ಐಎಸ್‌ಎಲ್ 2019: ಫೈನಲ್ ಸೋತವರಿಗೆ ಪ್ರಶಸ್ತಿ ಗೆಲ್ಲುವ ಹಂಬಲ

ಸ್ಪೇನ್‌ನ ಆಟಗಾರ ತನ್ನ ತಂಡ ಸೋಲುವುದನ್ನು ಅಸಹಾಯಕತೆಯಿಂದ ಅಂಗಣದ ಹೊರಗಡೆ ಕುಳಿತು ನೋಡಿದರು. ಅದು ಕೂಡ ತಮ್ಮ ಮನೆಯಂಗಣದ ಪ್ರೇಕ್ಷಕರ ಸಮ್ಮುಖದಲ್ಲಿ ಈಗ ಬೆಂಗಳೂರು ತಂಡ ಫೈನಲ್ ತಲುಪಿದೆ, ಡೆಲ್ಗಾಡೋ ಅವರಿಗೆ ಹಿಂದಿನ ನೋವನ್ನು ಮರೆತು ಟ್ರೋಫಿಗೆ ಮುತ್ತಿಡಲು ಇದು ಸಕಾಲ. ಗೋವಾ ವಿರುದ್ಧ ಮುಂಬೈ ಫುಟ್ಬಾಲ್ ಅರೆನಾದಲ್ಲಿ 'ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿ ಗೆದ್ದು ಹಿಂದಿನ ನೋವನ್ನು ಮರೆಯುವುದಾಗಿ ಡೆಲ್ಗಾಡೋ ಹೇಳಿದ್ದಾರೆ.
ಫೈನಲ್ ತಲುಪಿರುವುದು ಖುಷಿ ಕೊಟ್ಟಿದೆ. ಈ ತಂಡ ಫೈನಲ್ ತಲುಪಲು ಸಾಕಷ್ಟು ಶ್ರಮವಹಿಸಿದೆ. ಎಲ್ಲರಿಗಿಂತ ಮುಖ್ಯವಾಗಿ ನನಗೆ ಸಂಭ್ರವೆನಿಸುತ್ತಿದೆ. ಕಳೆದ ಬಾರಿ ಫೈನಲ್‌ನಲ್ಲಿ ಅರ್ಧದಲ್ಲೇ ಅಂಗಣದಿಂದ ಹೊರ ನಡೆಯಬೇಕಾಯಿತು. ಈ ಬಾರಿ ನಾವು ನಮ್ಮಿಂದ ಸಾಧ್ಯವಾದಷ್ಟು ಉತ್ತಮವಾಗಿ ಆಡುತ್ತೇವೆ ಎಂಬ ಆತ್ಮವಿಶ್ವಾಸವಿದೆ,' ಎಂದು ಡೆಲ್ಗಾಡೋ ಹೇಳಿದ್ದಾರೆ.
ಗೋವಾ ತಂಡದವೂ ಕೂಡ ಫೈನಲ್‌ನಲ್ಲಿ ಸೋತು ಆಘಾತ ಅನು'ವಿಸಿದೆ. 2015ರಲ್ಲಿ ಮನೆಯಂಗಣದಲ್ಲಿ ನಡೆದ ಪಂದ್ಯದಲ್ಲಿ ಗೋವಾ ತಂಡ ಚೆನ್ನೈಯಿನ್ ವಿರುದ್ಧ ಸೋತು ಆಘಾತ ಕಂಡಿತ್ತು. ಈಗ ಗೋವಾ ತಂಡದ ನಾಯಕತ್ವ ವಹಿಸಿರುವ ಮಂದಾರ್ ರಾವ್ ದೇಸಾಯಿ ಅಂದು ಫೈನಲ್ ಆಡಿದ್ದ ತಂಡದಲ್ಲಿದ್ದರು. ಅಂದಿನ ನೋವಿನ ದಿನವನ್ನು ಮರೆತು ಸಂಭ್ರಮ ಆಚರಿಸುವ ಹಂಬಲದಲ್ಲಿದ್ದಾರೆ ದೇಸಾಯಿ.
'ಕಳೆದ ಬಾರಿಯ ಫೈನಲ್‌ನಲ್ಲಿ ನಾವು ಸೋತ ದಿನ ಇನ್ನೂ ನೆನಪಿದೆ. ನಾವು 3-2 ಗೋಲುಗಳ ಅಂತರದಲ್ಲಿ ಸೋತೆವು. ಈಗ ನಾವು ಹೆಚ್ಚಿನ ಸಮಯ ಚೆಂಡನ್ನು ನಿಯಂತ್ರಿಸಿ ಗೋಲು ಗಳಿಸುವ ಅವಕಾಶ ಸಿಕ್ಕಾಗ ದಾಳಿ ಮಾಡುತ್ತೇವೆ. ಇದಕ್ಕಿಂತ ಮೊದಲು ಎಲ್ಲವೂ ನೇರವಾಗಿತ್ತು. ಆಗ ನಾವು ಹೆಚ್ಚು ಕಾಲ ಚೆಂಡನ್ನು ನಿಯಂತ್ರಿಸುತ್ತಿಲ್ಲ. ಈಗ ಎಲ್ಲವೂ ಬದಲಾಗಿದೆ. ನಾವು ನಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಂಡಿದ್ದೇವೆ, 'ಭಾನುವಾರ ಆ ಗುರಿಯನ್ನು ತಲುಪುತ್ತೇವೆ, ' ಎಂದು ದೇಸಾಯಿ ಹೇಳಿದ್ದಾರೆ.
ವಿಂಗರ್ ಆಡಿ ತಂಡವನ್ನು ಸೇರಿಕೊಂಡ ಮಂದಾರ ದೇಸಾಯಿ, ಈಗ ಲೆಫ್ಟ್ ಬ್ಯಾಕ್‌ನಲ್ಲಿ ಪ್ರಮುಖ ಅಸ್ತ್ರವೆನಿಸಿದ್ದಾರೆ. ಕೋಚ್ ಸರ್ಗಿಯೋ ಲೊಬೆರಾ ಅವರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 'ನಾನು ಲೆಫ್ಟ್ ಬ್ಯಾಕ್‌ನಲ್ಲಿ ಉತ್ತಮವಾಗಿ ಆಡುತ್ತೇನೆ ಎಂದು ಕೋಚ್ ನಂಬಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ಉತ್ತಮವಾಗಿ ಆಡಲು ಪ್ರಯತ್ನ ಮಾಡುತ್ತೇವೆ, ಇದರಿಂದ ತಂಡಕ್ಕೆ ನೆರವಾಗುತ್ತದೆ ಎಂಬುದ ನನ್ನ ನಂಬಿಕೆ,' ಎಂದರು.
ಲೀಗ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿರುವ ಫೆರಾನ್ ಕೊರೊಮಿನಾಸ್ ಗೋವಾ ತಂಡದಲ್ಲಿದ್ದರೂ, ಬೆಂಗಳೂರು ವಿರುದ್ಧ ಪಂದ್ಯದಲ್ಲಿ ಅವರು ಇದುವರೆಗೂ ಮಿಂಚಿಲ್ಲ. ' ಈ ಋತುವಿನಲ್ಲಿ ಬೆಂಗಳೂರು ವಿರುದ್ಧ ಗೋಲ ಗಳಿಸಿಲ್ಲ ಎಂಬುದು ನಿಜ,ನಾನು ಮತ್ತು ನಮ್ಮ ತಂಡದ ಕೆಲವು ಆಟಗಾರರು ಅವಕಾಶ ಪಡೆದರೂ ಯಶಸ್ಸು ಕಾಣಲಿಲ್ಲ. ಆದರೆ ನಾಳೆಯದ್ದು ವಿಭಿನ್ನ, ನಾವು ಫೈನಲ್ ಆಡಲು ಉತ್ಸುಕರಾಗಿದ್ದೇವೆ,' ಎಂದು ಕೊರೊಮಿನಾಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications