ಐಎಸ್‌ಎಲ್ 2020: ಒಡಿಶಾಕ್ಕೆ ಮನೆಯಂಗಣದಲ್ಲಿ ಆಘಾತ, ಗೋವಾ ಟಾಪ್

ಭುವನೇಶ್ವರ, ಜನವರಿ 30: ಆರಂಭದಲ್ಲಿ ಎದುರಾಳಿ ತಂಡ ವಿನೀತ್ ರಾಯ್ (21ನೇ ನಿಮಿಷ), ನಂತರ ಜಾಕಿಚಾಂದ್ ಸಿಂಗ್ (24 ಮತ್ತು 27ನೇ ನಿಮಿಷ) ಮತ್ತು ಫೆರಾನ್ ಕೊರೊಮಿನಾಸ್ (90ನೇ ನಿಮಿಷ) ಗಳಿಸಿದ ಗೋಲಿನಿಂದ ಒಡಿಶಾ ಎಫ್ ಸಿ ತಂಡವನ್ನು 4-2 ಗೋಲುಗಳಿಂದ ಮಣಿಸಿದ ಎಫ್ ಸಿ ಗೋವಾ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಗ್ರ ಸ್ಥಾನಕ್ಕೇರಿತು. ಒಡಿಶಾ ಪರ ಒನೌ (59 ಮತ್ತು 65ನೇ ನಿಮಿಷ) ಎರಡು ಗೋಲು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಮಿಂಚಿದ ಒನೌ
ಬೆಂಗಳೂರು ತಂಡದಿಂದ ಲೋನ್ ಆಟಗಾರನಾಗಿ ಒಡಿಶಾ ತಂಡವನ್ನು ಸೇರಿಕೊಂಡ ಮ್ಯಾನ್ವೆಲ್ ಒನೌ ದ್ವಿತಿಯಾರ್ಧದಲ್ಲಿ ಎರಡು ಗೋಲುಗಳನ್ನು ಗಳಿಸಿ ಮನೆಯಂಗಣದ ಪ್ರೇಕ್ಷಕರಿಗೆ ಫುಟ್ಬಾಲ್ ನ ಸವಿಯನ್ನು ನೀಡಿದರು. ಆರು ನಿಮಿಷಗಳ ಅವಧಿಯಲ್ಲಿ ದಾಖಲಾದ ಈ ಗೋಲು ಅಂಕಪಟ್ಟಿಯ ಅಗ್ರ ಸ್ಥಾನಕ್ಕೇರುವ ತವಕದಲ್ಲಿರುವ ಗೋವಾಕ್ಕೆ ಎಚ್ಚರಿಕೆಯ ಕರೆಯನ್ನು ನೀಡಿತು. ಪಂದ್ಯ 3-2ರಲ್ಲಿ ಕುತೂಹಲದ ಹಂತದತ್ತ ಸಾಗಿತು. ಒನೌ (59 ಮತ್ತು 65ನೇ ನಿಮಿಷ) ಗಳಿಸಿದ ಗೋಲು ಒಡಿಶಾ ತಂಡ ಆತ್ಮವಿಶ್ವಾಸದಲ್ಲಿ ಆಡಲು ನೆರವಾಯಿತು. ಆದರೆ ಫೆರಾನ್ ಕೊರೊಮಿನಾಸ್ (90ನೇ ನಿಮಿಷ) ಗಳಿಸಿದ ಗೋಲು ಒಡಿಶಾ ತಂಡದ ಜಯವನ್ನೇ ಕಸಿದುಕೊಂಡಿತು.

ಗೋವಾಕ್ಕೆ ಮುನ್ನಡೆ
ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಟ ಪ್ರದರ್ಶಿಸಿದ ಗೋವಾ ತಂಡ ಪ್ರಥಮಾರ್ಧದಲ್ಲಿ 3-0 ಗೋಲುಗಳ ಅಂತರದಲ್ಲಿ ಬೃಹತ್ ಮುನ್ನಡೆ ಕಾಯ್ದುಕೊಂಡಿತು. ವಿಶೇಷವೆಂದರೆ ಒಡಿಶಾ ತಂಡವೇ ಉಡುಗೊರೆ ಗೋಲು ನಿಡಿ ಹಿನ್ನಡೆಗೆ ವೇದಿಕೆ ಸಜ್ಜು ಮಾಡಿಕೊಂಡಿತು. 21ನೇ ನಿಮಿಷದಲ್ಲಿ ವಿನೀತ್ ರಾಯ್ ಅವರು ಫ್ರೀ ಕಿಕ್ ಗೆ ಸ್ಪಂದಿಸಿ ಉಡುಗೊರೆ ಗೋಲು ನೀಡಿದರು. ಎಡು ಬೇಡಿಯಾ ಅವರ ಫ್ರೀ ಕಿಕ್ ಅನ್ನು ರಾಯ್ ತಪ್ಪಾಗಿ ಗ್ರಹಿಸಿದುರ ಪರಿಣಾಮ ಉಡುಗೊರೆ ಗೋಲು ದಾಖಲಾಯಿತು.
ನಂತರ ಜಾಕಿಚಾಂದ್ ಸಿಂಗ್ (24 ಮತ್ತು 27ನೇ ನಿಮಿಷ) ಅಲ್ಪ ಅವಧಿಯಲ್ಲಿಯೇ ಎರಡು ಗೋಲು ಗಳಿಸಿ ತಂಡಕ್ಕೆ 3-0 ಮುನ್ನಡೆ ಕಲ್ಪಿಸಿದರು. 7 ನಿಮಿಷಗಳ ಅವಧಿಯಲ್ಲಿ ಒಟ್ಟು ಮೂರು ಗೋಲು ದಾಖಲಾಯಿತು. ಒಂದು ಉಡುಗೊರೆ ಗೋಲಾದರೂ ಜಾಕಿಚಾಂದ್ ಸಿಂಗ್ ತಂಡಕ್ಕೆ ಅಚ್ಚರಿಯ ಮುನ್ನಡೆ ಕಲ್ಪಿಸಿದರು.
ಅಗ್ರ ಸ್ಥಾನದ ಗುರಿ
ಅಂಕಪಟ್ಟಿಯಲ್ಲಿ ಅಗ್ರಸ್ಥಾನದ ಗುರಿ ಹೊಂದಿರುವ ಎಫ್ ಸಿ ಗೋವಾ ತಂಡ ಆ ಗುರಿಯನ್ನು ಸುಲಭವಾಗಿ ತಲುಪಬಹುದು ಎಂಬ ಉದ್ದೇಶದಿಂದ ಕಳಿಂಗ ಅಂಗಣದಲ್ಲಿ ಒಡಿಶಾ ವಿರುದ್ಧದ ಹೋರಾಟಕ್ಕೆ ಇಳಿಯಿತು. ಕೇರಳ ಬ್ಲಾಸ್ಟರ್ಸ್ ವಿರುದ್ಧ 3-2 ಅಂತರದಲ್ಲಿ ಗೆದ್ದ ನಂತರ ಗೋವಾ ತಂಡ ಅತ್ಯಂತ ಆತ್ಮವಿಶ್ವಾಸದಲ್ಲಿ ಭುವನೇಶ್ವರಕ್ಕೆ ಆಗಮಿಸಿತು. ಪ್ರತಿಯೊಂದು ವಿಭಾಗದಲ್ಲೂ ಪ್ರಭುತ್ವ ಸಾಧಸಿರುವ ಗೋವಾಕ್ಕೆ ಒಡಿಶಾ ದಾಖಲೆಗಳ ಪ್ರಕಾರ ದಿಟ್ಟ ತಂಡವಾಗಿ ಕಾಣುತ್ತಿಲ್ಲ.
ಆದರೆ ಒಡಿಶಾ ಸಾಗಿ ಬಂದ ಹಾದಿಯನ್ನು ಗಮನಿಸಿದರೆ ಅದು ಸ್ಪಷ್ಟವಾಗುತ್ತದೆ. ಬ್ರೆಂಡಾನ್ ಫೆರ್ನಾಂಡೀಸ್, ಜಾಕಿಚಾಂದ್ ಸಿಂಗ್ ಮತ್ತು ಹ್ಯುಗೋ ಬೌಮಾಸ್, ಫೆರಾನ್ ಕೊರೊಮಿನಾಸ್ ಅವರನ್ನು ನಿಯಂತ್ರಿಸುವುದು ಒಡಿಶಾ ತಂಡಕ್ಕೆ ಕಷ್ಟವಾಗಬಹುದು. ಆದರೆ ಇದು ಟೀಮ್ ಗೇಮ್. ಒಬ್ಬ ಆಟಗಾರನ ಮೇಲೆ ತಂಡ ಆತುಕೊಂಡಿರುವುದಿಲ್ಲ. ಒಡಿಶಾ ತಂಡದಲ್ಲಿ ಪ್ರಮುಖ ಆಟಗಾರ ಅರಿದಾನೆ ಸ್ಯಾಂಟನಾ ಅವರ ಅನುಪಸ್ಥಿತಿ ತಂಡದ ಶಕ್ತಿಯನ್ನು ಕುಂದಿಸುವುದು ಸಹಜ. ಬೆಂಗಳೂರು ತಂಡದಿಂದ ಸಾಲದ ರೂಪದಲ್ಲಿ ಬಂದ ಮ್ಯಾನ್ವೆಲ್ ಒನೌ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications