ಐಎಸ್‌ಎಲ್: ಉಕ್ಕಿನ ನಗರಿಯಲ್ಲಿ ಜೆಮ್ಶೆಡ್ಪುರ-ನಾರ್ತ್ ಈಸ್ಟ್ ಸಮಬಲದ ಹೋರಾಟ

ಜೆಮ್ಶೆಡ್ಪುರ, ಡಿಸೆಂಬರ್ 3: ಜೆಮ್ಶೆಡ್ಪುರ ಎಫ್‌ಸಿ ಪರ ಸರ್ಗಿಯೊ ಕ್ಯಾಸ್ಟಲ್ ( 28 ನೇ ನಿಮಿಷ) ಮತ್ತು ನಾರ್ತ್ ಈಸ್ಟ್ ಯುನೈಟೆಡ್ ಪರ ಪನಾಗಿಯೋಟಿಸ್ ಟ್ರಿಡಿಸ್ (90ನೇ ನಿಮಿಷ) ಗಳಿಸಿದ ಗೋಲಿನಿಂದ ಇಂಡಿಯನ್ ಸೂಪರ್ ಲೀಗ್ ನ 30ನೇ ಪಂದ್ಯ 1-1 ಗೋಲಿನಿಂದ ಸಮಬಲಗೊಂಡಿತು. ಕ್ಯಾಸ್ಟಲ್ ಪ್ರಸ್ತಕ ಲೀಗ್ ನಲ್ಲಿ 5ನೇ ಗೋಲು ಗಳಿಸಿ ಗೋಲ್ಡನ್ ಬೂಟ್ ಕಡೆಗೆ ದಿಟ್ಟ ಹೆಜ್ಜೆ ಇಡಲಾರಂಭಿಸಿದರು.
ಪ್ರಥಮಾರ್ಧದಲ್ಲಿ ಆತಿಥೇಯರ ಪ್ರಾಭಲ್ಯ
ಜೆಮ್ಶೆಡ್ಪುರ ನಿರೀಕ್ಷೆಯಂತೆ ಪ್ರಥಮಾರ್ಧದಲ್ಲಿ ಮೇಲುಗೈ ಸಾಧಿಸಿತು. ಉತ್ತಮ ರೀತಿಯಲ್ಲಿ ಆಟವನ್ನು ಆರಂಭಿಸಿದ ಟಾಟಾ ಪಡೆ ಅದಕ್ಕೆ ಪೂರಕವಾದ ಫಲ ಗಳಿಸಿತು. ಗೋಲು ಗಳಿಸುವ ರೀತಿಯಲ್ಲಿ ಆಡಿ ಗೋಲು ಗಳಿಸಿತು. 28ನೇ ನಿಮಿಷದಲ್ಲಿ ಸೆರ್ಗಿಯೋ ಕ್ಯಾಸ್ಟಲ್ ಗಳಿಸಿದ ಗೋಲು ಟಾಟಾ ಪಡೆಗೆ ಅಗತ್ಯ ಇರುವ ಮುನ್ನಡೆ ತಂದುಕೊಟ್ಟಿತು. ಆ ನಂತರ ನಾರ್ತ್ ಈಸ್ಟ್ ಉತ್ತಮ ಅವಕಾಶಗಳನ್ನು ನಿರ್ಮಿಸಿತು, ಆದರೆ ಅದು ಗೋಲಾಗಿ ರೂಪುಗೊಳ್ಳಲಿಲ್ಲ. ಇದೇ ರೀತಿಯ ಆಟ ದ್ವಿತೀಯಾರ್ಧದಲ್ಲೂ ಮುಂದುವರಿದರೆ ನಾರ್ತ್ ಈಸ್ಟ್ ಯುನೈಟೆಡ್ ಗೋಲು ಗಾಳಿಸೀತು. ಅಥವಾ ಟಾಟಾ ಪಡೆ ಮತ್ತೆ ಮುನ್ನಡೆ ಕಂಡೀತು.
ಕ್ಯಾಸ್ಟಲ್ ಮಿಂಚು
ಪಂದ್ಯ ಆರಂಭಗೊಂಡ 28ನೇ ನಿಮಿಷದಲ್ಲಿ ಸೆರ್ಗಿಯೋ ಕ್ಯಾಸ್ಟಲ್ ಅದ್ಭುತ ಗೋಲು ಗಾಳಿಸುವುದರೊಂದಿಗೆ ಜೆಮ್ಶೆಡ್ಪುರ ಎಫ್ ಸಿ ಮುನ್ನಡೆ ಕಂಡಿತು. ಏಟೋರ್ ಮೊನ್ರೋಯ್ ನೀಡಿದ ಬಾಕ್ಸ್ ಸಮೀಪ ಇದ್ದ ಫಾರುಖ್ ಚೌಧರಿ ನಿರಯಂತ್ರಣಕ್ಕೆ ಸಿಕ್ಕಿತು. ಮಿಂಚಿನ ವೇಗದಲ್ಲಿ ಚೌಧರಿ ಚೆಂಡನ್ನು ಸೆರ್ಗಿಯೋ ಕ್ಯಾಸ್ಟಲ್ ಕಡೆಗೆ ತಳ್ಳಿದರು. ಎದೆಯ ಮಟ್ಟದಲ್ಲಿ ಬಂದ ಚೆಂಡನ್ನು ಕ್ಯಾಸ್ಟಲ್ ಕಾಲಿನ ನಿಯಂತ್ರಣಕ್ಕೆ ತೆಗೆದುಕೊಂಡು, ನೇರವಾಗಿ ಗೋಲ್ ಬಾಕ್ಸ್ ಗೆ ಗುರಿಯಿಟ್ಟು ತುಳಿದರು. ಸುಭಾಶಿಶ್ ರಾಯ್ ಉತ್ತಮ ರೀತಿಯಲ್ಲಿ ತಡೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಟಾಟಾ ಪಡೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮುನ್ನಡೆಯಿತು.

ಅಗ್ರ ಸ್ಥಾನಕ್ಕಾಗಿ ಹೋರಾಟ
ಇಂಡಿಯನ್ ಸೂಪರ್ ಲೀಗ್ ನಲ್ಲಿ ಉತ್ತಮ ಆರಂಭ ಕಂಡಿರುವ ಜೆಮ್ಶೆಡ್ಪುರ ಎಫ್ ಸಿ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ಎಫ್ ಸಿ ತಂಡಗಳು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪುವ ಗುರಿಯನ್ನಿಟ್ಟುಕೊಂಡು ಅಂಗಣಕ್ಕಿಳಿದವು. ಉಕ್ಕಿನ ತಂಡ ಜೆಮ್ಶೆಡ್ಪುರ ಈ ಬಾರಿ ಮನೆಯಂಗಣದಲ್ಲಿ ಆಡಿರುವ ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಆತಿಥೇಯ ತಂಡದ ಪರ ಸೆರ್ಗಿಯೋ ಕ್ಯಾಸ್ಟಲ್ ಹಾಗೂ ಫಾರುಖ್ ಚೌಧರಿ ಉತ್ತಮ ಪ್ರದರ್ಶನ ತೋರಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಅದೇ ರೀತಿ ಭರವಸೆಯ ಆಟಗಾರ ಸಿ ಕೆ ವಿನೀತ್ ಲಯ ಕಂಡುಕೊಂಡರೆ ನಾರ್ತ್ ಈಸ್ಟ್ ತಂಡಕ್ಕೆ ಜಯದ ಹಾದಿ ಕಠಿಣವಾಗಬಹುದು. ಐತೋರ್ ಮನ್ರೋಯ್ , ಮೆಮೊ ಮೌರಾ ಮತ್ತ್ತು ನೋಯೆ ಅಕೋಸ್ಟ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಪಿಟಿ ಅವರು ಗಾಯಗೊಂಡಿರುವುದು ಈ ಆಟಗಾರರಿಗೆ ಉತ್ತಮ ಬೆಂಬಲದ ಕೊರತೆಯಾಗಲಿದೆ. ಹಿಂದಿನ ಪಂದ್ಯದಲ್ಲಿ ಕ್ಲೀನ್ ಶೀಟ್ ಸಾಧನೆ ಮಾಡಿರುವುದರಿಂದ ತಂಡದಲ್ಲಿ ಹೆಚ್ಚಿನ ಬದಲಾವಣೆಯ ನಿರೀಕ್ಷೆ ಇರಲಿಲ್ಲ.
ಪರ್ವತ ಪ್ರದೇಶದ ತಂಡ ನಾರ್ತ್ ಈಸ್ಟ್ ಉತ್ತಮ ಡಿಫೆನ್ಸ್ ವಿಭಾಗವನ್ನು ಹೊಂದಿದೆ. ಮನೆಯಂಗಣದ ಹೊರಗಡೆ ಆಡಿದ ಪಂದ್ಯದಲ್ಲಿ ನಾರ್ತ್ ಈಸ್ಟ್ ಇದುವರೆಗೂ ಎದುರಾಳಿ ತಂಡಕ್ಕೆ ಗೋಲು ನೀಡಿರಲಿಲ್ಲ, ಅದೇ ಹಂತವನ್ನು ಕಾಯ್ದುಕೊಳ್ಳುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಮುಂಭಾಗದಲ್ಲಿ ಅಸಮಾಹ್ ಗ್ಯಾನ್ ತಂಡದ ಪಾಲಿಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದುವರೆಗೂ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಿಲ್ಲ, ಆದರೆ ಅವಕಾಶಕ್ಕಾಗಿ ಕಾಯುತ್ತಿರುವ ಗ್ಯಾನ್ ಅತ್ಯಂತ ಅಪಾಯಕಾರಿ ಆಟಗಾರ. ಪನಾಗಿಯೋಟಿಸ್ ಟ್ರೀಡಿಸ್ ಮತ್ತು ರೆಡೀಮ್ ತ್ಲ್ಯಾಂಗ್ ತಂಡಕ್ಕೆ ಗೋಲು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಅದೇ ರೀತಿಯ ಆಟವನ್ನು ಮುಂದುವರಿಸುವ ಆತ್ಮವಿಶ್ವಾಸದೊಂದಿಗೆ ತಂಡ ಅಂಗಣಕ್ಕಿಳಿಯಿತು.ಕಯ್ ಹೀರಿಂಗ್ಸ್ ಇನ್ನೂ ಅಮಾನತಿನಲ್ಲಿರುವುದರಿಂದ ಮಿಸ್ಲಾವ್ ಕೊಮೊರ್ಸ್ಕಿ ಅಂಗಣಕ್ಕಿಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications