
ಗೋವಾ: ಗೋವಾದ ತಿಲಕ್ ಮೈದಾನ್ ಸ್ಟೇಡಿಯಂನಲ್ಲಿ ಇಂದು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 96ನೇ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡಗಳು ಕಾದಾಡುತ್ತಿವೆ. ಇಂದಿನ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ಗೆಲ್ಲುವ ನಿರೀಕ್ಷೆ ಹೆಚ್ಚಿದೆ.
ಹೈದರಾಬಾದ್ ಎಫ್‌ಸಿ ಆಡಿರುವ 17 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 9ರಲ್ಲಿ ಡ್ರಾ ಸಾಧಿಸಿ, 3ರಲ್ಲಿ ಸೋತು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಆಡಿರುವ 17 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 7ರಲ್ಲಿ ಡ್ರಾ ಸಾಧಿಸಿ, 7ರಲ್ಲಿ ಸೋತು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮಣಿ (ಜಿಕೆ), ಆಸಿಶ್ ರೈ, ಚಿಂಗ್ಲೆನ್ಸಾನಾ ಸಿಂಗ್, ಒಡೆ ಒನೈಂಡಿಯಾ, ಆಕಾಶ್ ಮಿಶ್ರಾ, ಜೊವಾವೊ ವಿಕ್ಟರ್, ಹಿತೇಶ್ ಶರ್ಮಾ, ಹಲಿಚರಣ್ ನರ್ಜಾರಿ, ಜೋಯಲ್ ಚಿಯಾನೀಸ್, ಅರಿಡಾನೆ ಸಂತಾನ (ಸಿ), ಫ್ರಾನ್ ಸಂಡಾಜಾ.
ಕೇರಳ ಬ್ಲಾಸ್ಟರ್ಸ್ ಎಫ್‌ಸಿ: ಅಲ್ಬಿನೋ ಗೋಮ್ಸ್ (ಜಿಕೆ), ಸಂದೀಪ್ ಸಿಂಗ್, ಬೇಕರಿ ಕೋನ್, ಕೋಸ್ಟಾ ನಮೋಯಿನ್ಸು (ಸಿ), ಯೊಂಡ್ರೆಂಬೆಮ್ ಡೆನೆಚಂದ್ರ, ರೋಹಿತ್ ಕುಮಾರ್, ವಿಸೆಂಟೆ ಗೊಮೆಜ್, ಸೀತಾಸೇನ್ ಸಿಂಗ್, ಪ್ರಶಾಂತ್ ಕರುತದತ್ಕುನಿ, ಗ್ಯಾರಿ ಹೂಪರ್, ಜೋರ್ಡಾನ್ ಮುರ್ರೆ.