Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್: ಗೋವಾ-ನಾರ್ತ್ ಈಸ್ಟ್ ರೋಚಕ ಪಂದ್ಯ, ಡ್ರಾದಲ್ಲಿ ಅಂತ್ಯ

ISL: Manvir rescues point for Goa with last-minute goal

ಗುವಾಹಟಿ, ನವೆಂಬರ್ 1: ಅತ್ಯಂತ ರೋಚಕವಾಗಿ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಎಫ್ ಸಿ ಗೋವಾ ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿ ಅಂಕ ಹಂಚಿಕೊಂಡವು. ನಾರ್ತ್ ಈಸ್ಟ್ ಯುನೈಟೆಡ್ ಪರ ಅಸಮೋಹ್ ಗ್ಯಾನ್ ( 54ನೇ ನಿಮಿಷ) ಮತ್ತು ರೆಡೀಮ್ ತ್ಲ್ಯಾಂಗ್ ( 74 ನಿಮಿಷ) ಗೋಲು ಗಳಿಸಿದರೆ, ಗೋವಾ ಪರ ಹ್ಯೂಗೋ ಬೌಮಸ್ ( 31ನೇ ನಿಮಿಷ) ಹಾಗೂ ಮನ್ವಿರ್ ಸಿಂಗ್ ( 90+ ನೇ ನಿಮಿಷ) ಗೋಲು ಗಳಿಸಿದರು. ಬೆಂಗಳೂರು ವಿರುದ್ಧವೂ ಗೋವಾ ಇದೇ ರೀತಿ ಅಂತಿಮ ಕ್ಷಣದಲ್ಲಿ ಗೋಳು ಗಳಿಸಿ ಡ್ರಾ ಸಾಧಿಸಿತ್ತು.

ಮುನ್ನಡೆದ ನಾರ್ತ್ ಈಸ್ಟ್
ಹಿಂದಿನ ಪಂದ್ಯದಲ್ಲಿ ನಾರ್ತ್ ಈಸ್ಟ್ ಗೆ ಜಯ ತಂದುಕೊಟ್ಟಿದ್ದ ರೆಡೀಮ್ ತ್ಲ್ಯಾಂಗ್ 74 ನಿಮಿಷದಲ್ಲಿ ಗೋಳು ಗಳಿಸಿ ಆತಿಥೇಯ ಗೋವಾಕ್ಕೆ ಅಚ್ಚರಿ ಮೂಡಿಸಿದರು. ಮಾರ್ಟಿನ್ ಚಾವೇಸ್ ನೀಡಿದ ಪಾಸ್ ಮೂಲಕ ತ್ಲ್ಯಾಂಗ್ ಗೋಲು ಗಳಿಸಿ ಜಯಕ್ಕೆ ಅಗತ್ಯ ಇರುವ ವೇದಿಕೆ ನಿರ್ಮಿಸಿದರು. ಈ ಹಂತದಲ್ಲಿ ದಾಖಲಾದ ಈ ಗೋಲು ಗೋವಾ ತಂಡವನ್ನು ಒತ್ತಡಕ್ಕೆ ಸಿಲುಕುವಂತೆ ಮಾಡಿತು.

ಸಮಬಲ ಸಾಧಿಸಿದ ಗ್ಯಾನ್
ಪ್ರಥಮಾರ್ಧದಲ್ಲಿ ಸಿಕ್ಕ ಸುವರ್ಣ ಅವಕಾಶವನ್ನು ಕೈ ಚೆಲ್ಲಿದ್ದ ಅಸಮೋಹ್ ಗ್ಯಾನ್ ದ್ವಿತೀಯಾರ್ಧದ 54ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯವನ್ನು 1-1 ಸಮಬಲಗೊಳಿಸಿದರು,. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದ ಗ್ಯಾನ್ ತಾವು ಮಾಡಿದ ತಪ್ಪನ್ನು ತಿದ್ದಿಕೊಂಡು ತಂಡಕ್ಕೆ ಯಶಸ್ಸು ತಂದುಕೊಟ್ಟರು. ಆ ನಂತರ ಜಾಕಿಚಾಂದ್ ಸಿಂಗ್ ಗೋಳು ಗಳಿಸಿ ಗೋವಾ ತಂಡಕ್ಕೆ ಮುನ್ನಡೆ ಕಲ್ಪಿಸುವವರಿದ್ದರು, ಆದರೆ, ಸುಭಾಶಿಶ್ ರಾಯ್ ಉತ್ತಮ ರೀತಿಯಲ್ಲಿ ತಡೆದು ಗೋವಾದ ಪ್ರಯತ್ನವನ್ನು ಹುಸಿಗೊಳಿಸಿದರು.

ಗೋವಾ ಮೇಲುಗೈ
ಆತಿಥೇಯ ನಾರ್ತ್ ಈಸ್ಟ್ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದರೆ, ಗೋವಾ ಸಿಕ್ಕ ಅವಕಾಶದಲ್ಲಿ ಗೋಲು ಗಳಿಸಿತು. ಹ್ಯೂಗೋ ಬೌಮೋಸ್ 31ನೇ ನಿಮಿಷದಲ್ಲಿ ಗಳಿಸಿದ ಗೋಲು ಪ್ರವಾಸಿ ಗೋವಾಕ್ಕೆ ಮುನ್ನಡೆ ಸಿಕ್ಕಿತು. 34ನೇ ನಿಮಿಷದಲ್ಲಿ ಅಸಮೋಹ್ ಗ್ಯಾನ್ ಗೋಲು ಗಳಿಸುವ ಉತ್ತಮ ಅವಕಾಶವನ್ನು ಕಳೆದುಕೊಂಡರು. ನಂತರ ಸಿಕ್ಕ ಅವಕಾಶಗಳಲ್ಲಿ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹಲವಾರು ಅವಕಾಶಗಳನ್ನು ನಿರ್ಮಿಸಿಕೊಂಡರೂ ಸಮಬಲಕ್ಕೆ ಸಾಧ್ಯವಾಗಲಿಲ್ಲ. ಮೌರ್ತದಾ ಫಾಲ್ ನೀಡಿದ ಪಾಸ್ ಗ್ಯಾನ್ ಅವರ ನಿಯಂತ್ರಣಕ್ಕೆ ಸಿಕ್ಕಿತು. ಚೆಂಡಿನ ನಿಯಂತ್ರಣ ಸಾಧಿಸಿದ ಗ್ಯಾನ್ ಗೆ ಗೋಲು ಗಳಿಸಲು ಇಷ್ಟು ಉತ್ತಮ ಅವಕಾಶ ಮುಂದಿನ ಅವಧಿಯಲ್ಲಿ ಸಿಗುವುದು ಸಂಶಯ ಅನಿಸುವಷ್ಟು ಆ ಅವಕಾಶ ಗೋಲು ಗಳಿಕೆಗೆ ಉತ್ತಮವಾಗಿತ್ತು. ಆದರೆ ಚೆಂಡು ಗೋಲ್ ಬಾಕ್ಸ್ ನ ಬಾರ್ ಗೆ ತಗುಲಿ ಗೋಲ್ ಕೀಪರ್ ಕೈ ಸೇರಿತ್ತು.

ISL: Manvir rescues point for Goa with last-minute goal

ಗೋವಾದ ಅದೃಷ್ಟ ಪರೀಕ್ಷೆ
ಇಂಡಿಯನ್ ಸೂಪರ್ ಲೀಗ್ ನ 13ನೇ ಪಂದ್ಯದಲ್ಲಿ ಎಫ್ ಸಿ ಗೋವಾ ಹಾಗೂ ಆತಿಥೇಯ ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಮುಖಾಮುಖಿಯಾದವು. ಗೋವಾ ತಂಡ ಈ ಅಂಗಣದಲ್ಲಿ ಇದುವರೆಗೂ ಗೆದ್ದಿರಲಿಲ್ಲ. ಕಾಡೆತ್ತು ಖ್ಯಾತಿಯ ಗೋವಾ ತಂಡಕ್ಕೆ ಹೊರಗಡೆ ನಡೆಯುತ್ತಿರುವ ಮೊದಲ ಪಂದ್ಯ. ಬೆಂಗಳೂರು ವಿರುದ್ಧ ಮನೆಯಂಗಣದಲ್ಲಿ ಅಂಕ ಹಂಚಿಕೊಂಡ ಗೋವಾ ಈಗ ನಾರ್ತ್ ಈಸ್ಟ್ ವಿರುದ್ಧ ಸಂಪೂರ್ಣ ಮೂರು ಅಂಕ ಗಳಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು. ಐಎಸ್ ಎಲ್ ನಲ್ಲಿ ಅತಿಹೆಚ್ಚು ಗೋಲು ಗಳಿಸಿದ ಖ್ಯಾತಿ ಪಡೆದಿರುವ ಫೆರಾನ್ ಕೊರೊಮಿನಾಸ್, ಹಿಂದಿನ ಎರಡೂ ಪಂದ್ಯಗಳಲ್ಲಿ ಗೋಲು ಗಳಿಸಿ ತನ್ನ ಪ್ರಭುತ್ವ ಸಾಧಿಸಿದ್ದರು.

ನಾರ್ತ್ ಈಸ್ಟ್ ಯುನೈಟೆಡ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಡ್ರಾ ಸಾಧನೆ ಮಾಡಿ ನಂತರ ಒಡಿಶಾ ಎಫ್ ಸಿ ವಿರುದ್ಧ ಜಯ ಗಳಿಸಿತ್ತು. ಇಲ್ಲಿ ಜಯ ಗಳಿಸುವ ತಂಡ ಅಂಕ ಪಟ್ಟಿಯೆಯಲ್ಲಿ ಅಗ್ರ ಸ್ಥಾನಕ್ಕೆ ಜಿಗಿಯಲಿದೆ. ಪ್ರರ್ವತ ಪ್ರದೇಶದ ತಂಡ ಗೋವಾ ವಿರುದ್ಧ ಗೆದ್ದರೆ ಮನೆಯಂಗಣದಲ್ಲಿ ಸತತ ಎಂಟನೇ ಜಯ ಸಾಧಿಸಿದಂತಾಗುತ್ತದೆ. ನಾರ್ತ್ ಈಸ್ಟ್ ತಂಡ ಅಂತಾರಾಷ್ಟ್ರೀಯ ಅನುಭವಿ ಆಟಗಾರ ಅಸಮೋಹ್ ಗ್ಯಾನ್ ಹೊಂದಿರುವುದು ತಂಡದ ಆತ್ಮಬಲ ಹೆಚ್ಚಲು ಕಾರಣ.. ಹಿಂದಿಯ ಪಂದ್ಯದಲ್ಲಿ ರೆಡೀಮ್ ತ್ಲ್ಯಾಂಗ್ ಗೋಲು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Story first published: Friday, November 1, 2019, 23:38 [IST]
Other articles published on Nov 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+