Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಮೊದಲ ಜಯದ ನಿರೀಕ್ಷೆಯಲ್ಲಿ ಮುಂಬೈ, ಗೋವಾ

ISL: Goa, Kerala seek first win of the season

ಗೋವಾ, ಡಿಸೆಂಬರ್ 5: ಆರಂಭಿಕ ಮೊದಲ ಮೂರು ಪಂದ್ಯಗಳಲ್ಲಿ ಜಯ ಗಳಿಸಲು ವಿಫಲವಾಗಿರುವ ಎಫ್ ಸಿ ಗೋವಾ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯಲ್ಲಿ ತಮ್ಮ ಮೊದಲ ಮೂರು ಅಂಕಗಳನ್ನು ಗಳಿಸಲು ಉತ್ಸುಕವಾಗಿವೆ. ಭಾನುವಾರ ಫಟೊರ್ಡಾ ಅಂಗಣಲ್ಲಿ ಇತ್ತಂಡಗಳು ಮುಖಾಮುಖಿಯಾಗುತ್ತಿವೆ.

ಇತ್ತಂಡಗಳು ಇದುವರೆಗೂ 12 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಗೋವಾ ತಂಡ ಎಂಟು ಬಾರಿ ಜಯ ಗಳಿಸಿ ಮೇಲುಗೈ ಸಾಧಿಸಿ ಮೂರು ಬಾರಿ ಸೋತಿದೆ. ಗೋವಾ ತಂಡದ ಇನ್ನೊಂದು ವಿಶೇಷವೆಂದರೆ ಸತತ ಆರು ಪಂದ್ಯಗಳಲ್ಲಿ ಜಯ ಗಳಿಸಿದ್ದು, ಅದೇ ಯಶಸ್ಸನ್ನು ಮುಂದುವರಿಕೊಂಡು ಹೋಗುವ ತವಕದಲ್ಲಿದೆ. ಎರಡೂ ತಂಡಗಳು ಅಂಕಪಟ್ಟಿಯ ಕೆಳ ಹಂತದಲ್ಲಿದ್ದು, ತಲಾ ಎರಡು ಅಂಕಗಳನ್ನು ಗಳಿಸಿವೆ. ಈಗ ಪಂದ್ಯಗಳು ಮುಂದೆ ಸಾಗುತ್ತಿದ್ದಂತೆ ಇತ್ತಂಡಗಳ ಕೋಚ್ ಗಳನ್ನು ಸಾಕಷ್ಟು ಚಿಂತೆ ಆವರಿಸುವುದು ಸಹಜ.

ಕೇರಳ ತಂಡ ಇದುವರೆಗು ನಡೆದಿರುವ ಪಂದ್ಯಗಳಲ್ಲಿ ಎಲ್ಲ ತಂಡಗಳ ವಿರುದ್ಧ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿದೆ. ಆದರೆ ಪಂದ್ಯದ ಅಂತಿಮ ಹಂತದಲ್ಲಿ ಹಿಡಿತ ಸಾಧಿಸುವಲ್ಲಿ ವಿಫಲವಾಗಿತ್ತು. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಈ ಋತುವಿನಲ್ಲಿ ಕೇರಳ ಓಪನ್ ಪ್ಲೇ ಮೂಲಕ ಇನ್ನೂ ಗೋಲು ಗಳಿಸಿಲ್ಲ. ಇದುವರೆಗೂ ದಾಖಲಾಗಿರುವ ಎರಡು ಗೋಲುಗಳು ಸೆಟ್ -ಪೀಸ್ ಮೂಲಕ. ಬ್ಯಾಕ್ ಲೈನ್ ನಲ್ಲಿ ಕಿಬು ವಿಕುನಾ ಪಡೆ ಸಾಕಷ್ಟು ದುರ್ಬಲವಾಗಿದೆ.

ನಾಯಕ ಸರ್ಗಿಯೊ ಸಿಡೊಂಚಾ ಗಾಯಗೊಂಡಿರುವುದು ಎರಡು ಬಾರಿ ಚಾಂಪಿಯನ್ ತಂಡದ ಬಲವನ್ನು ಕುಗ್ಗಿಸಿದೆ. ಅವರು ಸ್ವಲ್ಪ ಸಮಯ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ. "ಪ್ರತಿಯೊಂದು ತಂಡವೂ ವಿಭಿನ್ನ ಸವಾಲಾಗಿದೆ," ಎಂದಿರುವ ವಿಕುನಾ, " ಗೋವಾ ಮತ್ತು ನಮ್ಮ ತಂಡಕ್ಕೂ ಆಟದಲ್ಲಿ ಸಾಮ್ಯತೆ ಇದೆ. ಇದು ಹೆಚ್ಚು ಕಾಲ ಚೆಂಡನ್ನು ನಿಯಂತ್ರಿಸಲು ನಡೆಸುವ ಪೈಪೋಟಿ ಎನಿಸಲಿದೆ. ಆದರೆ ಅವರು ಕೆಲವೊಮ್ಮೆ ಬೇರೆ ರಣತಂತ್ರವನ್ನೂ ಬಳಸುವುದಿದೆ, ಅದಕ್ಕೆ ನಾವು ಕೂಡ," ಎಂದು ವಿಕುನಾ ಹೇಳಿದ್ದಾರೆ.

ಇದೇ ವೇಳೆ ಗೋವಾ ತಂಡ ಹೀರೊ ಇಂಡಡಿಯನ್ ಸೂಪರ್ ಲೀಗ್ ನಲ್ಲಿ ಅತಿ ಹೆಚ್ಚು ಕಾಲ ಚೆಂಡನ್ನು ನಿಯಂತ್ರಿಸಿದ ತಂಡವೆನಿಸಿದೆ. ಆದರೆ ಜುವಾನ್ ಫೆರಾಂಡೋ ಪಡೆ ಕಳೆದ ಎರಡು ಪಂದ್ಯಗಳಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ ಎರಡು ಪಂದ್ಯಗಳಲ್ಲಿ ಅಂಕವನ್ನು ಕಳೆದುಕೊಂಡಿತ್ತು. ಗೋವಾ ತಂಡ ಇದುವರೆಗೂ ನಾಲ್ಕು ಗೋಲುಗಳನ್ನು ಗಳಿಸಿದ್ದು, ಅದು ಕೂಡ ಸೆಟ್-ಪೀಸ್ ಮೂಲಕ ಗಳಿಸಿದ್ದು. ಬ್ಯಾಕ್ ಲೈನ್ ಬಲಿಷ್ಠಗೊಳಿಸುವ ಗುರಿ ತಂಡದ್ದಾಗಿದೆ. ಅಮಾನತುಗೊಂಡಿರುವ ಕಾರಣ ಅಲ್ಬೆರ್ಟೊ ನಗ್ವೆರಾ ನಾಳೆಯ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

"ನಾವು ನಮ್ಮ ಅಭಿಮಾನಿಗಳಿಗೆ ಪಂದ್ಯವನ್ನು ನೋಡಿ ಆನಂದಿಸಿ ಎಂದು ಹೇಳುತ್ತಿದ್ದೇನೆ, ಏಕೆಂದರೆ ಎರಡು ತಂಡಗಳು ಫುಟ್ಬಾಲ್ ಆಡಲಿವೆ. ನಾಳೆಯ ಪಂದ್ಯ ಅತ್ಯಂತ ಕುತೂಲವಾಗಿ ನಡೆಲಿದೆ ಎಂದು ನಾನು ಹೇಳಬಲ್ಲೆ," ಎಂದು ಫೆರಾಂಡೊ ಹೇಳಿದ್ದಾರೆ.

Story first published: Sunday, December 6, 2020, 11:51 [IST]
Other articles published on Dec 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+