ಐಎಸ್‌ಎಲ್ 2020-21: ಜೆಮ್ಷೆಡ್ಪುರಕ್ಕೆ ಜಯ, ಪ್ಲೇ ಆಫ್ ಆಸೆ ಜೀವಂತ

ಗೋವಾ: ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ಹಂತ ತಲುಪುವಲ್ಲಿ ವಿಫಲವಾಗುತ್ತಿದ್ದೇವೆ ಎಂಬ ಆತಂಕದಲ್ಲಿದ್ದ ಜೆಮ್ಷೆಡ್ಪುರ ಎಫ್ ಸಿ ಕೊನೆಗೂ ಜಯದ ನಗು ಬೀರಿದೆ. ಒಡಿಶಾ ಎಫ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಮೊಬಾಶೀರ್ ರೆಹಮಾನ್ (41ನೇ ನಿಮಿಷ) ಗಳಿಸಿದ ಗೋಲಿನ ನೆರವಿನಿಂದ ಜೆಮ್ಷೆಡ್ಪುರ ತಂಡ 1-0 ಗೋಲಿನಿಂದ ಜಯ ಗಳಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಜೆಮ್ಷೆಡ್ಪುರಕ್ಕೆ ಮುನ್ನಡೆ: 41ನೇ ನಿಮಿಷದಲ್ಲಿ ಮೊಹಮ್ಮದ್ ಮೊಬಾಶೀರ್ ರೆಹಮಾನ್ ಗಳಿಸಿದ ಗೋಲಿನಿಂದ ಜೆಮ್ಷೆಡ್ಪುರ ಎಫ್ ಸಿ ಪ್ರಥಮಾರ್ಧದಲ್ಲಿ ಒಡಿಶಾ ವಿರುದ್ಧ ಮೇಲುಗೈ ಸಾಧಿಸಿತು. ನೆರಿಜಸ್ ವಾಸ್ಕೀಸ್ ಈ ಗೋಲನ್ನು ಗಳಿಸಿರಬಹುದು ಎಂಬುದು ಎಲ್ಲರ ಊಹೆಯಾಗಿತ್ತು.
ಆದರೆ ಮೊಬಾಶೀರ್ ತುಳಿದ ಚೆಂಡು ಗಾಳಿಯಲ್ಲಿ ಸಾಗಿ ಬಂದಿತ್ತು, ಗೋಲ್ ಬಾಕ್ಸ್ ನ ಕಡೆಗೆ ಸಾಗುತ್ತಿದ್ದ ಚೆಂಡಿಗೆ ವಾಸ್ಕೀಸ್ ಕಾಲನ್ನು ನೀಡಿದ್ದರು, ಆದರೆ ಕಾಲಿಗೆ ಚೆಂಡು ತಾಗದೆ ನೇರವಾಗಿ ಗೋಲ್ ಬಾಕ್ಸ್ ನ ನೆಟ್ ಗೆ ಸೇರಿತ್ತು.

ಸಮಸ್ಯೆ ಅಂಗಣದಲ್ಲಿ ಎದ್ದು ಕಾಣುತ್ತಿತ್ತು
ನೆರಿಜಸ್ ವಾಸ್ಕೀಸ್ ಜೆಮ್ಷೆಡ್ಪುರ ಪರ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರ. ಹಿನ್ನೆಲೆಯಲ್ಲಿ ಅವರು ಗೋಲು ಗಳಿಸಿರಬಹುದು ಎಂಬುದು ಎಲ್ಲರ ಊಹೆಯಾಗಿತ್ತು. ಏನೇ ಆದರೂ ತಂಡ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮುನ್ನಡೆದು ಜಯಕ್ಕೆ ಅಗತ್ಯ ಇರುವ ವೇದಿಕೆ ನಿರ್ಮಿಸಿಕೊಂಡಿತು. ಒಡಿಶಾ ತಂಡದ ಸಹಜವಾದ ಸಮಸ್ಯೆ ಅಂಗಣದಲ್ಲಿ ಎದ್ದು ಕಾಣುತ್ತಿತ್ತು. ಎರಡು ಬಾರರಿ ಉತ್ತಮ ಅವಕಾಶ ಸಿಕಕ್ಕರೂ ಅದಕ್ಕೆ ಗೋಲಿನ ರೂಪ ನೀಡುವಲ್ಲಿ ವಿಫಲವಾಯಿತು.

ಜಯವಲ್ಲದೆ ಬೇರೇನೂ ಬೇಡ
ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಒಡಿಶಾ ಎಫ್ ಸಿ ಮತ್ತು ಜೆಮ್ಷೆಡ್ಪುರ ತಂಡಗಳಿಗೆ ಜಯವಲ್ಲದೆ ಬೇರೆ ಯಾವುದೇ ಫಲಿತಾಂಶ ತಂಡದ ಮುನ್ನಡೆಯ ಮೇಲೆ ಹೆಚ್ಚಿನ ಪರಿಣಾಮ ಬೀರದು. ಏಕೆಂದರೆ ಇಲ್ಲಿ ಜಯ ಗಳಿಸಿದರೆ ಮಾತ್ರ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವ ಆಸೆ ಮಾತ್ರ ಜೀವಂತವಾಗಿರಲಿದೆ. ಒಡಿಶಾ ಎಫ್ ಸಿ ತಂಡದ ಕೋಚ್ ಸ್ಟುವರ್ಟ್ ಬಾಕ್ಸ್ಟರ್ ಪಡೆ ಅಂಕಪಟ್ಟಿಯಲ್ಇ ಕೊನೆಯ ಸ್ಥಾನದಲ್ಲಿದ್ದು, ಬಹಳ ಅಂತರವನ್ನು ಕಾಯ್ದುಕೊಂಡಿದೆ. 8 ಅಂಕಗಳನ್ನು ಗಳಿಸಿರುವ ತಂಡಕ್ಕೆ ಅಂತಿನ ನಾಲ್ಕರಲ್ಲಿ ಸ್ಥಾನ ಪಡೆಯಲು ಇನ್ನೂ 13 ಅಂಕಗಳು ಬೇಕಾಗಿವೆ
ಕಳಿಂಗ ವಾರಿಯರ್ಸ್ ಗೆದ್ದಿರುವುದು ಕೇವಲ ಒಂದು ಪಂದ್ಯ ಹಾಗೂ ಏಳು ಪಂದ್ಯಗಳಲ್ಲಿ ಸೋಲನುಭವಿಸಿದ್ದಾರೆ.

ರೋಚಕ ಪಂದ್ಯ ಡ್ರಾ ಆಗಿತ್ತು
ಈ ಋತುವಿನಲ್ಲಿ ಮಾಡಿರುವುದೇ ಒಂದು ಕ್ಲೀನ್ ಶೀಟ್. ಆದರೆ ಉತ್ತಮ ತಂಡಗಳ ವಿರುದ್ಧ ಎರಡು ಡ್ರಾ ಸಾಧಿಸಿರುವುದು ಇತ್ತೀಚಿನ ಭರವಸೆಯ ಸಾಧನೆ. ಕಳೆದ ಬಾರಿ ಇತ್ತಂಡಗಳು ಮುಖಾಮುಖಿಯಾಗಿದ್ದಾಗ ಪಂದ್ಯ ರೋಚಕವಾಗಿ 2-2 ಗೋಲುಗಳಿಂದ ಡ್ರಾಗೊಂಡಿತ್ತು.
ಜೆಮ್ಷೆಡ್ಪುರ ಕೂಡಾ ಇದೇ ಪರಿಸ್ಥಿತಿಯಲ್ಲಿದೆ. ಒಡಿಶಾ ಕಳೆದ ನಾಲ್ಕು ಪಂದ್ಯಗಳಲ್ಲಿ ಅಂಕ ಕಳೆದುಕೊಂಡಿದ್ದರೆ, ಕಳೆದ ಐದು ಪಂದ್ಯಗಳಿಂದ ಜೆಮ್ಷೆಡ್ಪುರ ಜಯ ಕಂಡಿಲ್ಲ. ಅಲ್ಲದೆ ಮೂರು ಪಂದ್ಯಗಳಲ್ಲಿ ಗೋಲನ್ನೇ ಗಳಿಸಿರಲಿಲ್ಲ. ನಾಲ್ಕನೇ ಸ್ಥಾನವನ್ನು ಗುರಿಯಾಗಿಸಿಕೊಂಡಿರುವ ತಂಡಕ್ಕೆ ಜಯದ ಅಗತ್ಯ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications