Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಲ್‌ಎಲ್: ಕೊನೆಗೂ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸ್ಪೇನ್ ಕ್ರಾಂತಿ

ISL: Finally, Spanish revolution in Indian Super League

ಮುಂಬೈ, ಮಾರ್ಚ್ 14: ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸ್ಪೇನ್ ಫುಟ್ಬಾಲ್‌ನ ಪ್ರಭಾವ ಸಾಕಷ್ಟು ಆಗಿದೆ. ಇದಕ್ಕೆ ಇಲ್ಲಿನ ಕಾರ್ಯನಿರ್ವಹಿಸುತ್ತಿರುವ ಕೋಚ್ ಹಾಗೂ ಆಟಗಾರರೇ ಕಾರಣ ಎನ್ನಬಹುದು. ಮೊದಲ ಐಎಸ್‌ಎಲ್ ಕಿರೀಟ ಧರಿಸಿರುವ ತಂಡಕ್ಕೆ ತರಬೇತಿ ನೀಡಿದ್ದೂ ಸ್ಪೇನ್‌ನ ಕೋಚ್.

ಆಂಟೋನಿಯೊ ಬಾಸ್ ಸ್ಪೇನ್‌ನ ಆಟ್ಲೆಟಿಕೋ ಡಿ ಮ್ಯಾಡ್ರಿಡ್ ಕ್ಲಬ್‌ನ ಕೋಚ್ ಆಗಿದ್ದರು. ಮಾಜಿ ಲಾ ಲೀಗಾ ಚಾಂಪಿಯನ್ ತಂಡ ಅಟ್ಲೆಟಿಕೊ ಡೆ ಕೋಲ್ಕೊತಾ ತಂಡದೊಂದಿಗೆ ಸಂಬಂ' ಹೊಂದಿತ್ತು. ಇದರಿಂದಾಗಿ ಕೋಲ್ಕತ್ತಾ ಮೂಲದ ತಂಡಕ್ಕೆ ಯಾವ ರೀತಿಯಲ್ಲಿ ನೆರವಾಯಿತು ಎಂಬುದಕ್ಕೆ ಎರಡು ಬಾರಿ ಪ್ರಶಸ್ತಿ ಗೆದ್ದಿರುವುದೇ ಸಾಕ್ಷಿ.

ಮೊದಲ ಋತುವಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫ್ರಾನ್ಸ್‌ನ ಆಟಗಾರರು ತಂಡದಲ್ಲಿದ್ದರು. ನಂತರ ಬ್ರೆಜಿಲ್ ಆಟಗಾರರು ಪ್ರಾಭಲ್ಯ ಸಾಧಿಸಿದರು.ಕೊನೆಯಲ್ಲಿ ಸ್ಪೇನ್ ಮೂಲದ ಆಟಗಾರರು ಪ್ರಾಭಲ್ಯ ಸಾಧಿಸಿದರು ಎಂಬುದಕ್ಕೆ ಬೆಂಗಳೂರು ಹಾಗೂ ಗೋವಾ ತಂಡಗಳು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಪರ್ಧಿಸುತ್ತಿರುವುದೇ ಸಾಕ್ಷಿ. ಇಲ್ಲಿನ ಯಶಸ್ಸಿನಲ್ಲಿ ಸ್ಪೇನ್ ಫುಕಾರ್ಯನಿರ್ವಹಿಸಿರುವುದು ಸ್ಪಷ್ಟ.

ಲೀಗ್‌ನಲ್ಲಿ ಸ್ಪೇನ್‌ನ ಫುಟ್ಬಾಲ್ ಯಾವ ರೀತಿಯಲ್ಲಿ ಪ್ರಭಾವ ಬೀರಿದೆ ಎಂಬುದಕ್ಕೆ ಗೋವಾ ಹಾಗೂ ಬೆಂಗಳೂರು ತಂಡದ ಆಟದ ಶೈಲಿಯೇ ಸಾಕ್ಷಿಯಾಗಿದೆ. ಬಾರ್ಸಿಲೋನಾ ಸಂಪರ್ಕ ಹೊಂದಿರುವ ಸ್ಪೇನ್‌ನ ಇಬ್ಬರು ಕೋಚ್‌ಗಳು ವಿರುದ್ಧ ದಿಕ್ಕಿನಲ್ಲಿದ್ದಾರೆ. ಸರ್ಗಿಯೋ ಲೊಬೆರಾ (ಗೋವಾ) ಹಾಗೂ ಕಾರ್ಲಸ್ ಕ್ವಾಡ್ರಾಟ್ (ಬೆಂಗಳೂರು) ಇಬ್ಬರೂ ಕಾಟಲಾನ್ ಕ್ಲಬ್‌ನಲ್ಲಿ ಕೋಚಿಂಗ್ ತರಬೇತಿ ಪಡೆದವರು.

ಎರಡೂ ತಂಡದ ಸಹಾಯಕ ಸಿಬ್ಬಂದಿ ಕೂಡ ಸ್ಪೇನ್‌ನನ್ನು ಪ್ರತಿನಿಧಿಸುವಂತಿದ್ದಾರೆ. ಲೊಬೆರಾ ಪಡೆಯಲ್ಲಿ ಇಬ್ಬರು ಸ್ಪೇನ್ ಮೂಲದವರಿದ್ದಾರೆ. ಜೆಸಸ್ ಟಾಟೋ ಹಾಗೂ ಮ್ಯಾನ್ವೆಲ್ ಸಯಾಬೆರಾ ಅವರು ಲೊಬೆರಾ ಜತೆ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಕ್ವಾಡ್ರಾಟ್ ಅವರಿಗೆ ನೆರವಾಗುತ್ತಿರುವ ಗೆರಾರ್ಡ್ ಜರಾಗೋಜಾ, ಜವೇರ್ ಪಿನಿಲ್ಲೋಸ್ ಹಾಗೂ ಮೈಕಲ್ ಗ್ಯುಲ್ಲೆನ್ ಕೂಡ ಸ್ಪೇನ್ ಮೂಲದವರು.

ಫೈನಲ್ ಪಂದ್ಯದಲ್ಲೂ ಸ್ಪೇನ್ ಆಟಗಾರರ ಕೊರತೆ ಏನಿಲ್ಲ. ಫೆರಾನ್ ಕೊರೊಮಿನಾಸ್, ಎಡು ಬೇಡಿಯಾ, ಕಾರ್ಲೋಸ್ ಪೆನಾ, ದಿಮಾಸ್ ಡೆಲ್ಗಾಡ, ಲೂಯಿಸ್ಮಾ, ಅಲೆಕ್ಸ್ ಬರ್ರೆರಾ, ಅಲ್ಬೆರ್ಟ್ ಸೆರ್ರಾನಾ , ಶಿಸ್ಕೋ ಹೆರ್ನಾಂಡೇಸ್ ಮತ್ತು ಜುವಾನನ್ ಎಲ್ಲೂ ಫೈನಲ್ ತಲುಪಿರುವ ತಂಡಗಳಲ್ಲಿದ್ದಾರೆ.

ಆಡುವ ಆಟಗಾರರೇ ಇರಲಿ, ಅಥವಾ ಕೋಚ್ ಇರಲಿ ವಿದೇಶಿ ಆಯ್ಕೆಯ ವಿಚಾರ ಬಂದಾಗ ಗೋವಾ ಮತ್ತು ಬೆಂಗಳೂರು ತಂಡ ಸ್ಪೇನ್ ಮೂಲದ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಬೆಂಗಳೂರು ತಂಡದಲ್ಲಿ ಆರು ಸ್ಪೇನ್ ಮೂಲದ ಆಟಗಾರರಿದ್ದರೆ, ಗೇವಾ ತಂಡದಲ್ಲಿ ಮೂವರು ಸ್ಪೇನ್ ಆಟಗಾರರಿದ್ದಾರೆ. ಋತುವಿನ ಆರಂ'ದಲ್ಲಿ ಗೋವಾ ತಂಡದಲಿಲ ಮಿಗ್ವೆಲ್ ಪಲಾಂಕಾ ಆಡುತ್ತಿದ್ದರು, ಆದರೆ ಅವರು ತಾಯ್ನಾಡಿಗೆ ಹಿಂದಿರುಗಿದರು. ಆರಂಭದಿಂದಲೂ ಈ ಎರಡೂ ತಂಡಗಳು ಸ್ಪೇನ್ ುಟ್ಬಾಲ್‌ಗೆ ಹೆಚ್ಚು ಒತ್ತು ನೀಡಿವೆ.

ಗೋವಾ ತಂಡದಲ್ಲಿ ಲೊಬೆರಾ ಆರಂಭದಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ತಂಡ ಅಲ್ಬೆರ್ಟ್ ರೋಕಾ ಅವರ ಸೇವೆಯನ್ನು ಪಡೆದಿತ್ತು. ಕೇವಲ ಬೆಂಗಳೂರು ಹಾಗೂ ಗೋವಾ ಕ್ಲಪ್‌ಗಳು ಮಾತ್ರವಲ್ಲ, ಇತರ ಕೆಲವು ಕ್ಲಬ್‌ಗಳೂ ಸ್ಪೇನ್ ಮೂಲದ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡಿವೆ. ಸೆಸಾರ್ ಫಭಾ ರಾಂಡೋ ತಂಡದಲ್ಲೂ ಸ್ಪೇನ್‌ನ ಅನೇಕ ಆಟಗಾರರಿದ್ದಾರೆ. ಡೆಲ್ಲಿ ಡೈನಮೋಸ್ ತಂಡದ ಕೋಚ್ ಜೊಸೆಫ್ ಗೊಂಬಾವ್ ಕೂಡ ಸ್ಪೇನ್ ಮೂಲದವರು. 'ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸ್ಪೇನ್ ಕೋಚ್‌ಗಳ ಶಕ್ತಿ ಹಾಗೂ ಸ್ಪೇನ್ ಫುಟ್ಬಾಲ್‌ನ ಇನ್ನೊಂದು ರೂಪ ಕಾಣಸಿಗುವುದು ಸ್ಪಷ್ಟ.

Story first published: Thursday, March 14, 2019, 20:02 [IST]
Other articles published on Mar 14, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+