ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್ : ಮಹಾರಾಷ್ಟ್ರ ಡರ್ಬಿ ಗೆದ್ದ ಮುಂಬೈ, ಪುಣೆಗೆ ಸೋಲು

ISL Maharashtra Derby : Mumbai FC down FC Pune City

ಮುಂಬೈ ಅಕ್ಟೋಬರ್ 19: ಮೊಡೌ ಸೌಗೌ (25ನೇ ನಿಮಿಷ) ಹಾಗೂ ರೊಲ್ ಬಾಸ್ಟೋಸ್ (45 ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮುಂಬೈ ತಂಡ ಎಫ್ ಸಿ ಪುಣೆ ಸಿಟಿ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ.

ಈ ಜಯದೊಂದಿಗೆ ಮುಂಬೈ ತಂಡ ಪುಣೆ ವಿರುದ್ಧ ಬಹಳ ಸಮಯದ ನಂತರ ಜಯ ಗಳಿಸಿ ನೆಮ್ಮದಿಯ ನಿಟ್ಟುಸಿರಿಟ್ಟಿತು. ಇಂಡಿಯನ್ ಸೂಪರ್ ಲೀಗ್ ಆರಂಭದಲ್ಲಿ ಮುಂಬೈ ತಂಡ ಪುಣೆ ವಿರುದ್ಧ ಗೆದ್ದಿತ್ತು. ಆ ನಂತರ ಇದೇ ಮೊದಲ ಬಾರಿ ಜಯ ಗಳಿಸಿದೆ. ಕೊನೆಯ ಹಂತದಲ್ಲಿ ಮುಂಬೈ ತಂಡಕ್ಕೆ ಮೂರನೇ ಗೋಲು ಗಳಿಸುವ ಅವಕಾಶ ಸಿಕ್ಕಿತ್ತು, ಆದರೆ ವಿಶಾಲ್ ಕೈಥ್ ಉತ್ತಮ ರೀತಿಯಲ್ಲಿ ತಡೆದು ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಪ್ರಥಮಾರ್ಧದಲ್ಲಿ ಮುಂಬೈ ಮೇಲುಗೈ:
25ನೇ ನಿಮಿಷದಲ್ಲಿ ಮೊಡೌ ಸೌಗೌ ಗಳಿಸಿದ ಸುಲಭ ಗೋಲಿನಿಂದ ಮುಂಬೈ ತಂಡ ಮುನ್ನಡೆ ಕಂಡಿತು. ಮುಂಬೈ ತಂಡ ಅದೃಷ್ಟದ ಆಟವನ್ನೇ ಆಡಿತ್ತು ಎನ್ನಬಹುದು. ಪೌಲೋ ಮಚಾಡೋ ಅವರಿಗೆ ಗೋಲು ಗಳಿಸುವ ಅವಕಾಶವಿದಿತ್ತು, ತುಳಿದ ಚೆಂಡು ಗೋಲ್‌ಬಾಕ್ಸ್‌ನ ಅಂಚಿಗೆ ತಗಲಿ ಹೊರ ಚಿಮ್ಮಿತು. ಚೆಂಡಿನ ನಿರೀಕ್ಷೆಯಲ್ಲೇ ಇದ್ದ ಮೊಡೌ ಸೌಗೌಗೆ ಸುಲಭವಾಗಿ ಗೋಲು ಗಳಿಸುವ ಅವಕಾಶ. ವಿಶಾಲ್ ಕೈತ್ ಚೆಂಡಿನಿಂದ ದೂರ ಇದ್ದ ಕಾರಣ ಮುಂಬೈಗೆ ಸುಲಭ ಗೋಲು. 1-0ಯಲ್ಲಿ ಮುನ್ನಡೆ.

ರೊಲ್ ಬಾಸ್ಟೋಸ್ 45 ನಿಮಿಷದಲ್ಲಿ ಪೆನಾಲ್ಟಿ ಕಿಕ್‌ನಿಂದ ಗಳಿಸಿದ ಗೋಲಿನಿಂದ ಮುಂಬೈ ತಂಡ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು. ಇದು ಅಚ್ಚರಿಯ ಮುನ್ನಡೆ. ಏಕೆಂದರೆ ಸಾಮಾನ್ಯವಾಗಿ ಇದುವರೆಗೂ ಆರಂಭದಲ್ಲಿ ಪುಣೆ ಮುಲುಗೈ ಸಾಧಿಸಿರುತ್ತಿತ್ತು.

ಆದರೆ ಈ ಬಾರಿ ಮುಂಬೈ ತಂಡ ಹಿಂದಿನ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿತು. ರೊಲ್ ಬಾಸ್ಟೋಸ್‌ಗೆ ಸುಲಭವಾಗಿ ಗೋಲು ಗಳಿಸುವ ಅವಕಾಶ ಇದ್ದಿತ್ತು. ಆದರೆ ರಾಬಿನ್ ಸಿಂಗ್ ತಡೆಯೊಡ್ಡಿದ ಕಾರಣ ರೆಫರಿ ಯಲ್ಲೋ ಕಾರ್ಡ್ ತೋರಿಸುವುದಲ್ಲದೆ ಮುಂಬೈಗೆ ಪೆನಾಲ್ಟಿ ಕಿಕ್‌ನ ಅವಕಾಶ ಕಲ್ಪಿಸಿದರು. ಯಾವುದೇ ಪ್ರಮಾದ ಎಸಗದ ರೊಲ್ ಸುಲಭವಾಗಿ ವಿಶಾಲ್ ಕೈತ್ ಅವರನ್ನು ವಂಚಿಸಿ ತಂಡಕ್ಕೆ 2-0 ಮುನ್ನಡೆ ನೀಡಿದರು.

ಲೂಸಿಯಾನಾ ಗೊಯೆನ್ ಅವರನ್ನೇ ಆಧರಿಸಿರುವ ತಂಡ ಈಗಾಗಲೇ ಮೂರು ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ. ಗೊಯೆನ್ ಆಡಿರುವ ಎರಡು ಪಂದ್ಯಗಳಲ್ಲಿ 13 ಬಾರಿ ಟ್ಯಾಕಲ್ ಮಾಡಿದ್ದಾರೆ. ಹೆಚ್ಚಿನ ಕ್ಲಿಯರೆನ್ಸ್ ಕೂಡ ಗೊಯೆನ್ ಹೆಸರಿನಲ್ಲಿದೆ. ಮತ್ತೊಮ್ಮೆ ಗೊಯೆನ್ ತಂಡಕ್ಕೆ ನೆರವಾಗಲಿದ್ದಾರೆ ಎಂಬುದು ಮುಂಬೈ ತಂಡದ ನಿರೀಕ್ಷೆ.

ಮಾರ್ಸೆಲಿನೊ ತಂಡವನ್ನು ಸೇರಿಕೊಂಡಿರುವುದು ಪುಣೆ ತಂಡದ ಶಕ್ತಿಯನ್ನು ಹೆಚ್ಚಿಸಿದೆ. ಮಾರ್ಸೆಲಿನೊ ಹಾಗೂ ಅಲ್ಫಾರೋ ಕಳೆದ ಋತುವಿನಲ್ಲಿ ಹೊಂದಾಣಿಕೆಯ ಆಟವಾಡಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 31 ಗೋಲುಗಳಲ್ಲಿ 17 ಗೋಲುಗಳನ್ನು ಈ ಇಬ್ಬರು ಆಟಗಾರರು ಹಂಚಿಕೊಂಡಿದ್ದರು. ಪ್ರತಿಯೊಂದು ಪಂದ್ಯದಲ್ಲೂ ಗೋಲು ಗಳಿಸಿರುವ ಮಾರ್ಸೆಲಿನೊ ಯಶಸ್ಸಿನಲ್ಲಿಪುಣೆ ತಂಡ ಸೋತಿರಲಿಲ್ಲ.

ಮಹಾರಾಷ್ಟ್ರ ಡರ್ಬಿ
ಮುಂಬೈ ಫುಟ್ಬಾಲ್ ಅರೆನಾದಲ್ಲಿ ಆರಂಭಗೊಂಡ ಇಂಡಿಯನ್ ಸೂಪರ್ ಲೀಗ್‌ನ 12ನೇ ಪಂದ್ಯ ಅದು ಮಹಾರಾಷ್ಟ್ರ ಡರ್ಬಿಯಾಗಿತ್ತು. ಈ ಬಾರಿಯ ಲೀಗ್‌ನಲ್ಲಿ ಅನಿರೀಕ್ಷಿತ ಲಿತಾಂಶಗಳು ಫುಟ್ಬಾಲ್ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುತ್ತಿವೆ. ಗುರುವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ತಂಡ 4-3 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಅಚ್ಚರಿ ಮೂಡಿಸಿತ್ತು.

ಪುಣೆ ಹಾಗೂ ಮುಂಬೈ ನಡುವಿನ ಪಂದ್ಯವೆಂದಾಗ ಅಲ್ಲಿ ಕುತೂಹಲ ಮನೆ ಮಾಡಿರುತ್ತದೆ. ತಮ್ಮ ನೆರೆಯ ತಂಡದ ವಿರುದ್ಧ ಜಯ ಗಳಿಸಲು ಆತಿಥೇಯ ಮುಂಬೈಗೆ ಇದು ಉತ್ತಮ ಅವಕಾಶ. ಈ ಹಿಂದಿನ ಮೂರು ಪಂದ್ಯಗಳಲ್ಲಿ ಮುಂಬೈ ತಂಡ ಪುಣೆ ವಿರುದ್ಧ ಜಯ ಗಳಿಸಿರಲಿಲ್ಲ. ಇಂಡಿಯನ್ ಸೂಪರ್ ಲೀಗ್‌ನ ಮೊದಲ ಋತುವಿನಲ್ಲಿ ನಡೆದ ಪಂದ್ಯದಲ್ಲಿ ಆಂಡ್ರೆ ಫ್ರಾನ್ಸಿಸ್ಕೋ ಮೊರ್ಟಿಜ್ ಹ್ಯಾಟ್ರಿಕ್ ಗೋಲು ಗಳಿಸಿದ ಪರಿಣಾಮ ಮುಂಬೈ 5-0 ಅಂತರದಲ್ಲಿ ಜಯ ಗಳಿಸಿತ್ತು.

Story first published: Friday, October 19, 2018, 22:14 [IST]
Other articles published on Oct 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X