For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ ಎಲ್ 2019: ಜಯದೊಂದಿಗೆ ಲೀಗ್ ಹಂತ ಮುಗಿಸಿದ ಎಟಿಕೆ

ISL: ATK 2 DDFC 1: ATK grab late winner to end season on a winning note

ಕೋಲ್ಕೊತಾ, ಮಾರ್ಚ್ 4: ಅಂಕಿತ್ ಮುಖರ್ಜಿ (88ನೇ ನಿಮಿಷ ) ಹಾಗೂ ಎಡು ಗಾರ್ಸಿಯಾ (63ನೇ ನಿಮಿಷ) ಗಳಿಸಿದ ಗೋಲಿನಿಂದ ಇಂಡಿಯನ್ ಸೂಪರ್ ಲೀಗ್ ನ ಕೊನೆಯ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್ ತಂಡವನ್ನು 2-1 ಗೋಲಿನಿಂದ ಮಣಿಸಿದ ಎಟಿಕೆ ತಂಡ ಜಯದೊಂದಿಗೆ ಲೀಗ್ ಕೊನೆಗೊಳಿಸಿತು. ಡೆಲ್ಲಿ ಡೈನಮೋಸ್ ಪರ ನಂದಕುಮಾರ್ ಶೇಖರ್ (72ನೇ ನಿಮಿಷ) ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತೇ ವಿನಃ ಡೆಲ್ಲಿಯ ಸೋಲಿಗೆ ತಡೆ ತರಲಿಲ್ಲ.

ಗೋಲಿಲ್ಲದ ಪ್ರಥಮಾರ್ಧ
ಎಟಿಕೆ ಹಾಗೂ ಡೆಲ್ಲಿ ತಂಡಗಳು ಮೊದಲ ಅವಧಿಯಲ್ಲಿ ಆಕ್ರಮಣಕಾರಿ ಆಟಕ್ಕೆ ಮನಸ್ಸು ಮಾಡಲಿಲ್ಲ. ಎಟಿಕೆ ಮನೆಯಂಗಣದ ಪ್ರೇಕ್ಷಕರಿಗೆ ಖುಷಿಯ ಕ್ಷಣಗಳನ್ನು ನೀಡುವ ಸಲುವಾಗಿ ಕೆಲ ಹೊತ್ತು ಆಕ್ರಮಣಕಾರಿ ಆಟಕ್ಕೆ ಮನ ಮಾಡಿದರೂ ಗೋಲು ಮಾತ್ರ ಸಿಗಲಿಲ್ಲ. ಇದರೊಂದಿಗೆ ಪ್ರಥಮಾರ್ಧ ಸಮಬಲದಲ್ಲಿ ಕೊನೆಗೊಂಡಿತು.

ಇಂಡಿಯನ್ ಸೂಪರ್ ಲೀಗ್‌ನ ಕೊನೆಯ ಲೀಗ್ ಪಂದ್ಯ ಎಟಿಕೆ ಹಾಗೂ ಡೆಲ್ಲಿ ಡೈನಮೋಸ್ ನಡುವೆ ನಡೆಯಿತು. ಎರಡೂ ತಂಡಗಳು ಚಳಿಗಾಲದ ಬಿಡುವಿನ ನಂತರ ಉತ್ತಮ ರೀತಿಯಲ್ಲಿ ಹೋರಾಟ ನೀಡಿದ್ದವು.

1
1042976

ಆದರೆ, ಹಿಂದಿನ ಸೋಲುಗಳು ತಂಡಗಳನ್ನು ಸೆಮಿಫೈನಲ್ ಹಂತಕ್ಕೆ ಕೊಂಡೊಯ್ಯಲು ಅವಕಾಶ ನೀಡಲಿಲ್ಲ. ಈಗ ಗೆದ್ದರೆ ಯಾವುದೇ ಪ್ರಯೋಜನವಿಲ್ಲ. ಆದರೂ ಮನೆಯಂಗಣದಲ್ಲಿ ಗೆದ್ದು ಪ್ರಸಕ್ತ ಲೀಗ್‌ಗೆ ವಿದಾಯ ಹೇಳುವ ಗುರಿ ಕೋಲ್ಕೊತಾದ ತಂಡಕ್ಕಿದ್ದರೆ, ಕೊನೆಯ ಲೀಗ್‌ನಲ್ಲಿ ಜಯ ಗಳಿಸಿ ನೆಮ್ಮದಿಯಲ್ಲಿ ಮನೆ ಸೇರುವ ಆತುರ ಡೆಲ್ಲಿ ಡೈನಮೋಸ್‌ಗೆ.

ಏಳು ಮತ್ತು ಎಂಟನೇಯ ಸ್ಥಾನದಲ್ಲಿರುವ ಎಟಿಕೆ ಹಾಗೂ ಡೆಲ್ಲಿ ತಂಡಗಳಿಗೆ ಕೊನೆಗೊಂದು ಜಯ ಗಳಿಸುವ ಹಂಬಲ, ಹಿಂದಿನ ಮುಖಾಮುಖಿ ಇಂದಿನ ಫಲಿತಾಂಶದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು, ಆಡಿರುವ ಒಂಬತ್ತು ಪಂದ್ಯಗಳಲ್ಲಿ 4 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದ್ದು, 3 ಪಂದ್ಯಗಳಲ್ಲಿ ಎಟಿಕೆ ಗೆದ್ದಿದೆ, 2 ಪಂದ್ಯ ಡೆಲ್ಲಿಯ ಪಾಲಾಯಿತು.

ಎಟಿಕೆ ತಂಡ ಬಾರಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಅಂತಿಮ ನಾಲ್ಕರ ಹಂತ ತಲಪುವ ಅವಕಾಶಗಳು ಕೂಡಿ ಬಂದಿದ್ದರೂ ನಿರಂತರ ವೈಫಲ್ಯ ತಂಡಕ್ಕೆ ಆ ಅವಕಾಶದಿಂದ ವಂಚಿತವಾಗುವಂತೆ ಮಾಡಿತು. ಡೈನಮೋಸ್ ಕೂಡ ಆರಂಭದಿಂದಲೂ ಕಳಪೆ ಪ್ರದರ್ಶನ ತೋರುತ್ತಿತ್ತು. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಜಯ ಗಳಿಸಿದರೂ ಆಗಲೇ ಕಾಲ ಮೀರಿತ್ತು. ಆರು ಪಂದ್ಯಗಳಲ್ಲಿ ಡೆಲ್ಲಿ ಅಜೇಯವಾಗಿ ಸಾಗಿ ಬಂದಿತ್ತು.

ತಂಡದಲ್ಲಿ ಸ್ಫೂರ್ತಿಯನ್ನು ಕಾಯ್ದುಕೊಳ್ಳುವುದಕ್ಕಾಗಿ ಕೊನೆಯ ಲೀಗ್ ಪಂದ್ಯದಲ್ಲೂ ಜಯ ಗಳಿಸಿ ಸಪ್ತ ಯಶಸ್ಸು ಕಾಣುವ ಗುರಿ ಹೊಂದಿದೆ. ಡೆಲ್ಲಿ ತಂಡ ಇಲ್ಲಿ ಜಯ ಅಥವಾ ಡ್ರಾ ಗಳಿಸಿದರೂ ಲೀಗ್‌ನಲ್ಲೇ ಮೊದಲ ಬಾರಿಗೆ ಉತ್ತಮ ಸ್ಥಾನವನ್ನು ತಲುಪಿದ ಸಾಧನೆ ಮಾಡಲಿದೆ. ಆದರೆ, ಮನೆಯಂಗಣದಲ್ಲಿ ಎಟಿಕೆ ಇದಕ್ಕೆ ಅವಕಾಶ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕು.

Story first published: Monday, March 4, 2019, 10:54 [IST]
Other articles published on Mar 4, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+