ಐಎಸ್‌ಎಲ್: ಹೈದರಾಬಾದ್ ತಂಡಕ್ಕೆ ಪ್ಲೇ ಆಫ್ ತಲುಪುವ ಗುರಿ

ಗೋವಾ: ಈ ಋತುವಿನಲ್ಲಿ ಹೈದರಾಬಾದ್ ಹೆಚ್ಚಿನ ಪಂದ್ಯಗಳಲ್ಲಿ ಆಗ್ರ ನಾಲ್ಕರಲ್ಲಿ ಸ್ಥಾನ ಕಾಯ್ದುಕೊಂಡಿತ್ತು. ಈಗ ಮೂರು ಪಂದ್ಯ ಬಾಕಿ ಇರುವಾಗ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಗಳಿಸಿದ ಅಂಕಗಳಲ್ಲಿ ಗೋವಾದೊಂದಿಗೆ ಸಮಾನತೆ ಕಾಯ್ದಿದ್ದು, ನಾರ್ಥ್ ಈಸ್ಟ್ ಗಿಂತ ಎರಡು ಅಂಕ ಹಿಂದೆ ಬಿದ್ದಿದೆ. ಹೈದರಾಬಾದ್ ಈ ಹಂತದಲ್ಲಿ ಮತ್ತೆ ಕುಸಿಯುವಂತಿಲ್ಲ. ಕಳೆದ ಏಳು ಪಂದ್ಯಗಳಲ್ಲಿ ತಂಡ ಆರು ಡ್ರಾ ಕಂಡಿದೆ. ಮಂಗಳವಾರ ತಿಲಕ್ ಮೈದಾನದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಹೈದರಾಬಾದ್ ಸೋಲನುಭವಿಸಿದರೆ ಅದರ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಲಿದೆ.
ಈಗಾಗಲೇ ಪ್ಲೇ ಆಫ್ ಅವಕಾಶದಿಂದ ವಂಚಿತವಾಗಿರುವ ಕೇರಳ ಬ್ಲಾಸ್ಟರ್ಸ್ ವಿರುದ್ಧ ಹೈದರಾಬಾದ್ ಸೆಣಸಲಿದೆ. ಗೌರವಕ್ಕಾಗಿ ಆಡಲಿರುವ ಕೇರಳ ಬ್ಲಾಸ್ಟರ್ಸ್ ಈಗಾಗಲೇ 29 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ. ಇದು ತಂಡವೊಂದು ಎದುರಾಳಿಗೆ ನೀಡಿರುವ ಎರಡನೇ ಅತಿಹೆಚ್ಚು ಗೋಲು.
ಕಿಬು ವಿಕುನಾ ಪಡೆ ಮೊದಲ ಗೋಲು ಗಳಿಸಿದ ನಂತರ 18 ಅಂಕಗಳನ್ನು ಕಳೆದುಕೊಂಡಿದೆ. ಹಾಗಂತ ಕೇರಳ ಬ್ಲಾಸ್ಟರ್ಸ್ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ಹೈದರಾಬಾದ್ ಕೋಚ್ ಮ್ಯಾನ್ವೆಲ್ ಮಾರ್ಕವೇಜ್ ಹೇಳಿದ್ದಾರೆ.

ಪ್ಲೇ ಆಫ್ ಅವಕಾಶವಿದೆ
"ಅಂಕಪಟ್ಟಿಯಲ್ಲಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿರುವ ಕೇರಳದ ಮೇಲಿರುವ ಇತರ ಎಲ್ಲ ತಂಡಗಳಿಗೂ ಪ್ಲೇ ಆಫ್ ಅವಕಾಶವಿದೆ. ಅಗ್ರ ಸ್ಥಾನಗಳು ತುಂಬಿದರೂ ಉಳಿದ ಸ್ಥಾನಗಳನ್ನು ಏರುವ ಅವಕಾಶವಿದೆ. ಕೇರಳ ವಿರುದ್ಧ ನಾವು ನಮ್ಮ ಶೈಲಿಯ ಆಟವನ್ನು ಆಡಲಿದ್ದೇವೆ. ನಾವು ಗೆಲ್ಲುವುದಕ್ಕಾಗಿಯೇ ಆಡಲಿದ್ದೇವೆ. ನಾವು 9 ಪಂದ್ಯಗಳಲ್ಲಿ ಸೋಲಿಲ್ಲ, ಆದರೆ ಅವುಗಳಲ್ಲಿ ಆರು ಪಮದ್ಯ ಡ್ರಾಗೊಂಡಿದೆ. ಇದೇ ರೀತಿಯಲ್ಲಿ ನಾವು ಜಯದ ಹಾದಿಯಲ್ಲಿ ಮುನ್ನಡೆಯುವೆವು. ನಾವು ಈ ಋತುವಿನಲ್ಲಿ ಉತ್ತಮವಾಗಿಯೇ ಆಡಿದ್ದೇವೆ, ಆದ್ದರಿಂದ ನಾವು ಅಗ್ರ ನಾಲ್ಕರ ಸ್ಥಾನದಲ್ಲಿರಲು ಬಯಸುತ್ತೇವೆ," ಎಂದು ಹೈದರಾಬಾದ್ ಕೋಚ್ ಹೇಳಿದರು.

16 ಗೋಲುಗಳನ್ನು ಗಳಿಸಿದೆ
ಅಂತಿಮ ವಿಜಿಲ್ ಊದುವವರೆಗೂ ಸಾಕಷ್ಟು ನಾಟಕೀಯ ಬೆಳವಣಿಗೆಗಳನ್ನು ಕಾಣಬಹುದಾಗಿದೆ. ಕೇರಳ ಗಳಿಸಿರುವ 22 ಗೋಲುಗಳಲ್ಲಿ 14 ಗೋಲುಗಳು ದ್ವಿತಿಯಾರ್ಧದಲ್ಲಿ ದಾಖಲಾಗಿದೆ. ಹೈದರಾಬಾದ್ ವಿರಾಮದ ನಂತರ 16 ಗೋಲುಗಳನ್ನು ಗಳಿಸಿದೆ. ಇದು ಈ ಋತುವಿನಲ್ಲಿ ತಂಡವೊಂದು ಗಳಿಸಿದ ಎರಡನೇ ಅತಿ ಹೆಚ್ಚು ಗೋಲಾಗಿದೆ.

ಜಯದ ಹಾದಿ ಸುಗಮ
ಎರಡೂ ತಂಡಗಳ ಡಿಫೆನ್ಸ್ ವಿಭಾಗ ಒತ್ತಡದ ಸಮಯದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿಲ್ಲ. ಕೇರಳ ತಂಡ 18 ಗೋಲುಗಳನ್ನು ನೀಡಿದ್ದು, ಹೈದರಾಬಾದ್ ದ್ವಿತಿಯಾರ್ಧದಲ್ಲಿ 11 ಗೋಲುಗಳನ್ನು ನೀಡಿದೆ. ಕೇರಳ ತಂಡ ತನ್ನ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದರೆ ಜಯದ ಹಾದಿ ಸುಗಮವಾಗಬಹುದು.
"ದಾಳಿ ಹಾಗೂ ಡಿಫೆನ್ಸ್ ನಲ್ಲಿ ಹೋಲಿಕೆಯ ಕೊರತೆ ಇದೆ. ನಾವು ಹೆಚ್ಚಿನ ಪಂದ್ಯಗಳಲ್ಲಿ ಹೆಚ್ಚು ಅವಕಾಶಗಳನ್ನು ನಿರ್ಮಿಸಿದ್ದೇವೆ. ಆದರೆ ನಾವು ಅಂಕಗಳನ್ನು ಗಳಿಸಿಲ್ಲ. ನಾವು ಈ ವಿಷಯದಲ್ಲಿ ಸುಧಾರಿಸಬೇಕು. ನಾವು ತಪ್ಪುಗಳನ್ನು ಅರಿತು ಸುಧಾರಣೆ ಮಾಡಿಕೊಳ್ಳಬೇಕು, " ಎಂದು ವಿಕುನಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications