
ಮುನ್ನಡೆದ ಒಡಿಶಾ
ಕೇರಳ ಬ್ಲಾಸ್ಟರ್ಸ್ ಹಾಆಆಗೂ ಒಡಿಶಾ ತಂಡಗಳ ನಡುವಿನ ಪಂದ್ಯದಲ್ಲಿ ಫಲಿತಾಂಶ ಮಾತ್ರ ಒಡಿಶಾದ ಪರವಾಗಿರುತ್ತದೆ ಎಂದು ಹೆಚ್ಚಿನ ಫುಟ್ಬಾಲ್ ಪಂಡಿತರು ಅಭಿಪ್ರಾಯ ಪಡುತ್ತಾರೆ. ಬಲಿಷ್ಠ ಕೇರಳ ಬ್ಲಾಸ್ಟರ್ಸ್ ಮೊದಲ ಪಂದ್ಯದಲ್ಲಿ ಒಡಿಶಾಕ್ಕೆ ಶರಣಾಗಿರುವುದೇ ಇದಕ್ಕೆ ಕಾರಣ. ಇಂದಿನ ಪಂದ್ಯದಲ್ಲೂ ಕೇರಳ ತಂಡ ಗೋಲು ಗಳಿಸುವ ಸುಲಭ ಅವಕಾಶಗಳನ್ನು ಕೈ ಚೆಲ್ಲಿಗೆ ಪ್ರಥಮಾರ್ಧದಲ್ಲಿ ಹಿನ್ನಡೆ ಕಂಡಿದೆ. 45ನೇ ನಿಮಿಷದಲ್ಲಿ ಡಿಗೊ ಮೌರಿಸಿಯೋ ಗಳಿಸಿದ ಗೋಲಿನಿಂದ ಒಡಿಶಾ ಎಫ್ ಸಿ 1-0 ಅಂತರದಲ್ಲಿ ಕೇರಳ ವಿರುದ್ಧ ಮೇಲುಗೈ ಸಾಧಿಸಿದೆ. ಒಡಿಶಾದ ಫಾರ್ವರ್ಡ್ ವಿಭಾಗ ಈ ಬಾರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿತ್ತು. ಹೆಚ್ಚು ಸಮಯ ಚೆಂಡನ್ನು ನಿಯಂತ್ರಿಸಿತ್ತು. ಕೇರಳ ಟಾರ್ಗೆಟ್ ಕಡೆಗೆ ಹೆಚ್ಚು ಗುರಿಇಟ್ಟರೂ ಗೋಲು ಗಳಿಸುವಲ್ಲಿ ವಿಫಲವಾಗಿತ್ತು.

ಜಯದ ಗುರಿಯಲ್ಲಿ ಒಡಿಶಾ
ಕೇರಳದ ವಿರುದ್ಧ ಗೆದ್ದಿರುವ ಪಂದ್ಯವೇ ಒಡಿಶಾದ ಮೊದಲ ಜಯವಾಗಿದೆ, ಅದೇ ರೀತಿ ಕೊನೆಯ ಹಂತದಲ್ಲಿ ಅದೇ ಒಡಿಶಾ ವಿರುದ್ಧ ಮತ್ತೊಂದು ಜಯ ಗಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಒಡಿಶಾ ತಂಡ ಕೇರಳ ವಿರುದ್ಧದ ಹಿಂದಿನ ಪಂದ್ಯದಲ್ಲಿ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು. ಅದೇ ಮೊದಲ ಜಯವಾಗಿತ್ತು. ಕಳಿಂಗ ವಾರಿಯರ್ಸ್ ಪಡೆ ಈ ಋತುವನ್ನು ಮರೆತುಬಿಡಬೇಕಾದ ಋತುವಾಗಿದೆ, ಆದರೆ ಉತ್ತಮ ಆಟವಾಡಿದ್ದನ್ನು ಮರೆಯುವಂತಿಲ್ಲ. ಜೆಮ್ಷೆಡ್ಪುರ ತಂಡದ ವಿರುದ್ಧ 1=0 ಗೋಲಿನ ಅಂತರದಲ್ಲಿ ಸೋತ ಬಳಿಕ ತಂಡದ ಪ್ರಧಾನ ಕೋಚ್ ಸ್ಟುವರ್ಟ್ ಬಾಕ್ಸ್ಟರ್ ಹುದ್ದೆಯನ್ನು ತ್ಯಜಿಸಿದರು.

ಗೆರಾಲ್ಡ್ ಪೇಟನ್ ಆಗಮನ
ಮಧ್ಯಂತರ ಕೋಚ್ ಗೆರಾಲ್ಡ್ ಪೇಟನ್ ಅವರ ಆಗಮನದ ನಂತರವೂ ತಂಡ ಸೋಲಿನ ಸುಳಿಯನ್ನು ದಾಟಿ ಬಂದಿಲ್ಲ. ಒಡಿಶಾಕ್ಕಿಂತ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ನಾಕೌಟ್ ತಲಪುವ ಅವಕಾಶ ಹೆಚ್ಚಿದೆ. ಕೇರಳ ಇಲ್ಲಿ ಜಯ ಗಳಿಸಿದರೆ ತಂಡದ ಮುನ್ನಡೆಗೆ ಮನೋಬಲ ಸಿಗಲಿದೆ. ಮುಂಬರುವ ಎಲ್ಲಾ ಪಂದ್ಯಗಳಲ್ಲೂ ಕೇರಳಕ್ಕೆ ಜಯದ ಅನಿವಾರ್ಯತೆ ಇದೆ. ಜಯದ ಹಂತದಿಂದ ಕೇರಳ ಇದುವರೆಗೂ 16 ಅಂಕಗಳನ್ನು ಕಳೆದುಕೊಂಡಿದೆ. ಎಟಿಕೆಎಂಬಿ ಮತ್ತು ಮುಂಬೈ ಸಿಟಿ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಗೋಲು ಗಳಿಸಿದರೂ ಪಂದ್ಯ ಸೋಲಿನೊಂದಿಗೆ ಕೊನೆಗೊಂಡಿತ್ತು.


Click it and Unblock the Notifications














