Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಸ್‌ಎಲ್ 2020: ಮುಂಬೈಗೆ ನಾಲ್ಕನೇ ಸ್ಥಾನ ಭದ್ರಪಡಿಸಿಕೊಳ್ಳುವ ಹಂಬಲ

ISL: Mumbai look to extend comfort in top-four run-in

ಮುಂಬೈ, ಫೆಬ್ರವರಿ 6: ಮುಂಬೈ ಫುಟ್ಬಾಲ್ ಅರೇನಾದಲ್ಲಿ ಗುರುವಾರ ನಡೆಯಲಿರುವ ಜೆಮ್ಷೆಡ್ಪುರ ಎಫ್ ಸಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್ ಸಿ ನಾಲ್ಕನೇ ಸ್ಥಾನದಲ್ಲಿ ತನ್ನ ಇರುವಿಕೆಯನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿದೆ.

ಚೆನ್ನೈಯಿನ್ ಎಫ್ ಸಿ ಗಿಂತ ಎರಡು ಸ್ಥಾನ ಮೇಲುಗೈ ಸಾಧಿಸಿರುವ ಮುಂಬೈ ಆ ತಂಡಕ್ಕಿಂತ ಒಂದು ಪಂದ್ಯ ಹೆಚ್ಚು ಆಡಿದೆ. ಯಾವುದೇ ರೀತಿಯಲ್ಲಾದರೂ ಮುಂಬೈಗೆ ಜೆಮ್ಷೆಡ್ಪುರ ವಿರುದ್ಧ ಗೆಲ್ಲಲೇಬೇಕಾಗಿದೆ. ಮುಂದಿನ ಕೊನೆಯ ಎರಡು ಪಂದ್ಯಗಳು ಬಲಿಷ್ಠ ಎಫ್ ಸಿ ಗೋವಾ ಹಾಗೂ ಚೆನ್ನೈಯಿನ್ ವಿರುದ್ಧ ಇರುವುದರಿಂದ ಮುಂಬೈಗೆ ಇಲ್ಲಿ ಜಯದ ಅಗತ್ಯ ಇದೆ. ಇದರಿಂದಾಗಿ ಜಾರ್ಜ್ ಕೋಸ್ಟಾ ಪಡೆಗೆ ಇಲ್ಲಿ ಜಯದ ಅನಿವಾರ್ಯತೆ ಇದೆ.

1
2026501

''ನಾವು ಜೆಮ್ಷೆಡ್ಪುರ ತಂಡವನ್ನು ಗೌರವಿಸಬೇಕು. ಋತುವಿನ ಕೊನೆಯಲ್ಲಿ ಈಗ ಎರಡು ಪಂದ್ಯಗಳು ಉಳಿದುಕೊಂಡಿವೆ. ನಾವು ಇದರಲ್ಲಿ ಹೆಚ್ಚಿನ ಬದಲಾವಣೆ ಬಯಸುವುದಿಲ್ಲ. ನಾವು ಕೆಲವೊಮ್ಮೆ ತಿರುಚುವ ಪ್ರವೃತ್ತಿಯನ್ನು ಮಾಡುತ್ತೇವೆ. ಆದರೆ ನಾವು ನಮ್ಮ ಯೋಜನೆಗೆ ಬದ್ಧವಾಗಿರುತ್ತೇವೆ. ನಮಗೆ ಮೂರು ಅಂಕಗಳ ಅಗತ್ಯವಿದೆ. ಆದರೆ ಸೋಲು ನಮಗೆ ಹಿತವಾದುದಲ್ಲ. ನಮ್ಮ ಮುಂದೆ ಈಗ ಇರುವುದು ಎರಡೇ ಆಯ್ಕೆ, ಗೆಲ್ಲುವುದು ಮತ್ತು ಗೆಲ್ಲುವುದು. ಬೇರೆ ಆಯ್ಕೆಯೇ ಇಲ್ಲವಾಗಿದೆ.'' ಎಂದು ಕೋಸ್ಟಾ ಹೇಳಿದ್ದಾರೆ.

ISL: Mumbai look to extend comfort in top-four run-in

ಮುಂಬೈ ತಂಡ ಇತ್ತೀಚಿನ ದಿನಗಳಲ್ಲಿ ಮನೆಯಂಗಣಲ್ಲಿ ಉತ್ತಮ ಪ್ರದರ್ಶನ ತೋರಿದೆ. ಮನೆಯಂಗಣದಲ್ಲಿ ಈ ಹಿಂದೆ ನಡೆದ ಎರಡೂ ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ಗೋಲನ್ನು ನೀಡದೆ ಜಯ ಗಳಿಸಿತ್ತು. ಮುಂಬೈ ತಂಡದ ಡಿಫೆನ್ಸ್ ವಿಭಾಗ ಎಷ್ಟು ಉತ್ತಮ ರೀತಿಯಲ್ಲಿ ಚೇತರಿಸಿದೆ ಎಂದರೆ ಕಳೆದ ಮೂರು ಪಂದ್ಯಗಳಲ್ಲಿ ತಂಡ ನೀಡಿರುವುದು ಕೇವಲ ಒಂದು ಗೋಲು.

ತಂಡದ ಯಶಸ್ಸಿನಲ್ಲಿ ರಾಲಿನ್ ಬೋರ್ಗಸ್ ಉತ್ತಮ ಪಾತ್ರವಹಿಸಿದ್ದಾರೆ. ಆದರೆ ಗೇಮ್ ಚೇಂಜರ್ ಎಂದೇ ಖ್ಯಾತಿ ಪಡೆದಿರುವ ಡಿಗೋ ಕಾರ್ಲೋಸ್ ನಾರ್ಥ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಜಯದ ಗೋಲು ಗಳಿಸಿದ್ದರು. ಜೆಮ್ಷೆಡ್ಪುರ ಎಫ್ ಸಿ ಮನೆಯಂಗಣದ ಹೊರಗಡೆ ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವುದು ಗನಾರ್ಹ. ಕಳೆದ ಮೂರು ಪಂದ್ಯಗಳಲ್ಲಿ ಜೆಮ್ಷೆಡ್ಪುರ ಜಯ ಗಳಿಸಿರಲಿಲ್ಲ.

ಎಟಿಕೆ ವಿರುದ್ಧ ನಡೆದ ಪಂದ್ಯದಲ್ಲಿ 0-3 ಅಂತರದಲ್ಲಿ ಸೋತಿರುವ ಮುಂಬೈ ಒಟ್ಟು 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಟಾಟಾ ಪಡೆ ಸಂಪೂರ್ಣವಾಗಿ ಪ್ನೇ ಆಫ್ ನಿಂದ ಹೊರನಡೆದಿಲ್ಲ. ಗುರುವಾರ ಗೆದ್ದರೆ ತನ್ನ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲಿದೆ. ಮುಂಬೈಗಿಂತ ನಾಲ್ಕು ಅಂಕ ಹಿಂದೆ ಬೀಳಲಿದೆ.

''ನಾವು ಗೋಲುಗಳನ್ನು ಗಳಿಸುವ ಮತ್ತು ಹೆಚ್ಚು ಅವಕಾಶಗಳನ್ನು ನಿರ್ಮಿಸುವ ಗುರಿ ಹೊಂದಿದ್ದೇವೆ. ಅವಕಾಶಗಳನ್ನು ಗೋಲಾಗಿಸುವುದು ನಮ್ಮ ಮುಂದಿರುವ ಸವಾಲು. ನಾವು ಚೆಂಡನ್ನು ನಿಯಂತ್ರಸುವ ಬಗ್ಗೆ ಹೆಚ್ಚು ಗಮನಹರಿಸುತ್ತಿಲ್ಲ, ಬದಲಾಗಿ ಗೋಲು ಗಳಿಸವುದು ನಮ್ಮ ಗುರಿ, ಈ ಬಗ್ಗೆ ನಾವು ಕೆಲಸ ಮಾಡುತ್ತಿದ್ದೇವೆ,'' ಎಂದು ಟಾಟಾ ಪಡೆಯ ಕೋಚ್ ಇರಿಯಾಂಡೋ ಹೇಳಿದ್ದಾರೆ.

Story first published: Thursday, February 6, 2020, 16:02 [IST]
Other articles published on Feb 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+