ಐಎಸ್‌ಎಲ್: ಈಸ್ಟ್ ಬೆಂಗಾಲ್ ವಿರುದ್ಧ ಗೆಲುವು ಸಾಧಿಸಿದ ಮುಂಬೈ ಸಿಟಿ ಎಫ್‌ಸಿ

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 98ನೇ ಮುಖಾಮುಖಿ ನಡೆದಿದ್ದು ಈ ಪಂದ್ಯದಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ಹಾಗೂ ಮುಂಬೈ ಸಿಟಿ ಎಫ್‌ಸಿ ತಂಡಗಳು ಪರಸ್ಪರ ಪೈಪೋಟಿ ನಡೆಸಿದೆ. ಈ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಟೂರ್ನಿಯ ಅಂತಿಮ ಘಟ್ಟದಲ್ಲಿ ಅಂಕಪಟ್ಟಿಯಲ್ಲಿಯೂ ತಲ್ಲಣಕ್ಕೆ ಕಾರಣವಾಗಿದೆ. ಸೆಮಿಫೈನಲ್‌ಗೇರುವ ಸ್ಪರ್ಧೆಯಲ್ಲಿ ಮುಂಬೈ ಟಿಸಿ ಎಫ್‌ಸಿ ಮತ್ತೊಮ್ಮೆ ಮೇಲುಗೈ ಸಾಧಿಸಿದೆ.
ಈ ಪಂದ್ಯದ ಮೊದಲಾರ್ಧದಲ್ಲಿ ಎರಡೂ ತಂಡಗಳು ಕೂಡ ಗೋಲು ಗಳಿಸಲು ಸಂಪೂರ್ನವಾಗಿ ವಿಫಲವಾಗಿತ್ತು. ದ್ವಿತಿಯಾರ್ಧದಲ್ಲಿ ಪಂದ್ಯದ 51ನೇ ನಿಮಿಷದಲ್ಲಿ ಈ ಪಂದ್ಯದ ಎಕೈಕ ಗೋಲು ದಾಖಲಾಗಿತ್ತು. ಬಿಪಿನ್ ಸಿಂಗ್ ಈ ಗೋಲು ಸಿಡಿಸುವ ಮೂಲಕ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಮೇಲುಗೈ ಸಾಧಿಸಲು ಕಾರಣವಾದರು. ಈ ಗೆಲುವು ಮುಂಬೈ ಸಿಟಿ ಎಫ್‌ಸಿ ಸೆಮಿಫೈನಲ್‌ಗೇರುವ ಸಾಧ್ಯತೆಯನ್ನು ಕೂಡ ಮತ್ತೊಮ್ಮೆ ತೆರೆದಿಟ್ಟಿದೆ ಎಂಬುದು ಗಮನಾರ್ಹ ಸಂಗತಿ.
ಚೆಂಡಿನ ಹಿಡಿತದಲ್ಲಿ ಹೆಚ್ಚಿನ ಪ್ರಾಬಲ್ಯವನ್ನು ಹೊಂದಿದ್ದರೂ ಮೊದಲಾರ್ಧದಲ್ಲಿ ಐಲ್ಯಾಂಡರ್‌ಗಳು ಕೇವಲ ಎರಡು ಹೊಡೆತಗಳನ್ನು ಗುರಿಯತ್ತ ಸಂಗ್ರಹಿಸಲು ಸಾಧ್ಯವಾಯಿತು. ಸ್ಪಷ್ಟವಾದ ಸ್ಕೋರಿಂಗ್ ಅವಕಾಶಗಳ ಕೊರತೆಯು ತಂಡದ ಆಕ್ರಮಣಕಾರರನ್ನು ನಿರಾಶೆಗೊಳಿಸಿತು. ಇದು ಮೊದಲಾರ್ಧದಲ್ಲಿ ಕುತೂಹಲ ಕೆರಳಿಸಿತು ಆದರೆ ಅಂತಿಮ ಮೂರನೇಯಲ್ಲಿ ಗುಣಮಟ್ಟದ ಕೊರತೆಯಿಂದಾಗಿ ಎರಡೂ ತಂಡಗಳು ಗೋಲು ಗಳಿಸದೆಯೇ ಮೊದಲಾರ್ಧದ ವಿರಾಮಕ್ಕೆ ಹೋದವು. ದ್ವಿತಿಯಾರ್ಧದಲ್ಲಿ ಮುಂಬೈ ಸಿಟಿ ಒಮದು ಗೋಲು ಗಳಿಸುವ ಮೂಲಕ ಮುನ್ನಡೆ ಸಾಧಿಸಿದೆ.
ಇನ್ನು ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಮತ್ತೊಮ್ಮೆ ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ 6ನೇ ಸ್ಥಾನದಲ್ಲಿದ್ದ ಮುಂಬೈ ಟಿಸಿ ಎಫ್‌ಸಿ ತಂಡ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ನಾಲ್ಕನೇ ಸ್ಥಾನದಲ್ಲಿದ್ದ ಕೇರಳ ಬ್ಲಾಸ್ಟರ್ಸ್ ಹಾಗೂ ಐದನೇ ಸ್ಥಾನದಲ್ಲಿದ್ದ ಬೆಂಗಳುರು ಎಫ್‌ಸಿ ತಂಡಗಳು ತಲಾ ಒಂದೊಂದು ಸ್ಥಾನಗಳ ಹಿನ್ನಡೆ ಅನುಭವಿಸದೆ. ಹೈದರಾಬಾದ್ ಎಫ್‌ಸಿ, ಜೆಮ್ಶೆಡ್ಪುರ ಎಫ್‌ಸಿ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳು ಮೊದಲ ಮೂರು ಸ್ಥಾನದಲ್ಲಿದೆ.
ಎಸ್‌ಸಿ ಈಸ್ಟ್ ಬೆಂಗಾಲ್ ಆರಂಭಿಕ ಪ್ಲೇಯಿಂಗ್ XI: ಶಂಕರ್ ರಾಯ್ (ಗೋಲ್ ಕೀಪರ್), ಜಾಯ್ನರ್ ಲೌರೆಂಕೊ, ರಾಜು ಗಾಯಕ್ವಾಡ್, ಫ್ರಾಂಜೊ ಪ್ರೈಸ್, ಮೊಹಮ್ಮದ್ ರಫೀಕ್ (ನಾಯಕ), ಸೌರವ್ ದಾಸ್, ಲಾಲ್ರಿನ್ಲಿಯಾನಾ ಹ್ನಾಮ್ಟೆ, ಬಿಕಾಶ್ ಜೈರು, ಫ್ರಾನ್ ಸೋಟಾ, ನೌರೆಮ್ ಸಿಂಗ್, ಥೋಂಗ್‌ಕೋಸಿಮ್ ಹಾಕಿಪ್.
ಮುಂಬೈ ಸಿಟಿ ಎಫ್‌ಸಿ ಆರಂಭಿಕ ಪ್ಲೇಯಿಂಗ್ XI: ಮೊಹಮದ್ ನವಾಜ್ (ಜಿಕೆ), ರಾಹುಲ್ ಭೇಕೆ, ಮೆಹ್ತಾಬ್ ಸಿಂಗ್, ವಿಘ್ನೇಶ್ ದಕ್ಷಿಣಮೂರ್ತಿ, ಮೌರ್ತಡಾ ಫಾಲ್ (ಸಿ), ಕ್ಯಾಸಿಯೊ ಗೇಬ್ರಿಯಲ್, ಬ್ರಾಡೆನ್ ಇನ್ಮನ್, ಲಾಲಿಯನ್ಜುವಾಲಾ ಚಾಂಗ್ಟೆ, ಇಗೊರ್ ಅಂಗುಲೊ, ಬಿಪಿನ್ ಸಿಂಗ್, ಲಾಲೆಂಗ್ಮಾವಿಯಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications