For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2020: ನಿಶು ಗೋಲಿನಿಂದ ಮಿಂಚಿದ ಬೆಂಗಳೂರಿಗೆ ಜಯ

By Isl Media
ISL: Gurpreet saves 3 points for Bengaluru FC

ಬೆಂಗಳೂರು, ಜನವರಿ 31: ಪ್ರಥಮಾರ್ಧದಲ್ಲಿ ನಿಶು ಕುಮಾರ್ (7ನೇ ನಿಮಿಷ) ಗಳಿಸಿದ ಏಕೈಕ ಗೋಲಿನಿಂದ ಹೈದರಾಬಾದ್ ಎಫ್ ಸಿ ಯನ್ನು 1-0 ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಹೈದರಾಬಾದ್ ಪಂದ್ಯದುದ್ದಕ್ಕೂ ಉತ್ತಮ ಪ್ರದರ್ಶನ ತೋರಿರುವುದು ಸ್ಪಷ್ಟ. ಮನೆಯಂಗಣದಲ್ಲಿ ಉತ್ತಮವಾಗಿ ಆಡಬಲ್ಲ ಬೆಂಗಳೂರು ತಂಡ ದ್ವಿತಿಯಾರ್ಧದಲ್ಲಿ ಹಾಲಿ ಚಾಂಪಿಯನ್ನರನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.

ಆರಂಭದಲ್ಲೇ ಮುನ್ನಡೆ
ನಿಶು ಕುಮಾರ್ ಪಂದ್ಯ ಆರಂಭಗೊಂಡ ಏಳನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಬೆಂಗೂರು ತಂಡ ಹೈದರಾಬಾದ್ ವಿರುದ್ಧ ಮೇಲುಗೈ ಸಾಧಿಸಿತು. ಸೆಟ್-ಪೀಸ್ ಮೂಲಕ ದಾಖಲಾದ ಈ ಗೋಲು ಹಾಲಿ ಚಾಂಪಿಯನ್ನರ ವಿರುದ್ಧ ಜಯ ಗಳಿಸುವುದು ಸುಲಭವಲ್ಲ ಎಂಬುದು ಹೈದರಾಬಾದ್ ಗೆ ಮನವರಿಕೆಯಾಯಿತು. ದಿಮಾಸ್ ಡೆಲ್ಗಾಡೋ ಗೋಲ್ ಬಾಕ್ಸ್ ಬಲಭಾಗದ ಅಂಚಿನಿಂದ ಚೆಂಡನ್ನು ಪಾಸ್ ಮಾಡಿದರು. ಅದು ನಿಶು ಕುಮಾರ್ ಗೆ ತರಬೇತಿ ವೇಳೆ ಸಿಕ್ಕ ಪಾಸ್ ನಂತಿತ್ತು. ನೇರವಾಗಿ ಗೋಲ್ ಗೆ ಗುರಿಯಿಟ್ಟು ಚೆಂಡನ್ನು ತುಳಿದರು.

ಹೈದರಾಬಾದ್ ನ ಗೋಲ್ ಕೀಪರ್ ಲಕ್ಷೀಕಾಂತ್ ಕಟ್ಟಿಮನಿಗೆ ಚೆಂಡನ್ನು ತಡೆಯಲಾಗಲಿಲ್ಲ. ಬ್ಲೂಸ್ ಮನೆಯಲ್ಲಿ ಪ್ರೇಕ್ಷಕರ ಸಂಭ್ರಮ. 26ನೇ ನಿಮಿಷದಲ್ಲಿ ಹೈದರಾಬಾದ್ ತಂಡಕ್ಕೆ ಪಾನೆಲ್ಟಿ ಮೂಲಕ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು, ಆದರೆ ಗುರ್ಪ್ರೀತ್ ಸಿಂಗ ಸಂಧೂ ಉತ್ತಮ ರೀತಯಲ್ಲಿ ತಡೆದು ತಂಡಕ್ಕೆ ನೆರವಾದರು. 43ನೇ ನಿಮಿಷದಲ್ಲಿ ಸುನಿಲ್ ಛೆಟ್ರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಆದರೆ ಹೈದರಾಬಾದ್ ನ ಗೋಲ್ ಕೀಪರ್ ಕಟ್ಟೀಮನಿ ಅವರು ಉತ್ತಮ ರೀತಿಯಲ್ಲಿ ತಡೆದ ಪರಿಣಾಮ ಪ್ರಥಮಾರ್ಧದಲ್ಲಿ ಬಿಎಫ್ ಸಿ ಕೇವಲ ಒಂದು ಗೋಲಿಗೆ ತೃಪ್ತಿಪಡಬೇಕಾಯಿತು. ಪ್ರಥಮಾರ್ಧ ಬೆಂಗಳೂರು ಎಫ್ ಸಿಗೆ ನಿರೀಕ್ಷಿಸಿದಷ್ಟು ಸುಲಭವಾಗಿರಲಿಲ್ಲ.

ISL: Gurpreet saves 3 points for Bengaluru FC

ಬೆಂಗಳೂರು ಫೇವರಿಟ್
ದುರ್ಬಲ ಹೈದರಾಬಾದ್ ಎಫ್ ಸಿ ವಿರುದ್ಧ ಮನೆಯಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆಲ್ಲುವ ಮೂಲಕ ಬೆಂಗಳೂರು ತಂಡ ಟಾಪ್ ನಾಲ್ಕರಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಗೋವಾ ಮತ್ತು ಎಟಿಕೆ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ. ಮನೆಯಂಗಣದಲ್ಲಿಯ ಪಂದ್ಯಗಳಲ್ಲಿ ತೋರಿದ ಸಾಧನೆಯನ್ನು ಗಮನಿಸಿದರೆ ಬೆಂಗಳೂರು ಗೆಲ್ಲುವ ಫೇವರಿಟ್ ಎನಿಸಿದೆ. ಕಳೆದ ಮೂರು ಪಂದ್ಯಗಳಲ್ಲಿ ಜಯ ಗಳಿಸಿರುವ ಬೆಂಗಳೂರು ಎದುರಾಳಿ ತಂಡಗಳಿಗೆ ಕೇವಲ ನಾಲ್ಕು ಗೋಲು ಗಳಿಸುವ ಅವಕಾಶ ನೀಡಿರುವುದನ್ನು ಗಮನಿಸಿದರೆ ತಂಡದ ಡಿಫೆನ್ಸ್ ವಿಭಾಗ ಹೇಗಿದೆ ಎಂಬುದು ಸ್ಪಷ್ಟವಾಗುತ್ತದೆ. ಸದ್ಯ 25 ಅಂಕಗಳನ್ನು ಗಳಿಸಿರುವ ಬೆಂಗಳೂರು ಜಯದೊಂದಿಗೆ 28 ಅಂಕಕ್ಕೇರಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.

ಒಡಿಶಾ ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ 3-0 ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ತಂಡ ಅತ್ಯಂತ ಆತ್ಮವಿಶ್ವಾಸವನ್ನು ಹೊಂದಿದೆ. ತಂಡವನ್ನು ಹೊಸದಾಗಿ ಸೇರಿಕೊಂಡ ಸ್ಟಾರ್ ಸ್ಟ್ರೈಕರ್ ದೆಶಾರ್ನ್ ಬ್ರೌನ್ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈಗಾಲೇ ಗೋಲಿನ ಖಾತೆ ತೆರೆದ ಅವರು ಕೋಚ್ ಕ್ಬಾಡ್ರಾಟ್ ಅವರಲ್ಲಿ ಭರವಸೆ ಮೂಡಿಸಿದ್ದಾರೆ. ಸುನಿಲ್ ಛೆಟ್ರಿ ಹಾಗೂ ಬ್ರೌನ್ ನಡುವೆ ಉತ್ತಮ ರೀತಿಯಲ್ಲಿ ಹೊಂದಾಣಿಕೆಯಾದರೆ ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕುವುದು ಸ್ಪಷ್ಟ. ಹೈದರಾಬಾದ್ ತಂಡ ಮನೆಯಹೊರಗಡೆ ಇನ್ನೂ ಜಯದ ಖಾತೆ ತೆರೆಯಲಿಲ್ಲ.

Story first published: Friday, January 31, 2020, 9:43 [IST]
Other articles published on Jan 31, 2020
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+