎಫ್‌ಸಿ ಗೋವಾ

ಇಂಡಿಯನ್ ಸೂಪರ್ ಲೀಗ್‌ನ 86ನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಎಫ್‌ಸಿ ಗೋವಾ ತಂಡಗಳು ಮುಖಾಮುಖಿಯಾಗಿದೆ. ಈ ಮುಖಾಮುಖಿಯಲ್ಲಿ ಎಫ್‌ಸಿ ಗೋವಾ ಅಮೋಘ ಪ್ರದರ್ಶನವನ್ನು ನೀಡಿದ್ದು ಗೋಲಿನ ಮೇಲೆ ಗೋಲು ಗಳಿಸಿದೆ. ಈ ಮೂಲಕ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ಬರೊಬ್ಬರಿ 5-0 ಅಂತರದ ಗೆಲುವನ್ನು ಎಫ್‌ಸಿ ಗೋವಾ ಪಡೆದುಕೊಂಡಿದೆ. ಈ ಗೆಲುವಿನ ಹೊರತಾಗಿಯೂ ಚೆನ್ನೈಯಿನ್ ಎಫ್‌ಸಿ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಈ ಪಂದ್ಯದಲ್ಲಿ ಆರಂಭದಿಂದಲೇ ಎಫ್‌ಸಿ ಗೋವಾ ಮೇಲುಗೈ ಸಾಧಿಸುತ್ತಾ ಸಾಗಿತ್ತು. ಪಂದ್ಯ ಆರಂಭವಾದ ಆರನೇ ನಿಮಿಷದಲ್ಲಿಯೇ ಎಫ್‌ಸಿ ಗೋವಾ ಪರ ಮೊದಲ ಗೋಲು ದಾಖಲಾಗಿತ್ತು. ಮಕನ್ ಚೋಥೆ ಗೋವಾ ಪರ ಮೊದಲ ಗೋಲು ಗಳಿಸುವ ಮೂಲಕ ತಂಡಕ್ಕೆ ಶುಭಾರಂಭ ಮಾಡಿದರು. ಅದಾದ ಬಳಿಕ ಪಂದ್ಯದ 20ನೇ ನಿಮಿಷದಲ್ಲಿ ಎಫ್‌ಸಿ ಗೋವಾ ಪರವಾಗಿ ಎರಡನೇ ಗೋಲು ದಾಖಲಾಗಿತ್ತು. ಜಾರ್ಜ್ ಒರ್ಟಿಜ್ ತಂಡಕ್ಕೆ ಎರಡನೇ ಬಾರಿ ಮುನ್ನಡೆಯನ್ನು ಒದಗಿಸುವಲ್ಲಿ ಯಶಸ್ವಿಯಾದರು.
ನಂತರ ಪಂದ್ಯದ 41ನೇ ನಿಮಿಷದಲ್ಲಿ ಎಫ್‌ಸಿ ಗೋವಾ ತಂಡದ ಪರವಾಗಿ 3ನೇ ಗೋಲು ದಾಖಲಾಗಿತ್ತು. ಈ ಗೋಲು ಕೂಡ ಜಾರ್ಜ್ ಒರ್ಟಿಜ್ ಅವರ ಕಾಲ್ಚಳಕದಿಂದ ಸಿಡಿದಿತ್ತು. ಅದಾದ ಬಳಿಕ ಮೊದಲಾರ್ಧದ ಆಟ ಮುಕ್ತಾಯವಾಗುವ ವೇಳೆಗೆ ಎಫ್‌ಸಿ ಗೋವಾ ಪರವಾಗಿ ಮತ್ತೊಂದು ಗೋಲು ಸಿಡಿದಿತ್ತು. ಇದನ್ನು ಚೆನ್ನೈಯಿನ್ ತಂಡದ ನಾರಾಯಣ್ ದಾಸ್ ಅವರೇ ಗೋಲು ಪೋಸ್ಟಿನ ಒಳಗೆ ತಳ್ಳಿದ್ದರು. ತಡೆಯಲು ಯತ್ನಿಸಿದ್ದ ಚೆಂಡು ಗೋಲು ಪೋಸ್ಟ್‌ನ ಒಳಗೆ ಹೋದ ಪರಿಣಾಮವಾಗಿ ಎದುರಾಳಿ ತಂಡಕ್ಕೆ ಗೋಲು ಉಡುಗೊರೆಯಾಗಿ ದೊರೆತಿತ್ತು. ಈ ಮೂಲಕ ಮೊದಲಾರ್ಧದ ಅಂತ್ಯದ ವೇಳೆಗೆ ಎಫ್‌ಸಿ ಗೋವಾ 4-0 ಅಂತರದ ಭರ್ಜರಿ ಮುನ್ನಡೆ ಸಾಧಿಸಿತ್ತು.
ನಂತರ ದ್ವಿತಿಯಾರ್ಧದಲ್ಲಿಯೂ ಎಫ್‌ಸಿ ಗೋವಾ ಪರ ಜಾರ್ಜ್ ಒರ್ಟಿಜ್ ಅಬ್ಬರಿಸಿದ್ದರು. ಪಂದ್ಯದ 53ನೇ ನಿಮಿಷದಲ್ಲಿ ಜಾರ್ಜ್ ಒರ್ಟಿಜ್ ತನ್ನ ಹ್ಯಾಟ್ರಿಕ್ ಗೋಲು ಸಿಡಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಎಫ್‌ಸಿ ಗೋವಾ ಪಂದ್ಯದಲ್ಲಿ 5ನೇ ಗೋಲು ಬಾರಿಸಿತ್ತು. ಅದಾದ ಬಳಿಕ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಗಿದ್ದವು. ಅಂತಿಮವಾಗಿ ಪಂದ್ಯದಲ್ಲಿ ಎಫ್‌ಸಿ ಗೋವಾ 5-0 ಅಂತರದ ಭಾರೀ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಇನ್ನು ಗುರುವಾರದ ಈ ಫಲಿತಾಂಶದಿಂದಾಗಿ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಗೆಲುವಿನ ಹೊರತಾಗಿಉಯೂ ಎಫ್‌ಸಿ ಗೋವಾ 9ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಇನ್ನು ಚೆನ್ನೈಯಿನ್ ಎಫ್‌ಸಿ ಕೂಡ 8ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಹೈದರಾಬಾದ್ ಎಫ್‌ಸಿ, ಕೇರಳ ಬ್ಲಾಸ್ಟರ್ಸ್, ಬೆಂಗಳೂರು ಎಫ್‌ಸಿ ಹಾಗೂ ಎಟಿಕೆ ಮೀಹನ್ ಬಾಗನ್ ಅಗ್ರ ನಾಲ್ಕರಲ್ಲಿರುವ ತಂಡಗಳಾಗಿದೆ.
ಎಫ್‌ಸಿ ಗೋವಾ: ಧೀರಜ್ ಮೊಯಿರಾಂಗ್ಥೆಮ್ (ಗೋಲ್ ಕೀಪರ್), ಸೆರಿಟನ್ ಫೆರ್ನಾಂಡಿಸ್, ಇವಾನ್ ಗೊನ್ಜಾಲೆಜ್ (ನಾಯಕ), ಅನ್ವರ್ ಅಲಿ, ಐಬನ್ ಡೊಹ್ಲಿಂಗ್, ಪ್ರಿನ್ಸ್‌ಟನ್ ರೆಬೆಲ್ಲೊ, ಎಡು ಬೆಡಿಯಾ, ಮಕನ್ ಚೋಥೆ, ಆಲ್ಬರ್ಟೊ ನೊಗುರಾ, ಬ್ರಾಂಡನ್ ಫೆರ್ನಾಂಡಿಸ್, ಜಾರ್ಜ್ ಒರ್ಟಿಜ್.
ಚೆನ್ನೈಯಿನ್ ಎಫ್‌ಸಿ: ದೇಬ್ಜಿತ್ ಮಜುಂದಾರ್ (ಗೋಲ್ ಕೀಪರ್), ಜೆರ್ರಿ ಲಾಲ್ರಿಂಜುಲಾ, ದೀಪಕ್ ದೇವ್ರಾನಿ, ಸ್ಲಾವ್ಕೊ ದಮ್ಜಾನೋವಿಕ್, ನಾರಾಯಣ್ ದಾಸ್, ನಿಂಥೋಯಿಂಗನ್ಬಾ ಮೀಟೆಲ್, ಅನಿರುದ್ಧ್ ಥಾಪಾ (ನಾಯಕ), ಏರಿಯಲ್ ಬೊರಿಸಿಯುಕ್, ಜರ್ಮನ್ಪ್ರೀತ್ ಸಿಂಗ್, ಮಿರ್ಲಾನ್ ಮುರ್ಝೇವ್, ಲುಕಾಸ್ಜ್ ಗಿಕಿವಿಚ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications