For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಒಡಿಶಾ ಎಫ್‌ಸಿ vs ಚೆನ್ನೈಯಿನ್ ಎಫ್‌ಸಿ ಪಂದ್ಯ ಡ್ರಾದಲ್ಲಿ ಅಂತ್ಯ

ISL 2021-22: match 93 OFC vs CFC, match draw by 2-2 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇವತ್ತು 93ನೇ ಪಂದ್ಯ ಮುಕ್ತಾಯವಾಗಿದೆ. ಈ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಹಾಗೂ ಚೆನ್ನೈಯಿನ್ ಎಫ್‌ಸಿತಂಡಗಳು ಮುಖಾಮುಖಿಯಾಗಿದ್ದಯ ಎರಡು ತಂಡಗಳು ಕೂಡ ಸಮಬಲದ ಪ್ರದರ್ಶನ ನೀಡಿ ಪಂದ್ಯ ಡ್ರಾ ಫಲಿತಾಂಶವನ್ನು ಪಡೆದುಕೊಂಡಿದೆ. ಎರಡು ತಂಡಗಳು ಕೂಡ ಅದ್ಭುತ ಪ್ರದರ್ಶನ ನೀಡಿದ ಪರಿಣಾಮವಾಗಿ ತಲಾ 2 ಗೋಲು ಗಳಿಸಿ ಡ್ರಾ ಸಾಧಿಸಿದೆ.

ಪಂದ್ಯದ ಆರಂಭದಿಂದಲೇ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡುತ್ತಾ ಸಾಗಿದವು. ಪಂದ್ಯ ಆರಂಭವಾದ ಎರಡನೇ ನಿಮಿಷದಲ್ಲಿಯೇ ಚೆನ್ನೈಯಿನ್ ಎಫ್‌ಸಿ ಮೊದಲ ಗೋಲು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಆರಂಭಿಕ ಮೇಲುಗೈ ಸಾಧಿಸಿತ್ತು. ರಹೀಮ್ ಅಲಿ ಈ ಗೋಲು ಬಾರಿಸುವಲ್ಲಿ ಯಶಸ್ವಿಯಾಗಿದ್ದರು. ಅದಾದ ಬಳಿಕ ಪಂದ್ತದ 18ನೇ ನಿಮಿಷದಲ್ಲಿ ಒಡಿಶಾ ಎಫ್‌ಸಿ ಕೂಡ ಮೊದಲ ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಜೇವಿಯರ್ ಹೆರ್ನಾಂಡೆಜ್ ಈ ಗೋಲು ಸಿಡಿಸುವ ಮೂಲಕ ಪಂದ್ಯದಲ್ಲಿ ಸಮಬಲ ಸಾಧಿಸಲು ಕಾರಣವಾದರು. ಹೋಗಾಗಿ ಮೊದಲಾರ್ಧದ ಅಂತ್ಯದಲ್ಲಿ ಎರಡು ತಂಡಗಳು ಕೂಡ 1-1 ಅಂತರದಿಮದ ಸಮಬಲ ಸಾಧಿಸಿದ್ದವು.

ಇನ್ನು ದ್ವಿತೀಯಾರ್ಧದಲ್ಲಿಯೂ ಎರಡೂ ತಂಡಗಳು ಪೈಪೋಟಿ ಮುಂದುವರಿದಿತ್ತು. ಪಂದ್ಯದ 51ನೇ ನಿಮಿಷದಲ್ಲಿ ಒಡಿಶಾ ಎಫ್‌ಸಿ ಎರಡನೇ ಗೋಲು ಸಿಡಿಸಿ ಪಂದ್ಯದಲ್ಲಿ ಮೊದಲ ಬಾರಿಗೆ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಜೊನಾಥನ್ ಕ್ರಿಶ್ಚಿಯನ್ ಈ ಗೋಲು ಸಿಡಿಸಿ ಮಿಂಚಿದ್ದರು. ಅದಾದ ಬಳಿಕ ಪಂದ್ಯದ 69ನೇ ನಿಮಿಷದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಕೂಡ ಎರಡನೇ ಗೋಲು ಸಿಡಿಸುವಲ್ಲಿ ಯಶಸ್ವಿಯಾಯಿತು. ನೆರಿಜಸ್ ವಾಲ್ಸ್ಕಿಸ್ ಈ ಗೋಲು ಸಿಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಗೋಲಿನ ಪರಿಣಾಮವಾಗಿ ಚೆನ್ನೈಯಿನ್ ಎಫ್‌ಸಿ ಕೂಡ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಅದಾದ ಬಳಿಕ ಎರಡು ತಂಡಗಳು ಕೂಡ ಗೋಲು ಗಳಿಸಲು ವಿಫಲವಾಗಿದೆ. ಹೀಗಾಗಿ ಪಂದ್ಯ ಡ್ರಾ ಫಲಿತಾಂಶದೊಂದಿಗೆ ಅಂತ್ಯವಾಗಿದೆ.

ಇನ್ನು ಇಂದಿನ ಈ ಡ್ರಾ ಫಲಿತಾಂಶದಿಂದಾಗಿ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಒಡಿಶಾ ಎಫ್‌ಸಿ ಹಾಗೂ ಚೆನ್ನೈಯಿನ್ ಎಫ್‌ಸಿ ತಂಡಗಳು ಕ್ರಮವಾಗಿ 7 ಹಾಗೂ 8ನೇ ಸ್ಥಾನದಲ್ಲಿ ಮುಂದುವರಿದಿದೆ. ಹೈದರಾಬಾದ್ ಎಫ್‌ಸಿ ತಂಡ ಅಗ್ರಸ್ಥಾನದಲ್ಲಿದ್ದು ಎಟಿಕೆ ಮೋಹನ್ ಬಾಗನ್ 2ನೇ ಸ್ಥಾನದಲ್ಲಿದೆ. ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡ ಮೂರನೇ ಸ್ಥಾನದಲ್ಲಿದ್ದು ಜೆಮ್ಶೆಡ್ಪುರ ಎಫ್‌ಸಿ ನಾಲ್ಕನೇ ಸ್ಥಾನದಲ್ಲಿದೆ. ಮುಂಬೈ ಸಿಟಿ ಎಫ್‌ಸಿ ಐದನೇ ಸ್ಥಾನದಲ್ಲಿದ್ದರೆ ಬೆಂಗಳೂರು ಎಫ್‌ಸಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಅಗ್ರ ನಾಲ್ಕರ ಸ್ಥಾನವನ್ನು ಮರಳಿ ಗಳಿಸಲು ಬೆಂಗಳೂರು ಎಫ್‌ಸಿ ತಂಡ ಸಾಕಷ್ಟು ಸವಾಲನ್ನು ಎದುರಿಸಬೇಕಿದೆ.

ಒಡಿಶಾ ಎಫ್‌ಸಿ: ಅರ್ಷದೀಪ್ ಸಿಂಗ್ (ಗೋಲ್‌ ಕೀಪರ್), ಹೆಕ್ಟರ್ ರಾಮಿರೆಜ್ (ನಾಯಕ), ಗೌರವ್ ಬೋರಾ, ಹೆಂಡ್ರಿ ಆಂಟೊನಾಯ್, ಸಾಹಿಲ್ ಪನ್ವಾರ್, ಐಸಾಕ್ ಚಕ್ಚುವಾಕ್, ತೊಯ್ಬಾ ಸಿಂಗ್, ಜೇವಿಯರ್ ಹೆರ್ನಾಂಡೆಜ್, ಜೊನಾಥಸ್ ಕ್ರಿಸ್ಟಿಯನ್, ಅರಿದೈ ಸೌರೆಜ್, ರಿಡೀಮ್ ಟ್ಲಾಂಗ್

ಚೆನ್ನೈಯಿನ್ ಎಫ್‌ಸಿ: ದೇಬ್ಜಿತ್ ಮಜುಂದಾರ್ (ಗೋಲ್‌ ಕೀಪರ್), ಸ್ಲಾವ್ಕೊ ದಮ್ಜಾನೋವಿಕ್, ದೀಪಕ್ ದೇವ್ರಾನಿ, ನಾರಾಯಣ್ ದಾಸ್, ನಿಂಥೋಯಿಂಗನ್ಬಾ ಮೀಟೆಲ್, ಅನಿರುದ್ಧ್ ಥಾಪಾ (ನಾಯಕ), ಏರಿಯಲ್ ಬೊರಿಸಿಯುಕ್, ವ್ಲಾಡಿಮಿರ್ ಕೋಮನ್, ರಹೀಮ್ ಅಲಿ, ನೆರಿಜಸ್ ವಾಲ್ಸ್ಕಿಸ್

Story first published: Wednesday, February 16, 2022, 23:42 [IST]
Other articles published on Feb 16, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+