
ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮಂಗಳವಾರ 92ನೇ ಮುಖಾಮುಖಿ ನಡೆದಿದ್ದು ಈ ಪಂದ್ಯದಲ್ಲಿ ಎಫ್‌ಸಿ ಗೋವಾ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಎಟಿಕೆ ಮೋಹನ್ ಭಾಗನ್ ಎಫ್‌ಸಿ ಗೋವಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಎಟಿಕೆ ಮೋಹನ್ ಬಾಗನ್ ತಂಡ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
ಈ ಪಂದ್ಯದಲ್ಲಿ ಎಟಿಕೆ ಮೋಹನ್ ಭಾಗನ್ ತಂಡ ಆರಂಭದಿಂದಲೇ ಮೇಲುಗೈ ಸಾಧಿಸಲು ಯಶಸ್ವಿಯಾಗಿತ್ತು. ಹೀಗಾಗಿ ಕೊನೇಯವರೆಗೂ ಮೇಲುಗೈ ಮುಂದುವರಿಸಿದ ಎಟಿಕೆ ಮೋಹನ್ ಬಾಗನ್ ಭರ್ಜರಿ 2-0 ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಂದ್ಯ ಆರಂಭವಾದ 3ನೇ ನಿಮಿಷದಲ್ಲಿಯೇ ಎಟಿಕೆ ಮೋಹನ್ ಭಾಗನ್ ಪಡೆ ಮೊದಲ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಮನ್ವಿರ್ ಸಿಂಗ್ ಗೋಲು ಸಿಡಿಸುವ ಮೂಲಕ ತಂಡದ ಖಾತೆಯಲ್ಲಿ ತೆರೆದಿದ್ದರು. ಈ ಮುನ್ನಡೆಯನ್ನು ಮೊದಲಾರ್ಧದುದ್ದಕ್ಕೂ ಕೊಂಡಿಯ್ಯುವಲ್ಲಿ ಯಶಸ್ವಿಯಾಗಿತ್ತು.
ಇನ್ನು ದ್ವಿತಿಯಾರ್ಧದ ಆರಂಭದಲ್ಲಿಯೇ ಮತ್ತೊಂದು ಗೋಲು ಎಟಿಕೆ ಮೋಹನ್ ಭಾಗಬ್ ಪರ ಸಿಡಿದಿತ್ತು. ಈ ಗೋಲು ಕೂಡ ಮನ್ವಿರ್ ಸಿಂಗ್ ಅವರಿಂದಲೇ ದಾಖಲಾಗಿತ್ತು. ಈ ಮೂಲಕ ಎಟಿಕೆ ಮೋಹನ್ ಭಾಗನ್ ತಂಡ ಮುನ್ನಡೆಯನ್ನು ಹೆಚ್ಚಿಸಿಕೊಂಡಿತ್ತು. ಎದುರಾಳಿ ಎಫ್‌ಸಿ ಗೋವಾ ತಂಡಕ್ಕೆ ಅಂತಿಮ ಹಂತದವರೆಗೂ ಗೋಲುಗಳಿಸುವ ಅವಕಾಶವನ್ನು ಮೋಹನ್ ಬಾಗನ್ ಪಡೆ ನೀಡಲೇ ಇಲ್ಲ. ಹೀಗಾಗಿ 2-0 ಅಂತರದಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ.
ಇನ್ನು ಈ ಫಲಿತಾಂಶದಿಂದ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎಟಿಕೆ ಮೋಹನ್ ಭಾಗನ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಭದ್ರವಾಗಿ ಮುಂದುವರಿದಿದೆ. ಎಫ್‌ಸಿ ಗೋವಾ ಕೂಡ 9ನೇ ಸ್ಥಾನದಲ್ಲಿಯೇ ಮುಂದುವರಿದಿದೆ.
ಎಟಿಕೆ ಮೋಹನ್ ಬಾಗನ್: ಅಮರಿಂದರ್ ಸಿಂಗ್ (ಗೋಲ್‌ಕೀಪರ್), ಪ್ರಬೀರ್ ದಾಸ್, ಸಂದೇಶ್ ಜಿಂಗನ್, ತಿರಿ, ಸುಭಾಸಿಶ್ ಬೋಸ್, ಪ್ರೀತಮ್ ಕೋಟಾಲ್ (ನಾಯಕ), ಲೆನ್ನಿ ರೋಡ್ರಿಗಸ್, ಜೋನಿ ಕೌಕೊ, ದೀಪಕ್ ತಂಗ್ರಿ, ಲಿಸ್ಟನ್ ಕೊಲಾಕೊ ಮತ್ತು ಮನ್ವಿರ್ ಸಿಂಗ್.
ಎಫ್‌ಸಿ ಗೋವಾ: ಧೀರಜ್ ಮೊಯಿರಾಂಗ್ಥೆಮ್ (ಗೋಲ್ ಕೀಪರ್), ಸೆರಿಟನ್ ಫೆರ್ನಾಂಡಿಸ್, ಡೈಲನ್ ಫಾಕ್ಸ್, ಅನ್ವರ್ ಅಲಿ, ಇವಾನ್ ಗೊನ್ಜಾಲೆಜ್, ಪ್ರಿನ್ಸ್‌ಟನ್ ರೆಬೆಲ್ಲೊ, ಗ್ಲಾನ್ ಮಾರ್ಟಿನ್ಸ್, ಮಕನ್ ಚೋಥೆ, ಆಲ್ಬರ್ಟೊ ನೊಗುರಾ, ಬ್ರಾಂಡನ್ ಫೆರ್ನಾಂಡಿಸ್ (ನಾಯಕ) ಮತ್ತು ಜಾರ್ಜ್ ಒರ್ಟಿಜ್.