Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ನಾರ್ಥ್‌ಈಸ್ಟ್ ಯುನೈಟೆಡ್ ವಿರುದ್ಧ ಆಘಾತಕಾರಿ ಸೋಲು ಕಂಡ ಬಿಎಫ್‌ಸಿ

ISL 2021-22: match 94 NEUFC vs BFC, NorthEast United FC won the match by 2-1 Highlights

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇವತ್ತು 94ನೇ ಮುಖಾಮುಖಿ ನಡೆದಿದ್ದು ಈ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡಕ್ಕೆ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಬೆಂಗಳುರು ಎಫ್‌ಸಿ ತಂಡ ನಾರ್ಥ್‌ಇಸ್ಟ್ ಯುನೈಟ್ ವಿರುದ್ಧ 1-2 ಗೋಲು ಗಳ ಅಂತರದ ಆಘಾತಕಾರಿ ಸೋಲು ಅನುಭವಿಸಿದೆ. ಈ ಮೂಲಕ ಅಗ್ರ ನಾಲ್ಕರಲ್ಲಿ ಮತ್ತೆ ಸ್ಥಾನಗಳಿಸುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಸಾಕಷ್ಟು ಪೈಪೋಟಿಯಿಂದ ಕೂಡಿದ್ದ ಮೊದಲಾರ್ಧದಲ್ಲಿ ಎರಡು ತಂಡಗಳು ಕೂಡ ಗೋಲು ಗಳಿಸಲು ಸಂಪೂರ್ಣವಾಗಿ ವಿಫಲವಾಗಿದ್ದವು. ಆದರೆ ಪಂದ್ಯದ 66ನೇ ನಿಮಿಷದಲ್ಲಿ ಬೆಂಗಳೂರು ಎಫ್‌ಸಿ ಪಂದ್ಯದ ಮೊದಲ ಗೋಲು ಗಳಿಸುವ ಮೂಲಕ ಮುನ್ನಡೆಯನ್ನು ಸಾಧಿಸಿತ್ತು. ಕ್ಲಿಟನ್ ಸಿಲ್ವಾ ಬಿಎಫ್‌ಸಿ ಪರ ಈ ಗೋಲು ಸಿಡಿಸಿ ಮುನ್ನಡರಗೆ ಕಾರಣವಾಗಿದ್ದರು. ಆದರೆ ಈ ಮುನ್ನಡೆಯನ್ನು ಹೆಚ್ಚು ಹೊತ್ತು ಕಾಯ್ದುಕೊಳ್ಳಲು ಬಿಎಫ್‌ಸಿ ವಿಫಲವಾಯ್ತು.

ಪಂದ್ಯದ 74ನೇ ನಿಮಿಷದಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡದ ಪರವಾಗಿ ಮೊದಲ ಗೋಲು ಸಿಡಿದಿತ್ತು. ದೇಶೋರ್ನ್ ಬ್ರೌನ್ ಈ ಗೋಲು ಸಿಡಿಸುವ ಮೂಲಕ ಪಂದ್ಯದಲ್ಲಿ ಸಮಬಲ ಸಾಧಿಸಲು ಕಾರಣವಾದರು. ಅದಾದ ಆರೇ ನಿಮಿಷದಲ್ಲಿ ನಾರ್ಥ್‌ ಈಸ್ಟ್ ಯುನೈಟೆಡ್ ಎಫ್‌ಸಿ ತಂಡ ಎರಡನೇ ಗೋಲು ಸಿಡಿಸುವಲ್ಲಿ ಯಶಸ್ವಿಯಾಗಿತ್ತು. ಲಾಲ್ಡನ್ಮಾವಿಯಾ ರಾಲ್ಟೆ ಈ ಗೋಲು ಸಿಡಿಸಿ ತಂಡದ ಮುನ್ನಡೆಗೆ ಕಾರಣವಾದರು. ಈ ಮುನ್ನಡೆಯನ್ನು ಅಂತಿಮ ಹಂತದವರೆಗೂ ಕಾಯ್ದುಕೊಳ್ಳುವಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ತಂಡ ಯಶಸ್ವಿಯಾಯಿತು. ಈ ಮೂಲಕ ಪಂದ್ಯದಲ್ಲಿ 2-1 ಅಂತರದ ಗೆಲುವು ದಾಖಲಿಸಿದೆ.

ಇನ್ನು ಈ ಗೆಲುವಿನೊಂದಿಗೆ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಟೂರ್ನಿ ಮೂರಮೇ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟೊಯಲ್ಲಿ ಅಂತಿಮ ಸ್ಥಾನದಿಂದ ಮೇಲಕ್ಕೇರಿದ್ದು 10ನೇ ಸ್ಥಾನವನ್ನು ಪಡೆದುಕೊಂಡಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ಕೊನೇಯ ಸ್ಥಾನದಲ್ಲಿದೆ. ಇನ್ನು ಬೆಂಗಳೂರು ಎಫ್‌ಸಿ ತಂಡ ಈ ಸೋಲಿನ ಹೊರತಾಗಿಯೂ 6ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಈ ಸೋಲು ಅಂಕಪಟ್ಟಿಯಲ್ಲಿ ಮುನ್ನಡೆಯನ್ನು ಸಾಧಿಸುವ ಬೆಂಗಳುರು ಎಫ್‌ಸಿ ತಂಡದ ಕನಸಿಗೆ ಭಾರೀ ಹಿನ್ನಡೆಯುಂಟು ಮಾಡಿದೆ.

ಈ ಗೆಲುವಿನೊಂದಿಗೆ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ಟೂರ್ನಿ ಮೂರಮೇ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟೊಯಲ್ಲಿ ಅಂತಿಮ ಸ್ಥಾನದಿಂದ ಮೇಲಕ್ಕೇರಿದ್ದು 10ನೇ ಸ್ಥಾನವನ್ನು ಪಡೆದುಕೊಂಡಿದೆ. ಎಸ್‌ಸಿ ಈಸ್ಟ್ ಬೆಂಗಾಲ್ ಕೊನೇಯ ಸ್ಥಾನದಲ್ಲಿದೆ. ಇನ್ನು ಬೆಂಗಳೂರು ಎಫ್‌ಸಿ ತಂಡ ಈ ಸೋಲಿನ ಹೊರತಾಗಿಯೂ 6ನೇ ಸ್ಥಾನದಲ್ಲಿಯೇ ಮುಂದುವರಿದಿದೆ. ಈ ಸೋಲು ಅಂಕಪಟ್ಟಿಯಲ್ಲಿ ಮುನ್ನಡೆಯನ್ನು ಸಾಧಿಸುವ ಬೆಂಗಳುರು ಎಫ್‌ಸಿ ತಂಡದ ಕನಸಿಗೆ ಭಾರೀ ಹಿನ್ನಡೆಯುಂಟು ಮಾಡಿದೆ.

ಇನ್ನು ಅಂಕಪಟ್ಟಿಯಲ್ಲಿ ಹೈದರಾಬಾದ್ ಎಫ್‌ಸಿ ಅಗ್ರಸ್ಥಾನದಲ್ಲಿದ್ದು ಎಟಿಕೆ ಮೋಹನ್ ಬಾಗನ್ 2ನೇ ಸ್ಥಾನದಲ್ಲಿದೆ. ಜೆಮ್ಶೆಡ್ಪುರ ಎಫ್‌ಸಿ ಮೂರನೇ ಸ್ಥಾನದಲ್ಲಿ ಮತ್ತು ಕೇರಳ ಬ್ಲಾಸ್ಟರ್ಸ್ 4ನೇ ಸ್ಥಾನದಲ್ಲಿದೆ.

ಬೆಂಗಳೂರು ಎಫ್‌ಸಿ: ಲಾರಾ ಶರ್ಮಾ (ಗೋಲ್‌ಕೀಪರ್), ಯಾಯಾ ಬನಾನಾ, ಅಲನ್ ಕೋಸ್ಟಾ, ನಮ್ಗ್ಯಾಲ್ ಭುಟಿಯಾ, ಪರಾಗ್ ಶ್ರೀವಾಸ್, ಬ್ರೂನೋ ಸಿಲ್ವಾ, ಸುರೇಶ್ ವಾಂಗ್ಜಮ್, ಡ್ಯಾನಿಶ್ ಫಾರೂಕ್, ಉದಾಂತ ಸಿಂಗ್, ಸುನಿಲ್ ಛೆಟ್ರಿ (ನಾಯಕ), ಕ್ಲಿಟನ್ ಸಿಲ್ವಾ

ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ: ಮಿರ್ಷಾದ್ ಮಿಚು (ಗೋಲ್ ಕೀಪರ್), ಪ್ಯಾಟ್ರಿಕ್ ಫ್ಲೋಟ್‌ಮನ್, ಪ್ರೊವತ್ ಲಾಕ್ರಾ, ಮೊಹಮದ್ ಇರ್ಷಾದ್, ಜಕಾರಿಯಾ ಡಿಯಲ್ಲೊ, ಇಮ್ರಾನ್ ಖಾನ್, ಹೆರ್ನಾನ್ ಸಂತಾನಾ (ನಾಯಕ), ಜೋ ಜೊಹೆರ್ಲಿಯಾನಾ, ಪ್ರಗ್ಯಾನ್ ಗೊಗೊಯ್, ಸುಹೇರ್ ವಡಕ್ಕೆಪೀಡಿಕಾ, ದೇಶೋರ್ನ್ ಬ್ರೌನ್.

Story first published: Friday, February 18, 2022, 22:09 [IST]
Other articles published on Feb 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+