ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ ವಿರುದ್ಧ ಹೈದರಾಬಾದ್ ಎಫ್‌ಸಿಗೆ 2-1 ಅಂತರದ ಗೆಲುವು

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇಂದು 99ನೇ ಮುಖಾಮುಖಿ ನಡೆದಿದ್ದು ಈ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಪೈಪೋಟಿ ನಡೆಸಿದೆ. ಈ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಕೇರಳ ಬ್ಲಾಸ್ಟರ್ಸ್ ತಂಡದ ವಿರುದ್ಧ 2-1 ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಹೈದರಾಬಾದ್ ಎಪ್‌ಸಿ ತಂಡ ಅಂಕಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.
ಪಂದ್ಯ ಆರಂಭವಾದ 28ನೇ ನಿಮಿಷದಲ್ಲಿ ಹೈದರಾಬಾದ್ ಎಫ್‌ಸಿ ಫ್ರಾಂಚೈಸಿ ಮೊದಲ ಗೋಲು ಗಳಿಸಲು ಯಶಸ್ವಿಯಾಗಿತ್ತು. ಬಾರ್ತಲೋಮೆವ್ ಓಗ್ಬೆಚೆ ಹೈದರಾಬಾದ್ ಎಫ್‌ಸಿ ಪರವಾಗಿ ಗೋಲು ಗಳಿಸಿ ಮುನ್ನಡೆಯನ್ನು ಒದಗಿಸಿದರು. ಆದರೆ ಕೇರಳ ಬ್ಲಾಸ್ಟರ್ಸ್ ತಂಡ ಮೊದಲಾರ್ಧದಲ್ಲಿ ಯಾವುದೇ ಗೋಲು ಗಳಿಸಲು ವಿಫಲವಾಯಿತು. ಇದರ ಪರಿಣಾಮವಾಗಿ ಮೊದಲಾರ್ಧದ ಅಂತ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ 1-0 ಅಂತರದ ಮುನ್ನಡೆ ಸಾಧಿಸಿತು.
ಇನ್ನು ದ್ವಿತಿಯಾರ್ಧದ ಬಹುತೇಕ ಅವಧಿಯಲ್ಲಿ ಎರಡೂ ತಂಡಗಳು ಕೂಡ ಗೋಲು ದಾಖಲಿಸಲು ವಿಫಲವಾದವು. ಆದರೆ ಪಂದ್ಯದ ಅಂತಿಮ ಘಟ್ಟದಲ್ಲಿ ಅಂದರೆ 87ನೇ ನಿಮಿಷದಲ್ಲಿ ಹೈದರಾಬಾದ್ ಎಫ್‌ಸಿ ಎರಡನೇ ಬಾರಿ ಗೋಲು ಗಳಿಸುವ ಅವಕಾಶದಲ್ಲಿ ಯಶಸ್ಸು ಗಳಿಸಿತು. ಈ ಮೂಲಕ ಪಂದ್ಯದಲ್ಲಿ ಗೋಲುಗಳ ಅಂತರವನ್ನು ಹೆಚ್ಚಿಸಿಕೊಂಡಿತು. ಬಳಿಕ ಹೆಚ್ಚುವರಿ ಅವಧಿಯಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಒಂದು ಗೋಲು ದಾಖಲಿಸಿತು. ಆದರೆ ಅದಾಗಲೇ ಹೈದರಾಬಾದ್ ಎಫ್‌ಸಿ ಎರಡು ಗೋಲು ಗಳಿಸಿದ್ದ ಕಾರಣ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಇನ್ನು ಈ ಗೆಲುವಿನೊಂದಿಗೆ ಹಯದರಾಬಾದ್ ಎಫ್‌ಸಿ ಆಡಿದ 18 ಪಂದ್ಯಗಳಲ್ಲಿ 10 ಗೆಲುವು ಸಾಧಿಸಿದಂತಾಗಿದೆ. ಐದು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದರೆ 3 ಪಂದ್ಯವನ್ನು ಹೈದರಾಬಾದ್ ಸೋತಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಮತ್ತೊಂದೆಡೆ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಈ ಸೋಲು ಅಗ್ರ ನಾಲ್ಕರಲ್ಲಿ ಮತ್ತೊಮ್ಮೆ ಸ್ಥಾನ ಗಿಟ್ಟಿಸಲು ಹಿನ್ನಡೆಯುಂಟು ಮಾಡಿದೆ. ಕೇರಳ ಬ್ಲಾಸ್ಟರ್ಸ್ ತಂಡ 5ನೇ ಸ್ಥಾನದಲ್ಲಿದ್ದು ಅಗ್ರ ನಾಲ್ಕಕ್ಕೇರಲು ಮತ್ತಷ್ಟು ಪೈಪೋಟಿಯನ್ನು ಎದುರಿಸಬೇಕಿದೆ. ಜೆಮ್ಶೆಡ್ಪುರ ಎಫ್‌ಸಿ, ಎಟಿಕೆ ಮೋಹನ್ ಬಾಗನ್ ಹಾಗೂ ಮುಂಬೈ ಸಿಟಿ ಎಫ್‌ಸಿ ತಂಡಗಳು ಅಗ್ರ ನಾಲ್ಕರಲ್ಲಿರುವ ಇತರ ಮೂರು ತಂಡಗಳಾಗಿದೆ.
ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಆರಂಭಿಕ ಪ್ಲೇಯಿಂಗ್ XI: ಪ್ರಭುಸುಖಾನ್ ಗಿಲ್ (ಜಿಕೆ), ಸಂಜೀವ್ ಸ್ಟಾಲಿನ್, ಬಿಜೋಯ್ ವಿ, ಮಾರ್ಕೊ ಲೆಸ್ಕೋವಿಕ್, ಸಹಲ್ ಸಮದ್, ಆಡ್ರಿಯನ್ ಲೂನಾ (ಸಿ), ಹರ್ಮನ್ಜೋತ್ ಖಬ್ರಾ, ಆಯುಷ್ ಅಧಿಕಾರಿ, ಲಾಲ್ತತಂಗ ಖೌಲ್ಹ್ರಿಂಗ್, ಚೆಂಚೋ ಗೈಲ್ಟ್ಶೆನ್, ಅಲ್ವಾರೊ ವಜ್ಕ್ವೆಜ್.
ಹೈದರಾಬಾದ್ ಎಫ್‌ಸಿ ಆರಂಭಿಕ ಪ್ಲೇಯಿಂಗ್ XI: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ಕೀಪರ್), ಜುವಾನನ್, ಚಿಂಗ್ಲೆನ್ಸನಾ ಸಿಂಗ್, ನಿಮ್ ದೋರ್ಜಿ, ಆಕಾಶ್ ಮಿಶ್ರಾ, ಸೌವಿಕ್ ಚಕ್ರಬರ್ತಿ, ಯಾಸಿರ್ ಮೊಹಮ್ಮದ್, ಜೋವೊ ವಿಕ್ಟರ್ (ನಾಯಕ), ಜೋಯಲ್ ಚಿಯಾನೀಸ್, ಬಾರ್ತಲೋಮೆವ್ ಓಗ್ಬೆಚೆ, ರೋಹಿತ್ ದಾನು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications