For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಕೇರಳ- ಚೆನ್ನೈಯಿನ್ ತಂಡಗಳ ನಡುವೆ ಗೋಲಿಲ್ಲದೆ ಡ್ರಾ

By Isl Media
ISL: Albino the hero as Kerala rescue point against Chennaiyin

ಗೋವಾ : ಹೀರೋ ಇಂಡಿಯನ್ ಸೂಪರ್ ಲೀಗ್ ನ 11ನೇ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಕೇರಳ ಬ್ಲಾಸ್ಟರ್ಸ್ ಮತ್ತು ಚೆನ್ನೈಯಿನ್ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದವು. ಇದರೋದಿಗೆ ಕೇರಳ ಬ್ಲಾಸ್ಟರ್ಸ್ ತಂಡ ಸತತ ಮೂರನೇ ಪಂದ್ಯದಲ್ಲೂ ಜಯ ಗಳಿಸಸಲು ವಿಫಲವಾಯಿತು. ದ್ವಿತಿಯಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿತ್ತು,. ಆದರೆ ಚೆನ್ನೈನ ಡಿಫೆನ್ಸ್ ವಿಭಾಗ ಗೋಲು ಗಳಿಕೆಗೆ ಅವಕಾಶ ಕೊಡಲಿಲ್ಲ. ಕೇರಳ ಬ್ಲಾಸ್ಟರ್ಸ್ ತಂಡದ ಗೋಲ್ ಕೀಪರ್ ಅಲ್ಬಿನೊ ಗೊಮ್ಸ್ ಅವರನ್ನು ಪಂದ್ಯದ ಹೀರೋ ಎಂದರೆ ತಪ್ಪಾಗಲಾರದು.

ಗೋಲಿಲ್ಲದ ಪ್ರಥಮಾರ್ಧ: ಚೆನ್ನೈಯಿನ್ ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳ ನಡುವಿನ ಪಂದ್ಯದ ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಗೊಂಡಿತು. ಇತ್ತಂಡಗಳು ಡಿಫೆನ್ಸ್ ನಲ್ಲಿ ಉತ್ತಮ ರೀತಿಯಲ್ಲಿ ಆಟ ಪ್ರದರ್ಶಿಸಿದ ಕಾರಣ ಅಲ್ಲಿ ಗೋಲಿಗೆ ಅವಕಾಶ ಮೂಡಿಯಬರಲಿಲ್ಲ. 3ನೇ ನಿಮಿಷದಲ್ಲಿ ಅಲ್ಬಿನೊ ಗೋಮ್ಸ್ ಉತ್ತಮ ರೀತಿಯಲ್ಲಿ ಚೆಂಡನ್ನು ತಡೆದು ಗೋಲಾಗುವುದನ್ನು ತಡೆದರು.

ಕೇರಳಕ್ಕೆ ಜಯದ ಹಂಬಲ: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ ಮೊದಲ ಸೂಪರ್ ಸಂಡೆಯ ಎರಡನೇ ಪಂದ್ಯದಲ್ಲಿ ದಕ್ಷಿಣದ ಡರ್ಬಿ ಎಂದೇ ಕರೆಯಲ್ಪಡುವ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್ ಸಿ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳು ಮುಖಾಮುಖಿಯಾದವು. ಇತ್ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈಯಿನ್ ತಂಡ 6 ಬಾರಿ ಗೆದ್ದು ಮೇಲುಗೈ ಸಾಧಿಸಿದೆ. ಬ್ಲಾಸ್ಟರ್ಸ್ ಕೇವಲ ಮೂರು ಬಾರಿ ಗೆದ್ದಿದ್ದು, ಉಳಿದ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿತ್ತು. ಮೊದಲ ಪಂದ್ಯದಲ್ಲಿ ಚೆನ್ನೈಯಿನ್ ಪರ ಇಸ್ಮಾಯಿಲ್ ಗೊನ್ಸಾಲ್ವೆಸ್ ಮತ್ತು ಲಾಲಿಯಾನಗಜುವಾಲಾ ಚಾಂಗ್ಟೆ ಅಟ್ಯಾಕ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಅನಿರುಧ್ ಥಾಪಾ ಹಾಗೂ ರಫಾಯಲ್ ಕ್ರಿವಿಲ್ಲೆಎರೋ ಮಿಡ್ ಫೀಲ್ಡ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವುದು ಕೋಚ್ ಸಾಬಾ ಲಾಜ್ಲೋ ಅವರಿಗೆ ತಮ್ಮ ತಂಡ ಮುಂದಿನ ಪಂದ್ಯ ಗೆಲ್ಲುತ್ತದೆ ಎನ್ನುವುದರಲ್ಲಿ ನಂಬಿಕೆ ಹೆಚ್ಚಿಸಿದೆ.

ಕೇರಳ ತಂಡದ ಪ್ರಸಕ್ತ ಋತುವಿನಲ್ಲಿ ಇನ್ನೂ ಜಯದ ಖಾತೆ ತೆರೆದಿಲ್ಲ. ಕೇರಳ ಬ್ಲಾಸ್ಟರ್ಸ್ ತಂಡ ದ್ವಿತಿಯಾರ್ಧದಲ್ಲಿ ಗೋಲುಗಳನ್ನು ನೀಡುತ್ತಿದ್ದು, ಈಗಾಗಲೇ 3 ಗೋಲುಗಳನ್ನು ನೀಡಿ ಜಯದಿಂದ ವಂಚಿತವಾಗಿದೆ. ಇದೆಲ್ಲ ಕೇವಲ ಎರಡು ಪಂದ್ಯಗಳ ಬೆಳವಣಿಗೆ. ಕೇರಳ ಎಫ್ ಸಿ ತಂಡ ತನ್ನೆಲ್ಲ ತಪ್ಪುಗಳನ್ನು ಸರಿಪಡಿಸಿಕೊಂಡು ಜಯದ ಹಾದಿಯಲ್ಲಿ ಸಾಗಲು ಮತ್ತೆ ಅಂಗಣಕ್ಕಿಳಿಯಿತು. ಸಿಡೊಂಚ ಮತ್ತು ಸತ್ಯಸನ್ ಮಿಡ್ ಫೀಲ್ಡ್ ವಿಭಾಗದಲ್ಲಿ ಉತ್ತಮ ರೀತಿಯಲ್ಲಿ ತಂಡಕ್ಕೆ ನೆರವಾಗಿದ್ದರು. ಗ್ಯಾರಿ ಹೂಪರ್ ಅವರಿಗೆ ಈ ಇಬ್ಬರು ಆಟಗಾರರು ಸೂಕ್ತ ರೀತಿಯಲ್ಲಿ ನೆವಾದರೆ ಚೆನ್ನೈಯಿನ್ ತಂಡದ ಜಯದ ಹಾದಿ ಕಠಿಣವಾಗಲಿದೆ. ಎರಡು ಪಂದ್ಯಗಳಲ್ಲಿ ಕೇರಳ 3 ಗೋಲುಗಳನ್ನು ನೀಡಿದೆ. ಕೋಸ್ಟಾ ನುಮೊಯ್ನೆಸು, ನಿಶುಕುಮಾರ್, ಬಕರಿ ಕೋನ್ ಮತ್ತು ಜೆಸಸ್ಸಸೆಲ್ ಕಾರ್ಮೆರೊ ಅವರು ತಂಡಕ್ಕೆ ನೆರವಾಗಲಿದ್ದಾರೆ.

Story first published: Monday, November 30, 2020, 13:09 [IST]
Other articles published on Nov 30, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+