ಐಎಸ್‌ಎಲ್: ಹೈದರಾಬಾದ್ ಎಫ್‌ಸಿ ವಿರುದ್ಧ ಸೋಲು ಅನುಭವಿಸಿದ ಬಿಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ನ 88ನೇ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಹಾಗೂ ಬೆಂಗಳೂರು ಎಫ್‌ಸಿ ತಂಡಗಳ ಮಧ್ಯೆ ಹಣಾಹಣಿ ನಡೆದಿದೆ. ಈ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಬೆಂಗಳೂರು ತಂಡವನ್ನು 2-1 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಹೈದರಾಬಾದ್ ಎಫ್‌ಸಿ ಅಗ್ರ ಸ್ಥಾನದಲ್ಲಿಯೇ ಮುಂದುವರಿದಿದೆ.
ಈ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಆರಂಭದಿಂದಲೇ ಪಂದ್ಯದಲ್ಲಿ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಮೊದಲಾರ್ಧದಲ್ಲಿಯೇ ಹೈದರಾಬಾದ್ ಎಫ್‌ಸಿ ಪರವಾಗಿ ಎರಡು ಗೋಲುಗಳು ಸಿಡಿದಿದ್ದವು. ಪಂದ್ಯ ಆರಂಭವಾದ 16ನೇ ನಿಮಿಷದಲ್ಲಿ ಹೈದರಾಬಾದ್ ಮೊದಲ ಗೋಲು ಸಿಡಿಸಲು ಯಶಸ್ವಿಯಾಗಿತ್ತು. ಜೇವಿಯರ್ ಸಿವೆರಿಯೊ ಮೊದಲ ಗೋಲು ಸಿಡಿಸಿ ಆರಂಭೀಕ ಮುನ್ನಡೆಯನ್ನು ಒದಗಿಸಿದ್ದರು.
ಅದಾದ ಬಳಿಕ ಪಂದ್ಯ ಆರಂಭವಾದ 30ನೇ ನಿಮಿಷದಲ್ಲಿ ಹೈದರಾಬಾದ್ ಎಪ್ಸಿ ಪರವಾಗಿ ಎರಡನೇ ಗೋಲು ದಾಖಲಾಗಿತ್ತು. ನಾಯಕ ಜೋವೊ ವಿಕ್ಟರ್ ಈ ಗೋಲು ಸಿಡಿಸಿದ್ದರು. ಈ ಮೂಲಕ ಹಯದರಾಬಾದ್ ಎಫ್‌ಸಿ ಅಂತರವನ್ನು 2-0ಗೆ ಎರಿಸಿಕೊಂಡಿತ್ತು. ಅದಾದ ಬಳಿಕ ಬಿಎಫ್‌ಸಿ ಕೂಡ ಸಾಕಷ್ಟು ಪ್ರಯತ್ನ ಪಟ್ಟಿತಾದರೂ ಅದರಲ್ಲಿ ವಿಫಲವಾಗಿತ್ತು. ಮೊದಲಾರ್ಧದಲ್ಲಿ ಬಿಎಫ್‌ಸಿ ಯಾವುದೇ ಗೋಲಿಲ್ಲದೆ ಮುಗಿಸಿತ್ತು.
ಇನ್ನು ದ್ವಿತಿಯಾರ್ಧದಲ್ಲಿಯೂ ಬಹುತೇಕ ಅವಧಿಯಲ್ಲಿ ಬಿಎಫ್‌ಸಿ ಗೋಲು ಗಳಿಸಲು ಸಂಪೂರ್ಣವಾಗಿ ವಿಪಲವಾಗಿತ್ತು. ಆದರೆ ಪಂದ್ಯದ 87ನೇ ನಿಮಿಷದಲ್ಲಿ ಬಿಎಫ್‌ಸಿ ಕೂಡ ಒಂದು ಗೋಲಿ ಸಿಡಿಸಲು ಯಶಸ್ವಿಯಾಯಿತು. ನಾಯಕ ಸುನಿಲ್ ಛೇಟ್ರಿ ಈ ಗೋಲು ಸಿಡಿಸಿದ್ದರು. ಆದರೆ ಇದರಿಂದಾಗಿ ಬಿಎಫ್‌ಸಿಗೆ ಹೆಚ್ಚಿನ ಲಾಭವಾಗಲಿಲ್ಲ. ಸೋಲಿನ ಅಂತರ 2-1ಕ್ಕೆ ಇಳಿದಿತ್ತು.
ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ಕೀಪರ್), ಚಿಂಗ್ಲೆನ್ಸನಾ ಸಿಂಗ್, ಜುವಾನನ್, ಜೋವೊ ವಿಕ್ಟರ್ (ನಾಯಕ), ಬಾರ್ತಲೋಮಿವ್ ಓಗ್ಬೆಚೆ, ಸೌವಿಕ್ ಚಕ್ರಬರ್ತಿ, ರೋಹಿತ್ ದಾನು, ನಿಖಿಲ್ ಪೂಜಾರಿ, ನಿಮ್ ದೋರ್ಜಿ, ಆಕಾಶ್ ಮಿಶ್ರಾ, ಜೇವಿಯರ್ ಸಿವೆರಿಯೊ
ಬೆಂಗಳೂರು ಎಫ್‌ಸಿ: ಗುರುಪ್ರೀತ್ ಸಂಧು (ಗೋಲ್ ಕೀಪರ್), ಪ್ರತೀಕ್ ಚೌಧರಿ, ಅಲನ್ ಕೋಸ್ಟಾ, ಬ್ರೂನೋ ಸಿಲ್ವಾ, ಸುರೇಶ್ ವಾಂಗ್ಜಮ್, ಪ್ರಿನ್ಸ್ ಇಬಾರಾ, ಸುನಿಲ್ ಛೆಟ್ರಿ (ನಾಯಕ), ಡ್ಯಾನಿಶ್ ಫಾರೂಕ್, ಕ್ಲೀಟನ್ ಸಿಲ್ವಾ, ಪರಾಗ್ ಶ್ರೀವಾಸ್, ರೋಷನ್ ನೌರೆಮ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications