ಐಎಸ್‌ಎಲ್ 2019: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಎಫ್‌ಸಿ ಗೋವಾ

ಗೋವಾ, ಫೆಬ್ರವರಿ 19: ಫೆರಾನ್ ಕೊರೊಮಿನಾಸ್ (22ನೇ ನಿಮಿಷ), ಎಡು ಗಾರ್ಸಿಯಾ (25ನೇ ನಿಮಿಷ) ಹಾಗೂ ಹ್ಯೂಗೋ ಭೌಮೋಸ್ (78ನೇ) ಅವರು ಗಳಿಸಿದ ಗೋಲಿನಿಂದ ಕೇರಳ ಎಫ್‌ಸಿ ತಂಡವನ್ನು 3-0 ಅಂತರದಲ್ಲಿ ಮಣಿಸಿ ಗೋವಾ ಎಫ್‌ಸಿ ಇಂಡಿಯನ್ ಸೂಪರ್ ಲೀಗ್ ನ ಸೆಮಿಫೈನಲ್ ಪ್ರವೇಶಿಸಿತು. ಬೆಂಗಳೂರು ಎಫ್‌ಸಿ ನಂತರ ಅಂತಿಮ ನಾಲ್ಕರ ಹಂತ ತಲುಪಿದ ಎರಡನೇ ತಂಡವೆನಿಸಿತು.
ಫೆರಾನ್ ಕೊರೊಮಿನಾಸ್ (22ನೇ ನಿಮಿಷ) ಹಾಗೂ ಎಡು ಗಾರ್ಸಿಯಾ (25ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಆತಿಥೇಯ ಗೋವಾ ತಂಡ ಪ್ರಥಮಾ'ರ್ಧದಲ್ಲಿ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಫೆರಾನ್ ಋತುವಿನ 14ನೇ ಗೋಲು ಗಳಿಸಿ ಚಿನ್ನದ ಬೂಟ್ ಸ್ಪರ್ಧೆಯಲ್ಲಿ ಮುನ್ನಡೆ ಕಾಯ್ದುಕೊಂಡರು. ಮಾತ್ರವಲ್ಲ ಗೋವಾಕ್ಕೆ ಜಯವನ್ನೂ ಖಚಿಪಡಿಸಿದರು.
ಬ್ರೆಂಡಾನ್ ಫೆರ್ನಾಂಡೀಸ್ ನೀಡಿದ ಪಾಸ್ ಕೊರೊಸ್ ಅವರ ನಿಯಂತ್ರಣಕ್ಕೆ ಸಿಕ್ಕಿತು. ಹೆಡರ್ ಮೂಲಕ ಗಳಿಸಿದ ಈ ಗೋಲು ಗೋವಾಕ್ಕೆ ಮುನ್ನಡೆ ತಂದುಕೊಟ್ಟಿತು. ಕೇರಳ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಕೊರೊ ಏಳನೇ ಗೋಲು ಗಳಿಸಿದರು.

ಕಳಪೆ ಮಟ್ಟದ ಪಾಸ್
ಮೊದಲ ಗೋಲು ಬಾರಿಸಿ ಮೂರು ನಿಮಿಷ ಕಳೆಯುತ್ತಿದ್ದಂತೆ ಗೋವಾ ಎರಡನೇ ಗೋಲು ಗಳಿಸಿತು. ಈ ಬಾರಿ ಎಡು ಗಾರ್ಸಿಯಾ ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಕೇರಳದ ಕಳಪೆ ಮಟ್ಟದ ಪಾಸ್ ಈ ರೀತಿಯ ಗೋಲಿಗೆ ಕಾರಣವಾಯಿತು. ಅನಾಸ್ ಎಡತೋಡಿಕಾ ನೀಡಿದ ಪಾಸ್ ಗೋಲ್ ಕೀಪರ್ ಧೀರಜ್ ಅವರು ಪಡೆದು ಸರಿಯಾದ ಸ್ಥಳಕ್ಕೆ ಕಳುಹಿಸಬೇಕಿತ್ತು. ಆದರೆ ಧೀರಜ್ ಸಿಂಗ್ ತುಳಿದ ಪಾಸ್ ಕೊರೊಮಿನಾಸ್ ಅವರ ನಿಯಂತ್ರಣಕ್ಕೆ ಸಿಕ್ಕಿತು. ಕೊರೊಮಿನಾಸ್ ನೇರವಾಗಿ ಎಡು ಗಾರ್ಸಿಯಾ ಅವರಿಗೆ ಪಾಸ್ ನೀಡಿದರು. ಬ್ರೆಜಿಲ್‌ನ ಆಟಗಾರ ಯಾವುದೇ ಪ್ರಮಾದವೆಸಗದೆ ಚೆಂಡನ್ನು ಗೋಲಾಗಿಸಿ ತಂಡಕ್ಕೆ 2-0 ಮುನ್ನಡೆ ಕಲ್ಪಿಸಿದರು.

ಮುಕ್ತಾಯದ ಹಂತ
ಈ ಬಾರಿಯ ಹೀರೋ ಇಂಡಿಯನ್ ಸೂಪರ್ ಲೀಗ್‌ನ 80ನೇ ಪಂದ್ಯದಲ್ಲಿ ಆತಿಥೇಯ ಗೋವಾ ತಂಡ ಪ್ರವಾಸಿ ಕೇರಳ ವಿರುದ್ಧ ಜಯ ಗಳಿಸಿ ಸೆಮಿಫೈನಲ್ ತಲುಪುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯದ ಹಂತ ತಲುಪುತ್ತಿವೆ.

ಮೂರು ಸ್ಥಾನಕ್ಕಾಗಿ ಹೋರಾಟ
ಮೂರು ತಂಡಗಳು ಉಳಿದಿರರುವ ಮೂರು ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿವೆ. ಮನೆಯಂಗಣದಲ್ಲಿ ಗೋವಾದ ಪಂದ್ಯವನ್ನು ನೋಡುವುದೇ ಸಂಭ್ರಮ. ಇಲ್ಲಿ ತಂಡ ಸೋತಿರುವುದೇ ಕಡಿಮೆ. ಆದ್ದರಿಂದ ಕೇರಳ ಬ್ಲಾಸ್ಟರ್ಸ್ ತಂಡ ಇಲ್ಲಿ ಗೆಲ್ಲುವ ಆಶಯವನ್ನು ಬದಿಗಿಟ್ಟು, ಉತ್ತಮ ಹೋರಾಟದ ನಿರೀಕ್ಷೆಯೊಂದಿಗೆ ಅಂಗಣಕ್ಕಿಳಿಯಿತು.

ತಡೆಯುವ ತಂಡಗಳೇ ಇಲ್ಲ
ಈ ಋತುವಿನಲ್ಲಿ ಅತಿ ಹೆಚ್ಚು ಗೋಲುಗಳನ್ನು ಗಳಿಸಿರುವ ಗೋವಾ ತಂಡವನ್ನು ತಡೆಯುವ ತಂಡಗಳೇ ಇಲ್ಲದಂತಾಗಿದೆ. ಫೆರಾನ್ ಕೊರೊಮಿನಾಸ್ 13 ಗೋಲುಗಳನ್ನು ಗಳಿಸಿ ಗೋಲ್ಡನ್ ಬೂಟ್ ತಮಗೇ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರ ಹಿಂದೆ 12 ಗೋಲುಗಳನ್ನು ಗಳಿಸಿರುವ ಬಾರ್ತಲೋಮ್ಯೊ ಒಗ್ಬಚೆ ಎರಡನೇ ಸ್ಥಾನದಲ್ಲಿದ್ದಾರೆ. ಕೇರಳ ವಿರುದ್ಧದ ಮೂರು ಪಂದ್ಯಗಳಲ್ಲಿ ಕೊರೊಮಿನಾಸ್ ಆರು ಗೋಲುಗಳನ್ನು ಗಳಿಸಿದ್ದಾರೆ. ಗೋವಾ ತಂಡದ ಇನ್ನೊಂದು ವಿಶೇಷವೆಂದರೆ ಕೊರೊಮಿನಾಸ್ ಗೋಲು ಗಳಿಸಿದಾಗಲೆಲ್ಲ ಗೋವಾ ತಂಡ ಸೋತಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications