ಐಎಸ್‌ಎಲ್: ಟಾಟಾ ಪಡೆಯ ಹ್ಯಾಟ್ರಿಕ್‌ಗೆ ಅಡ್ಡಿಯಾಗಲಿದೆಯೇ ಬೆಂಗಳೂರು?

ಜೇಮ್ಶೆಡ್ಪುರ, ನವೆಂಬರ್ 3: ಇಲ್ಲಿನ ಜೆ.ಆರ್. ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ನ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆಗಾಗಿ ಸಜ್ಜಾಗಿರುವ ಜೇಮ್ಶೆಡ್ಪುರ ಎಫ್ ಸಿ ವಿರುದ್ಧ ಬೆಂಗಳೂರು ಎಫ್ ಸಿ ಹೋರಾಟ ಮಾಡಲಿದೆ.
ಒಡಿಶಾ ಎಫ್ ಸಿ ಹಾಗೂ ಹೈದರಾಬಾದ್ ವಿರುದ್ಧ ನಡೆದ ಪಂದ್ಯಗಳಲ್ಲಿ ಜಯ ಗಳಿಸಿದ ಉಕ್ಕಿನ ತಂಡ ಆರು ಅಂಕ ಗಳಿಸಿ ಈ ಬಾರಿಯ ಲೀಗ್ ನಲ್ಲಿ ಉತ್ತಮ ಆರಂಭ ಕಂಡಿದೆ. ಕೋಚ್ ಅಂಟೋನಿಯೋ ಇರಿಯೊಂಡೋ ಆಕ್ರಮಣಕಾರಿ ಫುಟ್ಬಾಲ್ ಮಾದರಿಯನ್ನು ಪ್ರದರ್ಶಿಸಿ ಯಶಸ್ಸು ಕಂಡರು. ಮಿಡ್ ಫೀಲ್ಡ್ ವಿಭಾಗದಲ್ಲಿರುವ ಪಿಟಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎದುರಾಳಿ ತಂಡದ ಡಿಫೆನ್ಸ್ ವಿಭಾಗವನ್ನು ಚದುರಿಸಿ ಉತ್ತಮ ಅವಕಾಶವನ್ನು ನಿರ್ಮಿಸುವಲ್ಲಿ ಪಿಟಿ ನಿಸ್ಸೀಮರು. ಎರಡು ಪಂದ್ಯಗಳನ್ನಾಡಿ ಇನ್ನೂ ಜಯ ಕಾಣದಿರುವ ಬೆಂಗಳೂರು ತಂಡಕ್ಕೆ ಪಿಟಿ ದಿಟ್ಟ ಸವಾಲಾಗುವುದು ಸ್ಪಷ್ಟ.
''ವಿರುದ್ಧ ಆಡುವುದು ಕಠಿಣ ಸವಾಲು. ಅವರದ್ದು ಉತ್ತಮ ತಂಡ. ಅಂಕ ಪಟ್ಟಿ ನೋಡಿಕೊಂಡು ತಂಡದ ಸಾಮರ್ಥ್ಯವನ್ನು ಅಳೆಯುವುದು ಸರಿಯಲ್ಲ. ಆದರೆ ನಮ್ಮ ತಂಡ ಉತ್ತಮವಾಗಿ ಆಡುತ್ತಿದೆ, ಆದ್ದರಿಂದ ನಮಗೆ ಗೆಲ್ಲುವ ಅವಕಾಶ ಇದೆ. ಮುಖ್ಯವಾದ ಅಂಶ ಎಂದರೆ ನಾವು ನಮ್ಮ ಸಾಮರ್ಥ್ಯ ಹಾಗೂ ನಮ್ಮ ತಂಡದ ಬಗ್ಗೆ ಯೋಚಿಸಬೇಕು ವಿನಃ ಎದುರಾಳಿಯ ಬಗ್ಗೆ ಅಲ್ಲ,'' ಎಂದು ಇರಿಯೊಂಡೋ ಹೇಳಿದ್ದಾರೆ.

ಎರಡು ಗೋಲು ಗಳಿಸಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅದ್ಭುತ ಪ್ರವೇಶ ಕಂಡ ಜೆಮ್ಶೆಡ್ಪುರ ಸ್ಟ್ರೈಕರ್ ಸರ್ಗಿಯೊ ಕ್ಯಾಸ್ಟಲ್, ತಮ್ಮ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಕೇವಲ ವಿದೇಶಿ ಆಟಗಾರರು ಮಾತ್ರ ತಂಡದ ಯಶಸ್ಸಿಗೆ ಕಾರಣರಾಗಿಲ್ಲ, ದೇಶೀಯ ಆಟಗಾರರಾದ ಫಾರುಖ್ ಚೌಧರಿ, ಅನಿಕೇತ್ ಜಾಧವ್ ಮತ್ತು ಮೊಬಷಿರ್ ರಹಮಾನ್ ಉಕ್ಕಿನ ತಂಡದಸ್ಥಿರ ಪ್ರದರ್ಶನ ತೋರಿದ್ದಾರೆ.
ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಋತುವಿನ ಮೊದಲ ಜಯದ ಹುಡುಕಾಟದಲ್ಲಿದೆ.ಆಡಿರುವ ಎರಡೂ ಪಂದ್ಯಗಳಲ್ಲಿ ಡ್ರಾ ಸಾಧಿಸಿ ಅಂಕ ಹಂಚಿಕೊಂಡಿದೆ. ವಿರುದ್ಧದ ಮೊದಲ ಪಂದ್ಯದಲ್ಲಿ ಗೋಳಿಲ್ಲದೆ ಡ್ರಾ, ಹಾಗೂ ಗೋವಾ ವಿರುದ್ಧ ಅಂತಿಮ ಕ್ಷಣದಲ್ಲಿ ಫರಾನ್ ಕೊರೊಮಿನಾಸ್ ಗಳಿಸಿದ ಗೋಲಿನಿಂದಾಗಿ ಜಯದಿಂದ ವಂಚಿತವಾಗಿತ್ತು.
''ಗೋವಾ ವಿರುದ್ಧದ ಪಂದ್ಯದಿಂದ ನಾವು ಸಾಕಷ್ಟು ಧನಾತ್ಮಕ ಸಂಗತಿಗಳನ್ನು ತಿಳಿದುಕೊಂಡೆವು. ಗೋವಾ ವಿರುದ್ಧ ನಾವು ಆಡಿರುವ ರೀತಿ ಖುಷಿಕೊಟ್ಟಿದೆ, ಕೊರೋ ಗೆ ಗೋಲು ಗಳಿಸಲು ಹೆಚ್ಚಿನ ಅವಕಾಶ ನೀಡಲಿಲ್ಲ. ನಾವು ನಾಲ್ಕು ಅಂಕಗಳನ್ನು ಕಳೆದುಕೊಂಡೆವು, ಆದರೆ ಈಗ ಮತ್ತುಷು ಬಲಿಷ್ಟರಾಗಿ ಬಂದಿದ್ದೇವೆ, ನಾವು ಜೇಮ್ಶೆಡ್ಪುರ ವಿರುದ್ಧ ಇನ್ನಷ್ಟು ಉತ್ತಮವಾಗಿ ಆಡಲಿದ್ದೇವೆ,'' ಎಂದು ಬೆಂಗಳೂರು ಎಫ್ ಸಿ ಕೋಚ್ ಕಾರ್ಲೆಸ್ ಕುಡಾರ್ಟ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications