
ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 96ನೇ ಮುಖಾಮುಖಿ ನಡೆದಿದ್ದು ಈ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಜೆಮ್ಶೆಡ್ಪುರ ಎಫ್‌ಸಿ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಜೆಮ್ಶೆಡ್ಪುರ ಎಫ್‌ಸಿ ತಂಡ ಗೋಲಿನ ಸುರಿಮಳೆಗೈದಿದ್ದು ಭರ್ಜರಿ 4-1 ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದು ಟಾಪ್ 2ರಲ್ಲಿ ಸ್ಥಾನ ಪಡೆದುಕೊಂಡಿದೆ.
ಈ ಪಂದ್ಯದ ಆರಂಭದಿಂದಲೇ ಜೆಮ್ಶೆಡ್ಪುರ ಎಫ್‌ಸಿ ಮೇಲುಗೈ ಸಾಧಿಸಲು ಯಶಸ್ವಿಯಾಗಿತ್ತು. ಮೊದಲಾರ್ಧದಲ್ಲಿ ಜೆಮ್ಶೆಡ್ಪುರ ಎಫ್‌ಸಿ ಸಂಪೂರ್ಣವಾಗಿ ಹಿಡಿತ ಸಾಧಿಸಿಯಾಗಿತ್ತು. ಈ ಹಿಡಿತವನ್ನು ಅಂತಿಮ ಹಂತದವರೆಗೂ ಸಡಿಲಿಸದ ಜೆಮ್ಶೆಡ್ಪುರ ಭರ್ಜರಿ ಗೆಲುವು ಕಂಡಿದೆ.
ಜೆಮ್ಶೆಡ್ಪುರ ಎಫ್‌ಸಿ ಪರ ದಾಖಲಾದ ನಾಲ್ಕು ಗೋಲುಗಳ ಪೈಕಿ ಮೂರು ಗೋಲು ಮೊದಲಾರ್ಧದಲ್ಲಿಯೇ ಬಂದಿದೆ ಎಂಬುದು ಗಮನಾರ್ಹ. 23ನೇ ನಿಮಿಷದಲ್ಲಿ ರಿತ್ವಿಕ್ ಕುಮಾರ್ ಮೊದಲ ಗೋಲು ಗಳಿಸುವ ಮೂಲಕ ತಮಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಅದಾದ ಬಳಿಕ ಪಂದ್ಯದ 33ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಾಗಿತ್ತು. ಬೋರಿಸ್ ಸಿಂಗ್ ಈ ಗೋಲು ಸಿಡಿಸಲು ಯಶಸ್ವಿಯಾದರು. ನಂತರ 40ನೇ ನಿಮಿಷದಲ್ಲಿ ಪಂದ್ಯದ ಮೂರನೇ ಗೋಲು ದಾಖಲಾಗಿತ್ತು. ಈ ಗೋಲು ದಾಖಲಿಸಿದ್ದು ಡೇನಿಯಕ್ ಚುಕ್ವು. ಈ ಮೂಲಕ ಪಂದ್ಯದ ಮುನ್ನಡೆ 3-0ಗೆ ಏರಿತ್ತು.
ನಂತರ ದ್ವಿತಿಯಾರ್ಧದ ಆರಂಭಿಕ ನಿಮಿಷದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡದ ದೀಪಕ್ ದೇವ್ರಾನಿ ಓನ್ ಗೋಲು ಭಾರಿಸಿದರು. ಈ ಮೂಲಕ ಜೆಮ್ಶೆಡ್ಪುರ ಎಫ್‌ಸಿ ಗೋಲಿನ ಅಂತರ 4-0ಗೆ ಏರಿತ್ತು. ನಂರೆ 62ನೇ ನಿಮಿಷದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡದ ಪರವಾಗಿ ಕೂಡ ಏಕೈಕ ಗೋಲು ದಾಖಲಾಯಿತು. ನೆರಿಜಸ್ ವಾಲ್ಸ್ಕಿಸ್ ಈ ಗೋಲು ಸಿಡಿಸಿದರು. ಈ ಮೂಲಕ 4-1 ಅಂತರದಿಂದ ಜೆಮ್ಶೆಡ್ಪುರ ಎಫ್‌ಸಿ ಗೆಲುವು ಸಾಧಿಸಿದೆ.
ಜೆಮ್ಶೆಡ್ಪುರ ಎಫ್‌ಸಿ ಆರಂಭಿಕ ಪ್ಲೇಯಿಂಗ್ XI: ಟಿಪಿ ರೆಹನೇಶ್ (ಗೋಲ್ ಕೀಪರ್), ರಿಕಿ ಲಲ್ಲಾವ್ಮಾ, ಎಲಿ ಸಬಿಯಾ, ಲಾಲ್ಡಿನ್ಲಿಯಾನಾ ರೆಂತ್ಲೀ, ಪೀಟರ್ ಹಾರ್ಟ್ಲಿ (ನಾಯಕ), ಬೋರಿಸ್ ಸಿಂಗ್, ಜಿತೇಂದ್ರ ಸಿಂಗ್, ಪ್ರಣಯ್ ಹಾಲ್ಡರ್, ರಿತ್ವಿಕ್ ದಾಸ್, ಗ್ರೆಗ್ ಸ್ಟೀವರ್ಟ್, ಡೇನಿಯಲ್ ಚುಕ್ವು
ಚೆನ್ನೈಯಿನ್ ಎಫ್‌ಸಿ ಆರಂಭಿಕ ಪ್ಲೇಯಿಂಗ್ XI: ದೇಬ್ಜಿತ್ ಮಜುಂದರ್ (ಗೋಲ್ ಕೀಪರ್), ರೇಗನ್ ಸಿಂಗ್, ನಾರಾಯಣ್ ದಾಸ್, ಸ್ಲಾವ್ಕೊ ದಮ್ಜಾನೋವಿಕ್, ದೀಪಕ್ ದೇವ್ರಾನಿ, ನಿಂಥೋಯಿಂಗನ್ಬಾ ಮೀಟೆಲ್, ಅನಿರುದ್ಧ್ ಥಾಪಾ (ನಾಯಕ), ಏರಿಯಲ್ ಬೊರಿಸಿಯುಕ್, ವ್ಲಾಡಿಮಿರ್ ಕೋಮನ್, ನೆರಿಜಸ್ ವಾಲ್ಸ್ಕಿಸ್, ರಹೀಮ್ ಅಲಿ.