ISL 2025-26: ಸ್ಥಳ ಮತ್ತು ಹಣಕಾಸಿನ ವಿಚಾರದಲ್ಲಿ ಗೊಂದಲ: ಟೂರ್ನಿ ಮತ್ತಷ್ಟು ವಿಳಂಬ?
ಇಂಡಿಯನ್ ಸೂಪರ್ ಲೀಗ್ 2025-26 ಋತುವಿನ ಬಗ್ಗೆ ಇನ್ನು ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಭಾನುವಾರ (ಡಿ.28) ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಮತ್ತು ಕ್ಲಬ್‌ಗಳ ನಡುವೆ ಸಭೆಯೊಂದು ನಡೆಯಿತು. ಈ ಸಭೆಯಲ್ಲಿ ಯಾವುದೇ ಒಮ್ಮತ ಬಾರದ ಕಾರಣ, ಫುಟ್ಬಾಲ್ ಲೀಗ್ ಬಗ್ಗೆ ಸಭೆಯಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಇದರಿಂದಾಗಿ 2025-26ರ ಸೀಸನ್ ಆರಂಭವಾಗುವುದು ಮತ್ತಷ್ಟು ವಿಳಂಬವಾಗಿದೆ. ಸಭೆಯಲ್ಲಿ ಪಂದ್ಯಗಳು ನಡೆಯಲಿರುವ ಸ್ಥಳಗಳು ಹಾಗೂ ಹಣಕಾಸಿನ ವಿಚಾರದ ಬಗ್ಗೆ ಚರ್ಚೆಗಳು ನಡೆದಿವೆ.
ಸಮಯ ಹಾಗೂ ಸಾರಿಗೆ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹೋಮ್ ಅಂಡ್ ಅವೇ ಮಾದರಿಯಲ್ಲಿ ಪಂದ್ಯಗಳು ನಡೆಯುವುದಿಲ್ಲ. ಈಗ ಬರುತ್ತಿರುವ ಮಾಹಿತಿಯಂತೆ ಐಎಸ್‌ಎಲ್‌ನ್ನು ಎರಡು ಅಥವಾ ಮೂರು ಸ್ಥಳಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದರಲ್ಲಿ ಕೋಲ್ಕತ್ತಾ ಹಾಗೂ ಗೋವಾ ನಗರಗಳು ಟೂರ್ನಿ ನಡೆಸುವ ಹಾಟ್ ಫೆವರೀಟ್ ಸ್ಥಳಗಳಾಗಿವೆ. ಈ ಪಟ್ಟಿಗೆ ಕೇರಳವನ್ನು ಸಹ ಪರಿಗಣಿಸಲಾಗಿತ್ತು. ಆದರೆ ತರಬೇತಿ ಸೌಲಭ್ಯಗಳ ಕೊರತೆಯಿಂದಾಗಿ ದಕ್ಷಿಣದ ಕೇರಳ ರಾಜ್ಯ ಆತಿಥ್ಯದಿಂದ ಹಿಂದೆ ಸರಿಯುವ ಸಾಧ್ಯತೆ ಇದೆ.

ಐಎಸ್‌ಎಲ್ ನಡೆಸಲು ತಗಲುವ ವೆಚ್ಚದ ಯಾರು ಭರಿಸಲಿದ್ದಾರೆ. ಲೀಗ್ ನಡೆಸಲು ಸುಮಾರು 70 ಕೋಟಿ ರೂಪಾಯಿ ಖರ್ಚಾಗುತ್ತದೆ ಇದನ್ನು ಭರೆಸುವ ಬಗೆಯ ಬಗ್ಗೆ ಕ್ಲಬ್‌ಗಳು ಎಐಎಫ್‌ಎಫ್‌ನಿಂದ ಸ್ಪಷ್ಟನೆ ಕೇಳಿವೆ. ಇನ್ನು ಫೆಡರೇಷನ್ ಆರ್ಥಿಕ ಭದ್ರತೆಯ ಬಗ್ಗೆ ಭರವಸೆ ನೀಡುವಂತೆ ಕ್ಲಬ್‌ಗಳು ಸೂಚಿಸಿವೆ. ಇನ್ನು ದೀರ್ಘಾವಧಿಯ ಭವಿಷ್ಯದ ಚಿಂತೆ ನಮಗೂ ಇದೆ. ಆದರೆ ವೆಚ್ಚವನ್ನು ಯಾರು ಭರಿಸುತ್ತಾರೆ ಎಂಬ ಸ್ಪಷ್ಟತೆ ನೀಡಬೇಕಿದೆ. ಅಲ್ಲದೆ ಹಣಕಾಸಿನ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಫೆಡರೇಷನ್‌ಗೆ ಕೇಳಲಾಗಿದೆ ಎಂದು ಕ್ಲಬ್ ಅಧಿಕಾರಿಯೊಬ್ಬರು ಮೈಖೇಲ್‌ಗೆ ತಿಳಿಸಿದ್ದಾರೆ.
ಇನ್ನು ದೀರ್ಘಾವಧಿಯ ಭವಿಷ್ಯದ ಬಗ್ಗೆ ಫೆಡರೇಷನ್ ಕ್ಲಬ್‌ಗಳ ಜೊತೆಗೆ ಮತ್ತೊಂದು ಸಭೆ ನಡೆಸಲು ಬಯಸುತ್ತಿದೆ. ಈ ಮೂಲಕ ಅವರಿಗೆ ಹಣಕಾಸಿನ ಸ್ಪಷ್ಟತೆ ಸಿಗಲಿದೆ. ಒಟ್ಟು 14 ಕ್ಲಬ್‌ಗಳು ಭಾನುವಾರ ನಡೆದ ಎಐಎಫ್‌ಎಫ್ ಸಭೆಯಲ್ಲಿ ಭಾಗವಹಿಸಿದ್ದವು.
ಎಎಫ್‌ಸಿಗೆ ಅರ್ಹತೆ
ಒಂದು ಕ್ಲಬ್ ಏಷ್ಯನ್ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಪಡೆಯಲು, ಆ ದೇಶದ ಲೀಗ್‌ಗಳಲ್ಲಿ ಕನಿಷ್ಠ 24 ಪಂದ್ಯಗಳನ್ನಾದರೂ ಆಡಿರಬೇಕಾಗುತ್ತದೆ. ಅಂದಾಗ ಮಾತ್ರ ಅರ್ಹತೆ ಪಡೆಯಲು ಸಾಧ್ಯವಾಗುತ್ತದೆ. ಆದರೆ ಈ ಬಾರಿ ಎಎಫ್‌ಸಿಯ ಮೂರು ಪ್ರಮುಖ ನಿಯಮಗಳನ್ನು ಮೀರುವ ಸಾಧ್ಯತೆ ಇದೆ. ಇದರಿಂದ ಕ್ಲಬ್‌ಗಳು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಲು ಅಡ್ಡಿ ಆಗಬಹುದು. ಫೆಡರೇಷನ್ ಎರಡು ಸ್ಥಾನಗಳನ್ನು ಎಎಫ್‌ಸಿ ಟೂರ್ನಿಯಲ್ಲಿ 2 ಸ್ಥಾನವನ್ನು ಪರಿಗಣಿಸುವಂತೆ ಮನವಿ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications