For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ವ್ಯತಿರಿಕ್ತ ಹೋರಾಟಕ್ಕೆ ಮುಂಬೈ ಮತ್ತು ಒಡಿಶಾ ಸಜ್ಜು

By Isl Media
ISL: Battle of contrasts as Mumbai City face Odisha

ಮುಂಬೈ, ಅಕ್ಟೋಬರ್ 31: ಹೀರೊ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮನೆಯಂಗಣದಲ್ಲಿ ಮೊದಲ ಪಂದ್ಯಕ್ಕೆ ಸಜ್ಜಾಗಿರುವ ಮುಂಬೈ ಸಿಟಿ ಎಫ್ ಸಿ, ಜಯದ ನಾಗಾಲೋಟವನ್ನು ಮುಂದುವರಿಸಲು ಗುರುವಾರ ಮುಂಬೈ ಫುಟ್ಬಾಲ್ ಅರೇನಾದಲ್ಲಿ ಒಡಿಶಾ ವಿರುದ್ಧ ಹೋರಾಟ ನಡೆಸಲಿದೆ.

ಈ ಋತುವಿನಲ್ಲಿ ಮನೆಯಂಗಣದ ಹೊರಗಡೆ ಅಭಿಯಾನ ಆರಂಭಿಸಿದ ಮುಂಬೈ ತಂಡ ಕೇರಳ ವಿರುದ್ಧದ ಮೊದಲ ಪಂದ್ಯದಲ್ಲಿ ಜಯ ಗಳಿಸಿ ಚೆನ್ನೈಯಿನ್ ಎಫ್ ಸಿ ವಿರುದ್ಧ ಡ್ರಾ ಸಾಧಿಸಿತ್ತು. ಮನೆಯಂಗಣದ ಹೊರಗಡೆ ಯಶಸ್ಸಿನ ಹೆಜ್ಜೆ ಇಟ್ಟಿರುವ ಮುಂಬೈ ಈಗ ಆಡಿರುವ ಎರಡು ಪಂದ್ಯಗಳಲ್ಲಿ ಉತ್ತಮ ಹೋರಾಟ ನೀಡಿ ಸೋಲು ಅನುಭವಿಸಿರುವ ಒಡಿಶಾ ವಿರುದ್ಧ ಮೂರು ಅಂಕ ಗಳಿಸುವ ಗುರಿ ಹೊಂದಿದೆ.

ಆಟದ ಶೈಲಿಯಲ್ಲಿ ವಿಭಿನ್ನವಾಗಿರುವ ಇಬ್ಬರು ಕೋಚ್ ಗಳಲ್ಲಿ ತರಬೇತಿ ಪಡೆದಿರುವ ತಂಡಗಳ ನಡುವಿನ ಹೋರಾಟ ನಿಜವಾಗಿಯೂ ವೈರುಧ್ಯ ಎನಿಸಿದೆ.

ಜಾರ್ಜ್ ಕೋಸ್ಟಾ ಅವರ ಪಡೆ ತಾಳ್ಮೆಯ ಆಟಕ್ಕೆ ಹೆಸರಾಗಿದ್ದು, ಒತ್ತಡವನ್ನು ನಿಭಾಯಿಸಿಕೊಂಡು ಸಂದರ್ಭ ನೋಡಿ ಆಟವಾಡುವ ತಂಡವಾಗಿದೆ. ಚೆಂಡನ್ನು ಹೆಚ್ಚು ಕಾಲ ನಿಯಂತ್ರಿಸಿ ಆಟವಾಡುವ ಫುಟ್ಬಾಲ್ ಶೈಲಿಗೆ ಕೋಸ್ಟಾ ಹೆಚ್ಚು ಬೆಲೆ ನೀಡುವುದಿಲ್ಲ. ಜೋಸೆಫ್ ಗುಂಬಾವ್ ಅವರ ಒಡಿಶಾ ತಂಡ ಅತ್ಯಂತ ಆತ್ಮವಿಶ್ವಾಸದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಒಡಿಶಾ ತಂಡದ ಡಿಫೆನ್ಸ್ ವಿಭಾಗ ಎರಡು ಪಂದ್ಯಗಳಲ್ಲಿ ವಿಫಲವಾಗಿದ್ದು ನಾಲ್ಕು ಗೋಲುಗಳನ್ನು ನೀಡಿದೆ. ಜೇಮ್ಶೆಡ್ಪುರ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡದಲ್ಲಿ ಕೇವಲ ಹತ್ತು ಮಂದಿ ಆಟಗಾರರಿರುವಾಗ ಗೋಲು ಗಳಿಸುವುದು ಸುಲಭ, ಆದರೆ ಒಡಿಶಾದ ಫೈಫೆನ್ಸ್ ವಿಭಾಗ ಜೇಮ್ಶೆಡ್ಪುರಕ್ಕೆ ಗೋಲು ಗಳಿಸಲು ಅವಕಾಶ ಮಾಡಿಕೊಟ್ಟು ಸೊಲುಪ್ಪಿಕೊಂಡಿತು.

ISL: Battle of contrasts as Mumbai City face Odisha

''ನಾವು ಇದುವರೆಗೂ ಫಲಿತಾಂಶ ಕಂಡಿಲ್ಲ, ಮೊದಲ ಪಂದ್ಯದಲ್ಲಿ ಪಾಸ್ ಗಳಲ್ಲಿ ನಿಖರತೆ ಇದ್ದಿರಲಿಲ್ಲ,ಆದರೆ ಎರಡನೇ ಪಂದ್ಯದಲ್ಲಿ ನಮ್ಮ ಆಟಗಾರರು ಉತ್ತಮವಾಗಿಯೇ ಆಡಿದ್ದರು. ಮಾಡಿದ ಸಣ್ಣ ತಪ್ಪುಗಳಿಗೆ ನಾವು ಬೆಲೆ ತೆರಬೇಕಾಯಿತು. ಆದರೂ ನಾವು ನಿಯಂತ್ರಣ ಸಾಧಿಸಿ ಅವಕಾಶಗಳನ್ನು ಸೃಷ್ಟಿ ಮಾಡಿದ್ದೆವು. ನಮ್ಮ ತಂಡ ಉತ್ತಮವಾಗಿ ಆಡುತ್ತಿದೆ, ಆದರೆ ಶೂನ್ಯ ಅಂಕದಲ್ಲಿರುವ ತಂಡ ನಮ್ಮದಲ್ಲ, ನಾಳೆಯ ಪಂದ್ಯದಲ್ಲಿ ನಮ್ಮ ತಂಡ ಉತ್ತಮವಾಗಿ ಆಡುತ್ತದೆ ಎಂಬ ನಂಬಿಕೆ ಇದೆ,'' ಗೊಂಬಾವ್ ಹೇಳಿದ್ದಾರೆ.

ಆಡಿರುವ ಎರಡೂ ಪಂದ್ಯಗಳಲ್ಲಿ ಗೋವಾ ಎಫ್ ಸಿ ಕೊನೆಯ ಹತ್ತು ನಿಮಿಷಗಳಲ್ಲಿ ಎದುರಾಳಿ ತಂಡಕ್ಕೆ ಗೋಲು ಗಳಿಸುವ ಅವಕಾಶ ಮಾಡಿಕೊಟ್ಟು ಸೋತಿತು. ಇದರ ಬಗ್ಗೆ ಗೊಂಬಾವ್ ಹಾಗೂ ತಂಡದ ಆಟಗಾರರು ಯೋಚಿಸಬೇಕಾಗಿದೆ. ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ರೆಡ್ ಕಾರ್ಡ್ ಪಡೆದು ಹೊರನಡೆದ ಕಾರ್ಲೋಸ್ ಡೆಲ್ಗಡೊ ಅವರ ಅನುಪಸ್ಥಿತಿ ತಂಡದ ಮೇಲೆ ಪರಿಣಾಮ ಬಿದ್ದಿರುವುದು ಸ್ಪಷ್ಟ.

ಒಡಿಶಾ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ
''ಈಗ ಇರುವ ಒಡಿಶಾ ಎಫ್ ಸಿ ಹಿಂದೆ ಡೆಲ್ಲಿ ಡೈನಮೋಸ್ ಆಗಿತ್ತು. ಕಳೆದ ಋತುವಿನಲ್ಲಿ ಉತ್ತಮವಾಗಿ ಆಡಿತ್ತು. ಆ ತಂಡ ಅಂಗಣದಲ್ಲಿ ಉತ್ತಮ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಅವರನ್ನು ಗೌರವಿಸಬೇಕು. ನಾವು ಎದುರಾಳಿ ತಂಡವನ್ನು ಹಗುರವಾಗಿ ಕಾಣುವುದಿಲ್ಲ,'' ಎಂದು ಕೋಸ್ಟಾ ಹೇಳಿದ್ದಾರೆ.

''ಎರಡು ಪಂದ್ಯಗಳ ನಂತರ ನಾನು ನೂರು ಪ್ರತಿಶತ ಖುಷಿಯಾಗಿಲ್ಲ. ನಾವು ಇನ್ನೂ ಕಠಿಣ ಅಭ್ಯಾಸ ಮಾಡಿ ಉತ್ತಮವಾಗಿ ಆಡಬೇಕಿದೆ. ನನ್ನ ಆಟಗಾರರು ದಿನವೂ ಉತ್ತಮವಾಗಿ ಅಭ್ಯಾಸ ಮಾಡುತ್ತಿದ್ದಾರೆ, ಎಲ್ಲರೂ ಒಂದಾಗಿ ಖುಷಿಯಾಗಿದ್ದಾರೆ,'' ಎಂದರು.

ಮುಂಬೈ ತಂಡ ಮ್ಯಾಟೋ ಗ್ರಾಜಿಕ್ ಅವರ ಸೇವೆಯಿಂದ ವಂಚಿತವಾಗಲಿದೆ. ಬ್ಯಾಕ್ ಲೇನ್ ನಲ್ಲಿ ಎಲ್ಲ ಭಾರತೀಯ ಆಟಗಾರರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಚೆನ್ನೈಯಿನ್ ಎಫ್ ಸಿ ವಿರುದ್ಧ ಇದೇ ಹೊಂದಾಣಿಕೆಯಿಂದಾಗಿ ಕ್ಲೀನ್ ಶೀಟ್ ದಕ್ಕಿತ್ತು. ಪೌಲೊ ಮಚಾಡೋ ಹಾಗೂ ಮೊದೌ ಸೌಗೌ ಅವರ ಸೇವೆಯೂ ಅಲಭ್ಯವಾಗುವ ಸಾಧ್ಯತೆ ಇದೆ.

ಮುಂಬೈ ಎಫ್ ಸಿ ಮನೆಯಂಗಣದಲ್ಲಿ ಜಯದ ಆರಂಭ ಕಾಣಬಹುದೇ, ಅಥವಾ ಒಡಿಶಾ ಎಫ್ ಸಿ ಮೊದಲ ಜಯದ ರುಚಿ ಸವಿಯಬಹುದೇ?

Story first published: Wednesday, October 30, 2019, 23:28 [IST]
Other articles published on Oct 30, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+