ಐಎಸ್‌ಎಲ್ 2019: ಕೋಲ್ಕತ್ತಾದಲ್ಲಿ ಹೈರಾಣಾದ ಹೈದರಾಬಾದ್ ಎಫ್‌ಸಿ

ಕೋಲ್ಕೊತಾ, ಅಕ್ಟೋಬರ್ 25: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಹೈದರಾಬಾದ್ ಎಫ್‌ಸಿ ಎರಡು ಬಾರಿ ಚಾಂಪಿಯನ್ ಎಟಿಕೆ ವಿರುದ್ಧ ನಿಜವಾಗಿಯೂ ಹೊಸ ತಂಡದಂತೆ ಕಂಡು ಬಂತು. ವಿಲಿಯಮ್ಸ್ ಹಾಗೂ ಎಡು ಗಾರ್ಸಿಯಾ ಅವರು ತಲಾ ಎರಡು ಅದ್ಭುತ ಗೋಲುಗಳ ನೆರವಿನಿಂದ ಎಟಿಕೆ 5-0 ಅಂತರದಲ್ಲಿ ಹೈದರಾಬಾದ್ ಬೃಹತ್ ಜಯ ಗಳಿಸಿ ಮೊದಲ ಪಂದ್ಯದ ಸೋಲು ಮರೆಯಿತು.
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎಟಿಕೆ ಮೊದಲ ಬಾರಿಗೆ ಬೃಹತ್ ಅಂತರದ ಜಯ ಗಳಿಸಿತು. ಡೇವಿಡ್ ವಿಲಿಯಮ್ಸ್ (25, 44 ನೇ ನಿಮಿಷ) ಹಾಗೂ ಎಡು ಗಾರ್ಸಿಯ (88, 90ನೇ ನಿಮಿಷ) ಅವರ ಡಬಲ್ ಗೋಲು ಗಳು ಜತೆಯಲ್ಲಿ ರಾಯ್ ಕೃಷ್ಣ (27ನೇ ನಿಮಿಷ) ಗೋಲಿನ ನೆರವಿನಿಂದ ದುರ್ಬಲ ಹೈದರಾಬಾದ್ ಎಫ್ ಸಿ ವಿರುದ್ಧ ಮಾಜಿ ಚಾಂಪಿಯನ್ ಎಟಿಕೆ 5-0 ಅಂತರದಲ್ಲಿ ಜಯ ಗಳಿಸಿತು.
ಎಟಿಕೆ ಗೆ ಅದ್ಭುತ ಮುನ್ನಡೆ
ನಿರೀಕ್ಷೆಯಂತೆ ಎಟಿಕೆ ಮನೆಯಂಗಣದಲ್ಲಿ ಮಿಂಚಿದೆ. ಪ್ರಥಮಾರ್ಧದಲ್ಲೇ 3-0 ಗೋಲುಗಳಿಂದ ಮೇಲುಗೈ ಸಾಧಿಸಿ ಜಯಕ್ಕೆ ಅಗತ್ಯ ಇರುವ ವೇದಿಕೆ ಹಾಕಿತು. ಹೈದರಾಬಾದ್ ದ್ವಿತೀಯಾರ್ಧದಲ್ಲಿ ಗೋಲು ಗಾಳಿಸುವುದಕ್ಕಿಂತ ಗೋಲು ತಡೆಯುವುದೇ ಸೂಕ್ತ ಎಂಬ ವಾತಾವರಣವನ್ನು ಎಟಿಕೆ ನಿರ್ಮಿಸಿತು. ಡೇವಿಡ್ ವಿಲಿಯಮ್ಸ್ 25ನೇ ನಿಮಿಷದಲ್ಲಿ ಎಟಿಕೆ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಮೂರು ನಿಮಿಷಗಳ ಅಂತರದಲ್ಲಿ ಎಟಿಕೆ ತನ್ನ ಮುನ್ನಡೆಯನ್ನು ಹೆಚ್ಚಿಸಿಕೊಂಡಿತು. 27ನೇ ನಿಮಿಷದಲ್ಲಿ ರಾಯ್ ಕೃಷ್ಣ ತಂಡದ ಪರ ಎರಡನೇ ಹಾಗೂ ವೈಯಕ್ತಿಕ ಮೊದಲ ಗೋಲು ಗಳಿಸಿ ತಮ್ಮ ತಂಡ ಪ್ರಭುತ್ವ ಸಾಧಿಸುವಂತೆ ಮಾಡಿದರು. 44ನೇ ನಿಮಿಷದಲ್ಲಿ ಡೇವಿಡ್ ವಿಲಿಯಮ್ಸ್ ಎರಡನೇ ಗೋಲು ಗಳಿಸಿ ತಂಡಕ್ಕೆ 3-0 ಮುನ್ನಡೆ ತಂದುಕೊಟ್ಟರು.

ಸೋಲಿನ ಸ್ವಾಗತಕೆ ಎಟಿಕೆ ಸಜ್ಜು
ಉತ್ತಮ ರೀತಿಯಲ್ಲಿ ಯಶಸ್ವಿಯಾಗಿ ಸಾಗುತ್ತಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಶುಕ್ರವಾರ ಎರಡು ಬಾರಿ ಚಾಂಪಿಯನ್ ಎಟಿಕೆ ಹೊಸ ತಂಡ ಹೈದರಾಬಾದ್ ಎಫ್ ಸಿ ಗೆ ಸೋಲಿನ ಸ್ವಾಗತ ನೀಡಲು ಸಜ್ಜಾಯಿತು. ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಪಂದ್ಯವನ್ನಾಡುತ್ತಿರುವ ಹೈದರಾಬಾದ್ ಕೂಡ ಜಯದ ಆರಂಭ ಕಾಣುವ ತವಕದಲ್ಲಿದೆ. ಅಂಟೋನಿಯೋ ಲೋಪೆಜ್ ಹಬ್ಬಾಸ್ ಪಡೆ ಕೇರಳ ಬ್ಲಾಸ್ಟರ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಎಟಿಕೆ ಸೋಲನುಭವಿಸಿತ್ತು. ಈಗ ಮನೆಯಂಗಣದ ಪ್ರೇಕ್ಷಕರ ನೆರವಿನಿಂದ ಹೈದರಾಬಾದ್ ವಿರುದ್ಧ ಜಯ ಗಳಿಸಿ ಸೋಲನ್ನು ಮರೆಯಲು ಹಂಬಲಿಸಿತು.
ಕೇರಳ ವಿರುದ್ಧ ಆರಂಭದಲ್ಲೇ ಗೋಲು ಗಳಿಸಿ ಮೇಲುಗೈ ಸಾಧಿಸಿದರೂ ಎಟಿಕೆ ಓಗ್ಬ್ಯಾಚೆ ಯನ್ನು ನಿಯಂತ್ರಿಸುವಲ್ಲಿ ವಿಫಲವಾಯಿತು. ಎಟಿಕೆಯ ಡಿಫೆನ್ಸ್ ವಿಭಾಗ ಆರಂಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರೂ, ದ್ವಿತೀಯಾರ್ಧದಲ್ಲಿ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿತ್ತು. ಆದರೆ ಕೋಲ್ಕತ ಮನೆಯಂಗಣ, ಇಲ್ಲಿ ಪ್ರಮಾದಗಳ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಹೈದರಾಬಾದ್ ತಂಡಕ್ಕೆ ಯಾವುದೇ ಆತಂಕವಿಲ್ಲ, ಹೊಸ ತಂಡವಾದ ಕಾರಣ ಕಳೆದುಕೊಳ್ಳುವುದು ಏನೂ ಇಲ್ಲ ಎಂಬ ಹಂಬಲ. ಹೈದರಾಬಾದ್ ತಂಡದಲ್ಲಿ ಎಟಿಕೆ ಆಟಗಾರರನ್ನು ನಿಯಂತ್ರಿಸುವ ಹಾಗೂ ಗೋಲು ಗಳಿಸುವ ಸಾಮರ್ಥ್ಯವೂ ಇದೆ. ಮಾರ್ಸೆಲೋ ಪೆರೇರಾ, ಬೊಬೊ, ಮಾರ್ಕೊ ಸ್ಟಂಕೋವಿಕ್ ಹಾಗೂ ರಾಬಿನ್ ಸಿಂಗ್ ತಂಡದಲ್ಲಿರುವ ಅನುಭವಿ ಆಟಗಾರರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications