For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019-20: ಮುಂಬೈ ಸಿಟಿ ತಂಡಕ್ಕೆ ಅಮೂಲ್ಯ ಜಯ

ISL: Carlos comforts Mumbai back into top-four reckoning

ಮುಂಬೈ, ಫೆಬ್ರವರಿ 1: ಡಿಯಾಗೊ ಕಾರ್ಲೋಸ್ (44ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ನಾರ್ಥ್ ಈಸ್ಟ್ ಯುನೈಟೆಡ್ ಎಫ್ ಸಿ ತಂಡವನ್ನು 1-0 ಗೋಲಿನಿಂದ ಮಣಿಸಿದ ಮುಂಬೈ ಸಿಟಿ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನಗೆ ಅಗತ್ಯ ಇರುವ ನಾಲ್ಕನೇ ಸ್ಥಾನಕ್ಕೇರಿತು. ಒಡಿಶಾ ಎಫ್ ಸಿ ಕ್ರಮಾನುಗತ ಐದನೇ ಸ್ಥಾನ ತಲುಪಿತು.

ಮುಂಬೈ ಮೇಲುಗೈ
ಡಿಯಾಗೋ ಕಾರ್ಲೋಸ್ 44ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಮುಂಬೈ ಸಿಟಿ ಎಫ್ ಸಿ ಪ್ರಥಮಾರ್ಧದಲ್ಲಿ ಮೇಲುಗೈ ಸಾಧಿಸಿತು. ಮೊಹಮ್ಮದ್ ಲಾರ್ಬಿ ಎಡಭಾಗದಿಂದ ನೀಡಿದ ಪಾಸ್ ಗೋಲು ಗಳಿಕೆಯಲ್ಲಿ ಪ್ರಮುಖ ಪಾತ್ರವಹಿಸಿತು. ಜೋಸ್ ಲ್ಯೂಡೊ ಹೆಡರ್ ಮೂಲಕ ನಿಯಂತ್ರಿಸುವವರಿದ್ದರು, ಆದರೆ ಚೆಂಡು ನೇರವಾಗಿ ಕಾರ್ಲೋಸ್ ಅವರ ನಿಂತ್ರಣಕ್ಕೆ ಸಿಲುಕಿ ಸುಲಭ ಗೋಲು ದಾಖಲಾಯಿತು.

ನಾರ್ಥ್ ಈಸ್ಟ್ ಯುನೈಟೆಡ್ ಉತ್ತಮ ರೀತಿಯಲ್ಲೇ ಪೈಪೋಟಿ ನೀಡಿತ್ತು. ಆದರೆ ಗೋಲ್ ಬಾಕ್ಸ್ ಸಮೀಪಕ್ಕೆ ಬಂದರೂ ಗೋಲು ಗಳಿಸುವಲ್ಲಿ ವಿಫಲವಾಯಿತು. ಮೊಡೌ ಸೌಗೌ ಅವರಿಗೂ ಪ್ರಥಮಾರ್ಧದ ಕೊನೆಯ ಕ್ಷಣದಲ್ಲಿ ಗೋಲು ಗಳಿಸುವ ಅವಕಾಶ ಇದ್ದಿತ್ತು. ಆದರೆ ಅದನ್ನು ಗೋಲಾಗಿಸುವಲ್ಲಿ ವಿಫಲವಾದರು.

ISL: Carlos comforts Mumbai back into top-four reckoning

ಮುಂಬೈಗೆ ಗೆಲ್ಲಲೇಬೇಕು
ಮುಂಬೈ ಅಂತಿಮ ನಾಲ್ಕರಲ್ಲಿ ಕಾಣಿಸಿಕೊಳ್ಳುವ ಅರ್ಹತೆ ಹೊಂದಿರುವ ತಂಡ, ನಾರ್ಥ್ ಈಸ್ಟ್ ವಿರುದ್ಧ ಜಯ ಗಳಿಸಿದರೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿಯಲಿದೆ. ಇದರಿಂದ ಸದ್ಯ ನಾಲ್ಕನೇ ಸ್ಥಾನದಲ್ಲಿರುವ ಒಡಿಶಾ ಐದನೇ ಸ್ಥಾನಕ್ಕೆ ಕುಸಿಯಲಿದೆ. ಹಿಂದಿನ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಏಕೈಕ ಗೋಲಿನಿಂದ ಡ್ರಾ ಸಾಧಿಸಿರುವುದು ಮುಂಬೈಯ ಸಂಕಷ್ಟದ ಸ್ಥಿತಿಗೆ ಮತ್ತೊಂದು ಕಾರಣ.

ಮನೆಯಂಗಣದಲ್ಲಿ ಮೂರನೇ ಜಯದ ನಿರೀಕ್ಷೆಯಲ್ಲಿರುವ ಮುಂಬೈ ತಂಡಕ್ಕೆ 19 ವರ್ಷದ ಆಟಗಾರ ಹಿಮಿಂಗ್ತಾನ್ ಮಾವಿಯಾ ಅವರು ಮ್ಯಾಟೋ ಗ್ರಿಗಿಕ್ ಅವರನ್ನು ಸೇರಿಕೊಳ್ಳಲಿದ್ದಾರೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ರೌಲಿನ್ ಬೋರ್ಗಸ್ ಹಾಗೂ ಸೌರವ್ ದಾಸ್ ಉತ್ತಮ ಪ್ರದರ್ಶನ ನೀಡಿರುವುದು ತಂಡದ ಮನೋಬಲವನ್ನು ಹೆಚ್ಚಿಸಿದೆ. ಹೈದರಾಬಾದ್ ವಿರುದ್ಧ ಅವಕಾಶಗಳನ್ನು ನಿರ್ಮಿಸುವಲ್ಲಿ ತಂಡ ವಿಫಲವಾಗಿರುವ ಕಾರಣ ಕೋಸ್ಟಾ ಪಡೆ ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಅಂಗಣಕ್ಕಿಳಿಯಿತು. ಪ್ರವಾಸಿ ನಾರ್ಥ್ ಈಸ್ಟ್ ಋತುವಿನಲ್ಲಿ ಅತಿ ಕಡಿಮೆ ಗೋಲು ಗಳಿಸಿದ ತಂಡವೆನಿಸಿದೆ.

ಮನೆಯಂಗಣದ ಹೊರಗೆ ನಡೆದ ಮೂರು ಪಂದ್ಯಗಳಲ್ಲಿ ಮಾತ್ರ ತಂಡ ಗೋಲು ಗಳಿಸಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ತಂಡ ಗೋಲು ಗಳಿಸಿರಲೇ ಇಲ್ಲ, ಮಿಡ್ ಫೀಲ್ಡ್ ವಿಭಾಗದಲ್ಲಿ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡದಿರುವುದೇ ಹಿನ್ನಡೆಗೆ ಪ್ರಮುಖ ಕಾರಣ. ಗಾಯದ ಸಮಸ್ಯೆ ತಂಡದ ಹಿನ್ನಡೆಗೆ ಪ್ರಮುಖ ಕಾರಣ. ಸ್ಟಾರ್ ಸ್ಟ್ರೈಕರ್ ಅಸಮೋಹ್ ಗ್ಯಾನ್ ನಿರ್ಗಮಿಸಿದ ನಂತರ ತಂಡದ ಹಿನ್ನಡೆ ಆರಂಭವಾಯಿತು. ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ಆ್ಯಂಡಿ ಕಿಯೊಗ್ ಮತ್ತು ಸಿಮಾನ್ ಲುಂಡೆವೆಲ್ ಇನ್ನು ತಂಡಕ್ಕೆ ಹೊಂದಿಕೊಂಡಿಲ್ಲ. ಪ್ಲೇ ಆಫ್ ಅವಕಾಶದಿಂದ ದೂರ ಉಳಿದಿರುವ ರಾಬರ್ಟ್ ಜೆರ್ನಿ ಪಡೆ ಈ ಹಂತದಲ್ಲಿ ಅಂಕ ಕಳೆದುಕೊಂಡರೆ ಮತ್ತೆ ಚೇತರಿಕೆಗೆ ಅವಕಾಶ ಇರುವುದಿಲ್ಲ.

Story first published: Saturday, February 1, 2020, 9:59 [IST]
Other articles published on Feb 1, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+