
ಮುಂಬೈ ಜನವರಿ 24: ಕೇರಳ ಬ್ಲಾಸ್ಟರ್ಸ್ ಹಾಗೂ ಎಫ್ಸಿ ಪುಣೆ ಸಿಟಿ ತಂಡಕ್ಕೆ ಹೊಸ ತರಬೇತುದಾರರನ್ನು ನಿಯೋಜಿಸಲಾಗಿದೆ, ಆದರೆ ಋತು ಆರಂಭವಾಗುವುದಕ್ಕೆ ಮುನ್ನ ಹೀರೋ ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್) ನಾಕೌಟ್ ಹಂತ ತಲುಪಬೇಕೆಂಬ ತಂಡದ ಗುರಿಯನ್ನು ತಲಪುವುದು ಈ ಬಾರಿ ಕಷ್ಟವೆನಿಸಿದೆ.
40 ದಿನಗಳ ವಿಶ್ರಾಂತಿಯ ಬಳಿಕ ಮತ್ತೆ ಇಂಡಿಯನ್ ಸೂಪರ್ ಲೀಗ್‌ಗೆ ಆರಂಭ ದೊರೆತಿದೆ. ಕೇರಳ ಬ್ಲಾಸ್ಟರ್ಸ್ ತಂಡ ಕೊಚ್ಚಿಯಲ್ಲಿ ಎಟಿಕೆ ತಂಡಕ್ಕೆ ಆತಿಥ್ಯ ನೀಡಲಿದೆ. ಉತ್ತಮ ಪ್ರದರ್ಶನ ನೀಡುವಲ್ಲಿ ವಿಲವಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನ ಮಾಜಿ ಗೋಲ್‌ಕೀಪರ್ ಕೋಚ್ ಡೇವಿಡ್ ಜೇಮ್ಸ್ ಅವರನ್ನು ತಂಡ ಹೊರಗಿಟ್ಟಿದೆ. ನಾರ್ತ್ ಈಸ್ಟ್ ಯುನೈಟೆಡ್‌ನ ಮಾಜಿ ಮ್ಯಾನೇಜರ್ ನೆಲೊ ವಿಂಗಡಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಉಳಿದಿರುವ ಪಂದ್ಯಗಳಲ್ಲಿ ಪಂದ್ಯವನ್ನು ಮುನ್ನಡೆಸಿ ಯಶಸ್ಸಿನ ಗುರಿ ತಲುಪಿಸುವ ಜವಾಬ್ದಾರಿಯನ್ನು ನೂತನ ಕೋಚ್‌ಗೆ ನೀಡಲಾಗಿದೆ.
ಮಧ್ಯಂತರದಲ್ಲಿ ಕೋಚ್ ಬದಲಾವಣೆ ಮಾಡುವುದರಿಂದ ಯಾವ ರೀತಿಯಲ್ಲಾದರೂ ನೆರವಾದೀತೆ?, ಈ ರೀತಿ ಮಧ್ಯಂತರದಲ್ಲಿ ಕೋಚ್ ಬದಲಾವಣೆ ಮಾಡುವುದರಿಂದ ನಮಗೆ ಅಗತ್ಯವಿರುವ ಫಲಿತಾಂಶವನ್ನು ಗಳಿಸಲು ಸಾಧ್ಯವಿಲ್ಲ ಎಂಬುದು ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಗೊತ್ತೇ ಇದೆ. ವಿಂಗಡಾ ಕೂಡ ಈ ಬಾರಿಯ ಐಎಸ್‌ಎಲ್‌ನಲ್ಲಿ ಎರಡನೇ ಬಾರಿ ಬದಲಾವಣೆಗೆ ಗುರಿಯಾದ ಕೋಚ್. ಮೂರು ತಿಂಗಳು ಕಳೆಯುತ್ತಿದ್ದಂತೆ ಪುಣೆ ಸಿಟಿ ತಂಡ ಸ್ಪೇನ್ನಿ ಮಿಗ್ವೆಲ್ ಏಂಜಲ್ ಪೋರ್ಚುಗಲ್ ಬದಲಿಗೆ ಪ್ರದ್ಯುಮ್ ರೆಡ್ಡಿ ಅವರನ್ನು ನಿಯೋಜಿಸಿತ್ತು. ಈ ಬದಲಾವಣೆ ಕಂಡಿದ್ದು ಕೇವಲ ಮೂರು ಪಂದ್ಯಗಳು ಮುಗಿಯುತಿದ್ದಂತೆ.
ರೆಡ್ಡಿ ಅವರು ಕೋಚ್ ಆಗಿ ಜವಾಬ್ದಾರಿ ವಹಿಸುತ್ತಿದ್ದಂತೆ ಪುಣೆ ತಂಡದಲ್ಲಿ ಅಲ್ಪ ಪ್ರಮಾಣದ ಬದಲಾವಣೆ ಕಂಡು ಬಂತು. ಈಗ ತಂಡದ ಕೋಚ್ ಆಗಿ ಇಂಗ್ಲೆಂಡ್‌ನ ಫಿಲ್ ಬ್ರೌನ್ ಅವರು ಕಾರ್ಯನಿರ್ವಹಿಸುತ್ತಿದ್ದರೂ ನಾಕೌಟ್ ಹಂತ ತಲಪುವ ಪುಣೆ ತಂಡದ ಗುರಿ ಮಾತ್ರ ಕಠಿಣವಾಗಿರುವುದು ಸ್ಪಷ್ಟ. ಏಕೆಂದರೆ ತಂಡ ಆಡಿರುವ 12 ಪಂದ್ಯಗಳಲ್ಲಿ 11 ಅಂಕಗಳನ್ನು ಗಳಿಸಿ ಏಳನೇ ಸ್ಥಾನದಲ್ಲಿದೆ.
ಕಳೆದ ಋತುವಿನಲ್ಲಿ ಕೇರಳ ಬ್ಲಾಸ್ಟರ್ಸ್ ಸೇರಿದಂತೆ ಒಟ್ಟು ಮೂರು ತಂಡಗಳು ಮಧ್ಯಂತರದಲ್ಲಿ ತಮ್ಮ ಕೋಚ್‌ಗಳನ್ನು ಬದಲಾಯಿಸಿವೆ. ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಒಂದು ಜಯ ಕಂಡಿರುವ ಹಿನ್ನೆಲೆಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾಜಿ ಕೋಚ್ ರೇನೆ ಮ್ಯೂಲೆನ್‌ಸ್ಟೀನ್ ಅವರಿಗೆ ಕೊಕ್ ನೀಡಲಾಯಿತು. ಅದೇ ರೀತಿ ನಾರ್ತ್ ಈಸ್ಟ್ ತಂಡ ಜೋವ್ ಡಿ ಡ್ಯೂಸ್ ಅವರಿಗೂ ಮನೆಯ ಹಾದಿ ತೋರಿಸಲಾಗಿತ್ತು. ಎಟಿಕೆ ತಂಡದಲ್ಲೂ ಟೆಡ್ಡಿ ಶೆರಿಂಗಮ್ ಅವರ ಸ್ಥಾನದಲ್ಲಿ ತಾಂತ್ರಿಕ ನಿರ್ದೇಶಕರಾಗಿ ಅಶ್ಲೇ ವೆಸ್ಟ್‌ವುಡ್ ಸೇರಿಕೊಂಡರು. ಅದೇ ರೀತಿ ರಾಬಿ ಕೇನ್ ಕೂಡ ಆಟಗಾರ ಮತ್ತು ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
'ಐಎಸ್‌ಎಲ್‌ನ ಉಳಿದಿರುವ ಪಂದ್ಯಗಳಿಗೆ ಕೇರಳ ಬ್ಲಾಸ್ಟರ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಲು ಹೆಮ್ಮೆ ಅನಿಸುತ್ತಿದೆ. ಈ ಕೆಲಸಕ್ಕಾಗಿ ನಾನು ಉತ್ಸುಕನಾಗಿದ್ದೇನೆ. ಭಾರತದ ಅತ್ಯಂತ ಪ್ರತಿಭಾನ್ವಿತ ಆಟಗಾರರಿಂದ ಕೂಡಿದ ತಂಡಕ್ಕೆ ತರಬೇತಿ ನೀಡಲು ಖುಷಿ ಎನಿಸಿದೆ. ಮುಂದಿರುವ ಪಂದ್ಯಗಳಲ್ಲಿ ಉತ್ತಮ ಲಿತಾಂಶ ನೀಡುವುದು ನಮ್ಮ ಗುರಿಯಾಗಿದೆ,' ಎಂದು ವಿಂಗಡ ಹೇಳಿದ್ದಾರೆ. ಜವಾಬ್ದಾರಿ ಇದ್ದರೂ, ಉತ್ತಮ ಗುರಿ ಹೊಂದಿದ್ದರೂರ ಪ್ಲೇ ಆಫ್ ಹಂತ ತಲಪುವುದು ಅಷ್ಟು ಸುಲಭವಲ್ಲ ಎಂಬ ಅಂಶ ಪೋರ್ಚುಗೀಸ್ ಕೋಚ್‌ಗೆ ಗೊತ್ತಿರಬೇಕು.
ತಂಡದಲ್ಲಿ ಆಟಗಾರರ ಮನೋಬಲವನ್ನು ಹೆಚ್ಚಿಸುವ ಕೆಲಸವನ್ನು ಕೋಚ್ ಮಾಡಬೇಕಾಗಿದೆ. ಬ್ರೌನ್ ಕೂಡ ತಂಡಕ್ಕೆ ಹೆಚ್ಚಿನ ಜಯವನ್ನು ತಂದುಕೊಡುವ ಕೆಲಸ ಮಾಡಬೇಕಾಗಿದೆ. ಪ್ಲೋ ಆಫ್ ಹಂತ?, ಆದರೆ ಈ ಬಗ್ಗೆ ಈಗಲೇ ಮಾತನಾಡುವುದು ಕಷ್ಟ.