Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್ 2020: ಚೆನ್ನೈಯಿನ್‌ಗೆ ಮನೆಯಂಗಣದಲ್ಲಿ ಗೆಲ್ಲೋ ಹಂಬಲ

ISL: Chennaiyin seek resurgence amidst tricky NorthEast tie

ಚೆನ್ನೈ, ಜನವರಿ 16: ಹೊಸ ಕೋಚ್ ಆಗಮನದ ನಂತರ ಜಯದ ಲಯಕ್ಕೆ ಮರಳಿದ ಚೆನ್ನೈಯಿನ್ ಎಫ್ ಸಿ ಗುರುವಾರ ಸಂಕಷ್ಟದಲ್ಲಿರುವ ನಾರ್ಥ್ ಈಸ್ಟಟ್ ಯುನೈಟೆಡ್ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದ ಸಮೀಪ ತಲಪುವ ಗುರಿ ಹೊಂದಿದೆ.

ಓವೆನ್ ಕೊಯ್ಲ್ ಕೋಚ್ ಆದಾಗಿನಿಂದ ಚೆನ್ನೈಯಿನ್ ತಂಡ ಐದು ಪಂದ್ಯಗಳಲ್ಲಿ ಎರಡು ಜಯ ಹಾಗೂ ಒಂದು ಡ್ರಾ ಮೋಲಕ 7 ಆಂಕ ಗಳಿಸಿದೆ. ಹಿಂಚ್ ಆರು ಪಂದ್ಯಗಳಲ್ಲಿ ಗಳಿಸಿದ್ದು ಐದು ಅಂಕಗಳು ಎಂಬುದು ಗಮನಾರ್ಹ. ತಂಡದಲ್ಲಿ ಕಂಡು ಬಂದ ಹೊಸ ಬದಲಾವಣೆ ಎಂದರೆ ಕೊನೆಯ ಸ್ಥಾನದಿಂದ ಮೇಲಕ್ಕೇರಿರುವುದು.

11 ಪಂದ್ಯಗಳಿಂದ 12 ಅಂಕ ಗಳಿಸಿರುವ ಚೆನ್ನೈಯಿನ್ ತಂಡ ಈಗ ಎಂಟನೇ ಸ್ಥಾನದಲ್ಲಿದೆ. ಇತರ ತಂಡಗಳಿಗಿಂತ ಒಂದು ಪಂದ್ಯವನ್ನು ಹೆಚ್ಚುಹೊಂದಿರುವ ಚೆನ್ನೈ ತಂಡಕ್ಕೆ ಅಂತಿಮ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗಲು ಇನ್ನೂ ಆರು ಅಂಕಗಳ ಅಗತ್ಯ ಇದೆ. ಆ ಸ್ಥಾನವನ್ನು ಒಡಿಶಾ ಎಫ್ ಸಿ ಸದಯ ತನ್ನದಾಗಿಸಕೊಂಡಿದೆ.

1
2026486

''ಪ್ಲೇ ಆಫ್ ಹಂತ ತಲುಪಲು ನಮಗೆ ಈಗಲೈ ಸಾಧ್ಯತೆ ಇದೆ,. ಉಳಿದಿರುವ ಪಂದ್ಯಗಳನ್ನು ಗೆದ್ದಾಗ ಮಾತ್ರ ಇದು ಸಾಧ್ಯ. ಮೂರು ಅಂಕಗಳುನ್ನು ಗಳಿಸುವುದು ಈಗ ಮುಖ್ಯವಾಗಿದೆ. ಏಕೆಂದರೆ ಲೀಗ್ ನಲ್ಲಿ ಜಯಕ್ಕಿಂಥ ಡ್ರಾ ಗಳಿಸಿರುವುದೇ ಹೆಚ್ಚು. ಆದ್ದರಿಂದ ಅಂಕ ಪಟ್ಟಿಯಲ್ಲಿ ಮೇಲಕ್ಕೇರಬೇಕಾದರೆ ಮೂರು ಅಂಕಗಳೇ ಪ್ರಮುಖವಾಗಿರುತ್ತವೆ,'' ಎಂದು ಚೆನ್ನೈಯಿನ್ ತಂಡದ ಪ್ರಧಾನ ಕೋಚ್ ಹೇಳಿದ್ದಾರೆ.

ISL: Chennaiyin seek resurgence amidst tricky NorthEast tie

ನಾರ್ಥ್ ಈಸ್ಟ್ ಯುನೈಟೆಡ್ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರುತ್ತ ಬಂದಿದೆ. ಕಳೆದ ಆರು ಪಂದ್ಯಗಳಲ್ಲಿ ತಂಡ ಜಯ ಕಂಡಿರಲಿಲ್ಲ. ಉತ್ತಮ ರೀತಿಯಲ್ಲಿ ಋತುವನ್ನು ಆರಂಭಿಸಿದ ತಂಡ ನಂತರ ಗೋಲು ಗಳಿಸುವಲ್ಲಿ ವಿಫಲವಾಗಿರುವುದೇ ಹಿನ್ನಡೆಗೆ ಕಾರಣ. ಗಾಯದ ಕಾರಣ ಪ್ರಮುಖ ಆಟಗಾರ ಹಾಗೂ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿರುವ ಅಸಮೋಹ್ ಗ್ಯಾನ್ ಇಂಡಿಯನ್ ಸೂಪರ್ ಲೀಗ್ ನಿಂದಲೇ ಹೊರನಡೆದಿದ್ದಾರೆ. ಜನವರಿಯಲ್ಲಿ ನಡೆಯಲಿರುವ ವರ್ಗಾವಣೆಯಲ್ಲಿ ಉತ್ತಮ ಾಟಗಾರರನ್ನು ಆಯ್ಕೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಜೆರ್ನಿ ಇದ್ದಾರೆ.

''ಚಾಂಪಿಯನ್ಷಿಪ್ ನ ಆರಂಭದಲ್ಲಿ ನಾವು ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದೆವು. ಕೆಲವು ಪಂದ್ಯಗಳನ್ನು ಕಡೆ ಕ್ಷಣದಲ್ಲಿ ಗೋಲು ನೀಡುವ ಮೂಲಕ ಕಳೆದುಕೊಂಡೆವು. ನಮ್ಮ ತಂಡದಲ್ಲಿ ಭರವಸೆಯ ಯುವ ಆಟಗಾರರಿದ್ದಾರೆ. ತಂಡದಲ್ಲಿ ಗ್ಯಾನ್ ಆವರ ಅನುಪಸ್ಥಿತಿ ಕಾಡಲಿದೆ. ಅವರಿಂದಲೆ ನಾವು ಉತ್ತಮ ಪ್ರದರ್ಶನ ತೋರಬೇಕಾಗಿದೆ,'' ಎಂದು ಜರ್ನಿ ಹೇಳಿದ್ದಾರೆ.

''ನಾಳೆಯ ಪಂದ್ಯ ಅತ್ಯಂತ ಕಠಿಣ ಎನಿಸಲಿದೆ. ಚೆನ್ನೈಯಿನ್ ತಂಡದ ನೂತನ ಕೋಚ್ ಉತ್ತಮ ರೀತಿಯಲ್ಲಿ ತಂಡವನ್ನು ಸಜ್ಜುಗೊಳಿಸಿದ್ದಾರೆ, ಅವರದ್ದು ಉತ್ತಮ ತಂಡ, ಆದರೆ ನಮ್ಮ ಸಾಮರ್ಥ್ಯದ ಬಗೆಗೆ ನಮಗೆ ನಂಬಿಕೆ ಇದೆ. ನಮ್ಮ ಆಟದ ಬಗ್ಗೆ ನಮಗೆ ನಂಬಿಕೆ ಇದೆ. ನಾವು ಅಂತಿಮ ನಾಲ್ಕರಲ್ಲಿದ್ದೇವೆ, ಅದಕ್ಕಾಗಿ ನಾವಿಲ್ಲಿದ್ದೇವೆ,'' ಎಂದರು.

ಗೋವಾ ವಿರುದ್ಧದ ಪಂದ್ಯದಲ್ಲಿ ರೆಡ್ ಕಾರ್ಡ್ ಗೆ ಗುರಿಯಾದ ಜೋಸ್ ಲ್ಯುಡೋ ನಾಳೆಯ ಪಂದ್ಯದಿಂದ ವಂಚಿತರಾಗಲಿದ್ದಾರೆ, ಇದದರಿಂದ ನಾರ್ಥ್ ಈಸ್ಟ್ ನ ಶಕ್ತಿ ಮತ್ತಷ್ಟು ಕುಗ್ಗಲಿದೆ.

Story first published: Wednesday, January 15, 2020, 19:34 [IST]
Other articles published on Jan 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+