For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಜಯದ ಒತ್ತಡದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್‌ಸಿ

By Isl Media
ISL: Kerala Blasters on the edge; desperate for survival

ಕೊಚ್ಚಿ, ನವೆಂಬರ್ 8: ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಕೇರಳ ಬ್ಲಾಸ್ಟರ್ಸ್ ಪಡೆ ಜವಾಹರಲಾಲ್ ನೆಹರು ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಒಡಿಶಾ ವಿರುದ್ಧ ಮತ್ತೊಂದು ಪಂದ್ಯವನ್ನಾಡಲಿದ್ದು, ಗೆಲ್ಲಬೇಕಾದ್ ಒತ್ತಡದಲ್ಲಿದೆ.

ಬದ್ಧ ಎದುರಾಳಿ ಎಟಿಕೆ ವಿರುದ್ಧದ ಮೊದಲ ಪಂದ್ಯದಲ್ಲಿ ಜಯ ಗಳಿಸಿದ ನಂತರ ಮುಂಬೈ ಹಾಗೂ ಹೈದರಾಬಾದ್ ಎಫ್ ಸಿ ವಿರುದ್ಧ ಸೋಲಿನ ಆಘಾತ ಕಂಡಿತ್ತು. ಈಗ ಎಲ್ಲ ಜವಾಬ್ದಾರಿಯನ್ನು ಹೊತ್ತಿರುವ ಕೋಚ್ ಎಲ್ಕೋ ಶೆಟ್ಟೋರಿ ತನ್ನ ಯೋಜನೆಗಳಿಗೆ ಹೊಸ ರೂಪು ನೀಡಿ ತಂಡದಲ್ಲಿ ಮತ್ತೆ ಚೈತನ್ಯ ತುಂಬಬೇಕಾಗಿದೆ. ಮನೆಯಂಗಣದಲ್ಲಿ ಮತ್ತೆ ಜಯದ ಹಾದಿ ಕಂಡುಕೊಳ್ಳಬೇಕಾಗಿದೆ.

ಕಳೆದ ಬಾರಿ ಎಟಿಕೆ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಎಟಿಕೆ ಸತತ 14 ಪಂದ್ಯಗಳಲ್ಲಿ ಜಯ ಕಾಣುವಲ್ಲಿ ವಿಫಲವಾಗಿತ್ತು. ಆ ಕಹಿ ನೆನಪು ಕೇರಳ ತಂಡವನ್ನು ಕಾಡದಿರದು. ಶೆಟ್ಟೋರಿ ಪಡೆಗೆ ಈಗ ಹಳೆ ಕಹಿ ನೆನಪು ದೂರವಾಗಬೇಕಾದರೆ ಇಲ್ಲೊಂದು ಜಯ ದಾಖಲಿಸಬೇಕಿದೆ.

ಇನ್ನೊಂದೆಡೆ ಒಡಿಶಾ ತಂಡ ಕೇರಳಕ್ಕೆ ವಿರುದ್ಧವಾದ ದಿಕ್ಕಿನಲ್ಲಿದೆ, ಅಂದರೆ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ ಬಳಿಕ, ಮುಂಬೈ ಸಿಟಿ ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ 4-2 ಗೋಳುಗಳಿಂದ ಗೆದ್ದು ಚೇತರಿಕೆ ಕಂಡಿತ್ತು, ಇದರೊಂದಿಗೆ ಇಂಡಿಯನ್ ಸೂಪರ್ ಲೀಗ್ ನ ಹೊಸ ತಂಡ ಅತ್ಯಂತ ಉತ್ಸಾಹದಲ್ಲಿದ್ದು, ಕೇರಳಕ್ಕೆ ತಕ್ಕ ಸವಾಲೊಡ್ಡಲು ಸಜ್ಜಾಗಿದೆ.

ಗಾಯಗೊಂಡಿರುವ ಕೇರಳ ಬ್ಲಾಸ್ಟರ್ಸ್ ಸಮಸ್ಯೆ ನಿರಂತರವಾಗಿದೆ. ಪ್ರಮುಖ ಆಟಗಾರ ಸಂದೇಶ್ ಜಿಂಗಾನ್ ಈ ಋತುವಿನಿಂದಲೇ ವಂಚಿತರಾದರೆ ಮಾರಿಯೋ ಆರ್ಕ್ಯೂಸ್ ಮತ್ತು ಗಿಯನ್ನಿ ಜ್ಯುವೇರ್ಲೋವ್ನ್ ಇನ್ನೂ ಫಿಟ್ ಆಗಿಲ್ಲ.

ISL: Kerala Blasters on the edge; desperate for survival

''ನಾವು ಹಿಂದಿನ ಪಂದ್ಯವನ್ನು ಮಾನಸಿಕವಾಗಿ ಗೆಲ್ಲಬೇಕಿತ್ತು. ಹೈದರಾಬಾದ್ ತಂಡದಲ್ಲಿ ಕೇವಲ ಇಬ್ಬರು ವಿದೇಶಿ ಆಟಗಾರರಿದ್ದಾರೆ. ನಮಗೆ ಉತ್ತಮ ಅವಕಾಶವಿದ್ದಿತ್ತು. ನಾನು ಹಿಂದಿನ ಮೂರೂ ಪಂದ್ಯಗಳ ಪರಿಶೀಲನೆ ನಡೆಸಿರುವೆ. ನಾವು 43 ಪಾಸ್ ಗಳನ್ನು ಮಾಡಿದ್ದೇವೆ. ಅವುಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿವೆ ಎಂಬುದು ಮತ್ತೊಂದು ಪ್ರಶ್ನೆ. ಮಿಡ್ ಫೀಲ್ಡ್ ನಲ್ಲಿ ನಮ್ಮ ವಿಂಗರ್ ಗಳು ಸ್ಥಿರ ಪ್ರದರ್ಶನ ತೋರಲಿಲ್ಲ. ಹಿಂದಿನ ಪಂದ್ಯದಲ್ಲಿ ನಾವು ಡಿಫೆನ್ಸ್ ವಿಭಾಗದಲ್ಲಿ ಜ್ಯುವೇರ್ಲೋವ್ನ್ ಅವರ ಅನುಪಸ್ಥಿತಿ ಕಾಣಬೇಕಾಯಿತು. ಸದ್ಯದ ಸ್ಥಿತಿಯಲ್ಲಿ ನಾವು ಉಳಿವಿಗಾಗಿ ಹೋರಾಟ ಮಾಡಬೇಕಿದೆ, '' ಎಂದು ಶೆಟ್ಟೋರಿ ಹೇಳಿದರು.

ಕೇರಳದ ಚಿಂತೆಯ ವಿಚಾರವೆಂದರೆ, ಈ ತಂಡ ಇದುವರೆಗೂ ಹೆಚ್ಚು ಗೋಲು ಗಳಿಸುವ ಅವಕಾಶವನ್ನು ನಿರ್ಮಿಸಿರಲಿಲ್ಲ. ಬಾರ್ತಲೋಮ್ಯೋ ಓಗ್ಬ್ಯಾಚೆಗೆ ಗೋಲು ಗಳಿಸುವ ಅವಕಾಶ ಸಿಕ್ಕಿರಲಿಲ್ಲ. ಅದೇ ರೀತಿ ಸಹಲ್ ಅಬ್ದುಲ್ ಸಮದ್ ಅವರು ಕೋಚ್ ಶೆಟ್ಟೋರಿ ಅವರ ಆಟದ ಶೈಲಿಗೆ ಇನ್ನೂ ಸರಿಯಾಗಿ ಹೊಂದಿಕೊಂಡಿಲ್ಲ.

''ಫುಟ್ಬಾಲ್ ನಲ್ಲಿ ಒಂದು ಕ್ರಮ ಅಥವಾ ಪದ್ಧತಿ ಅಳವಡಿಸಿದರೆ ಅದಕ್ಕೆ ಹೊಂದಿಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ಕಳೆದ ಪಂದ್ಯದಲ್ಲಿ ಸಹಲ್ ಪ್ರಮಾದವೆಸಗಿದ್ದರು. ಆದರೆ ನಾವು ಅದೇ ಕಾರಣಕ್ಕೆ ಸೋತೆವು ಎಂದು ಹೇಳಲಾಗದು. ಈ ಬಗ್ಗೆ ಸಹಲ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ನಮ್ಮ ಆಟಗಾರರ ಶ್ರಮ ಖುಷಿಕೊಟ್ಟಿದೆ,'' ಎಂದು ಡಚ್ ಕೋಚ್ ಹೇಳಿದರು.

ಒಡಿಶಾ ತಂಡವೂ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಕ್ಸಿಸ್ಕೋ ಹೆರ್ನಾಂಡಿಸ್ ಅವರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಅರಿದಾನೆ ಸಂತಾನ ಮತ್ತು ಜೆರ್ರಿ ಮೌಹಿಮಿಂಗ್ತಂಗಾ ಹಾಗು ನಂದ ಕುಮಾರ್ ಒಂದಾದರೆ ಕೇರಳದ ಡಿಫೆನ್ಸ್ ವಿಭಾಗ ನಲುಗುವುದು ಸಹಜ.

''ಕಳೆದ ಋತುವಿನಲ್ಲಿ ನಾವು ಹಳವಾರರು ಅವಕಾಶಗಳನ್ನು ಕಳೆದುಕೊಂಡೆವು, ಈ ಬಾರಿ ನಾವು ಮೂರು ಪಂದ್ಯ ಆದಿ ಆರು ಗೋಲು ಗಳಿಸಿದೆವು. ಮೂರು ಪಂದ್ಯಗಳ ನಂತರ ಎರಡನೇ ಉತ್ತಮ ನಮ್ಮದಾಗಿದೆ. ಭಾರತ ತಂಡದ ಯುವ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ಮೂರು ಅಂಕಗಳನ್ನು ಗೆಲ್ಲಬೇಕೆಂಬ ಮನೋಬಲದೊಂದಿಗೆ ನಾವು ಇಲ್ಲಿಗೆ ಆಗಮಿಸಿದ್ದೇವೆ,'' ಎಂದು ಒಡಿಶಾ ತಂಡದ ಕೋಚ್ ಗೊಂಬವು ಹೇಳಿದ್ದಾರೆ.

ಒಡಿಶಾದ ಡಿಫೆನ್ಸ್ ವಿಭಾಗ ಇನ್ನೂ ಸುಧಾರಣೆ ಕಂಡಿಲ್ಲ ಎಂಬುದಕ್ಕೆ ಕ್ಲೀನ್ ಶೀಟ್ ಸಾಧನೆ ಮಾಡದಿರುವುದೇ ಸಾಕ್ಷಿ. ಮೂರು ಪಂದ್ಯಗಳಲ್ಲಿ ಆರು ಗೋಲುಗಳನ್ನು ನೀಡಿದೆ. ಅಂತಿಮ ಹತ್ತು ನಿಮಿಷಗಳ ಪಂದ್ಯ ಬಾಕಿ ಇರುವಾಗ ಗೋಲು ನೀಡುವ ಚಾಳಿ ತಂಡಕ್ಕಿದೆ. ಒಡಿಶಾದ ಈ ದೌರ್ಭಲ್ಯವನ್ನು ಕೇರಳ ಸದುಪಯೋಗಪಡಿಸಿಕೊಂಡರೆ ಜಯ ದಕ್ಕೀತು.

Story first published: Thursday, November 7, 2019, 23:54 [IST]
Other articles published on Nov 7, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+