ಐಎಸ್‌ಎಲ್ 2020: ಜಯದ ಓಟ ಮುಂದುವರೆಸಿದ ಒಡಿಶಾ ಎಫ್‌ಸಿ

ಹೈದರಾಬಾದ್, ಜನವರಿ 15: ಅರಿದಾನೇ ಸ್ಯಾಂಟನಾ (1 ಮತ್ತು 45ನೇ ನಿಮಿಷ) ಗಳಿಸಿದ ಎರಡು ಗೋಲುಗಳ ನೆರವಿನಿಂದ ಹೈದರಾಬಾದ್ ಎಫ್ ಸಿ ತಂಡವನ್ನು 2-1 ಗೋಲಿನಿಂದ ಮಣಿಸಿದದ ಒಡಿಶಾ ಎಫ್ ಸಿ ಹೀರೋ ಇಂಡಿಯನ್ ಸೂಪರ್ ಲೀಗ್ ನ ಅಂಕ ಪಟ್ಟಿಯಲ್ಲಿ ಎಟಿಕೆಯೊಂದಿಗೆ ಮೂರನೇ ಸ್ಥಾನ ಹಂಚಿಕೊಂಡಿತು, ಒಡಿಶಾ ಹಾಗೂ ಎಟಿಕೆ 21 ಅಂಕ ಗಳಿಸಿ ಸಮಬಲ ಸಾಧೀಸಿದವು.
ಒಡಿಶಾಕ್ಕೆ ಮುನ್ನಡೆ
ಆತಿಥೇಯ ಹೈದರಾಬಾದ್ ತಂಡ ಉತ್ತಮ ಪೈಪೋಟಿ ನೀಡಿದರೂ ಬಲಿಷ್ಠ ಒಡಿಶಾ 2-1 ಗೋಲುಗಳ ಅಂತರದಲ್ಲಿ ಪ್ರಥಮಾರ್ಧದಲ್ಲಿ ಮೇಲುಗಯ ಸಾಧಿಸಿತು. ಪಂದ್ಯ ಆರಂಭಗೊಂಡ ಮೊದಲ ನಿಮಿಷದಲ್ಲೇ ಮಾರ್ಸೆಲೋ ಪೆರೆರಾ ಗಳಿಸಿದ ಗೋಲಿನಿಂದ ಹೈದರಾಬಾದ್ ಆತ್ಮವಿಶ್ವಾಸದ ಹೆಜ್ಜೆ ಇಟ್ಟಿತು. ಆದರೆ ಈ ಸಂಭ್ರಮ ಆ ಒಂದು ನಿಮಿಷಕ್ಕೆ ಮಾತ್ರ ಸೀಮಿತವಾಗಿತ್ತು. ಏಕೆಂದರೆ ಅರಿದಾನೇ ಸ್ಯಾಂಟನಾ (15 ಮತ್ತು 45ನೇ ನಿಮಿಷ) ಎರಡು ಗೋಲುಗಳನ್ನು ಗಳಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಸ್ಯಾಂಟನಾ ಅವರು 8ನೇ ವೈಯಕ್ತಿಕ ಎಂಟನೇ ಗೋಲು ಗಳಿಸಿ ಪಂದ್ಯವನ್ನು ಸಮಬಲ ಗೊಳಿಸಿದರು.
ಪ್ರಥಮಾರ್ಧದ ಕೊನೆಯ ಕ್ಷಣದಲ್ಲಿ ಅಂದರೆ 45ನೇ ನಿಮಿಷದಲ್ಲಿ ಹೈದರಾಬಾದ್ ತಂಡದ ಡಿಂಪಲ್ ಭಗತ್ ಮಾಡಿದ ಪ್ರಮಾದದ ಕಾರಣ ಒಡಿಶಾ ತಂಡಕ್ಕೆ ಪೆನಾಲ್ಟಿ ಅವಕಾಶ. ಸ್ಯಾಂಟನಾ ಯಾವುದೇ ಪ್ರಮಾದ ಎಸಗದೆ ತಂಡಕ್ಕೆ ಎರಡನೇ ಗೋಲು ಗಳಿಸಿ ಮುನ್ನಡೆ ಕಲ್ಪಿಸಿದರು. ಇದು ಅವರ ವೈಯಕ್ತಿಕ 9ನೇ ಗೋಲು. ಡಿಂಪಲ್ ಭಗತ್ ಎರಡನೇ ಬಾರಿಗೆ ಯಲ್ಲೋ ಕಾರ್ಡ್ ಪಡೆದು ರೆಡ್ ಕಾರ್ಡ್ ನೊಂದಿಗೆ ಹೊರ ನಡೆದರು. ಇದರೊಂದಿಗೆ ಹೈದರಾಬಾದ್ ದ್ವಿತಿಯಾರ್ಧದಲ್ಲಿ ಕೇವಲ 10 ಆಟಗಾರರೊಂದಿಗೆ ಆಡಬೇಕಾಯಿತು.
ಒಡಿಶಾ ಫೇವರಿಟ್
ಇಂಡಿಯನ್ ಸೂಪರರ್ ಲೀಗ್ ನ 59ನೇ ಪಂದ್ಯದಲ್ಲಿ ಹೈದರಾಬಾದ್ ಎಫ್ ಸಿ ತಂಡ ಒಡಿಶಾ ಎಫ್ ಸಿಗೆ ಆತಿಥ್ಯ ನೀಡಿತು. ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿರುವ ಒಡಿಶಾ ತಂಡ ಅತ್ಯಂತ ಆತ್ಮವಿಶ್ವಾಸದಲ್ಲಿದೆ. ಅರಿದಾನೆ ಸ್ಯಾಂಟನಾ ಮತ್ತು ಕ್ಸಿಸ್ಕೋ ಹೆರ್ನಾಂಡೀಸ್ ಅವರು ಇದುವರೆಗೂ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ಸ್ಯಾಂಟನಾ 7 ಗೋಲುಗಳನ್ನು ಗಳಿಸಿ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಲ್ಲಿ ಜಯ ಗಳಿಸಿದರೆ ಒಡಿಶಾ ಮೂರನೇ ಸ್ಥಾನವನ್ನು ಎಟಿಕೆ ಜತ ಹಂಚಿಕೊಳ್ಳಲಿದೆ. ಒಡಿಶಾ ತತಂಡದ ದೌರ್ಬಲ್ಯವೆಂದರೆ ಮೊದಲ ಬಾರಿಗೆ ಗೋಲು ನೀಡಿದರೆ ಒಡಿಶಾ ಮತ್ತೆ ಚೇತರಿಸಿಕೊಳ್ಳುವುದು ಕಷ್ಟ. ಕ್ರಾಸ್ ಗಳಿಂದ ಒಡಿಶಾ ಎಫ್ ಸಿ 8 ಗೋಲುಗಳನ್ನು ಗಳಿಸಿದೆ.
ಆತಿಥೇಯ ಹೈದರಾಬಾದ್ ಇದುವರೆಗೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ತಂಡ ಗೆದ್ದಿರುವುದು ಒಂದು ಪಂದ್ಯ, ಅದು ಕೂಡ ನವೆಂಬರ್ ನಲ್ಲಿ. ಈಗ ತಂಡ ಎರಡನೇ ಜಯಕ್ಕಾಗಿ ಹಾತೊರೆಯುತ್ತಿದೆ. ತಂಡದ ಡಿಫೆನ್ಸ್ ವಿಭಾಗ ಉತ್ತಮವಾಗಿಲ್ಲ, ಒಮ್ಮೆಯೂ ಕ್ಲೀನ್ ಶೀಟ್ ಸಾಧನೆ ಮಾಡಲಾಗಲಿಲ್ಲ. ಮಾರ್ಸೆಲೊ ಪೆರೆರಾ ಮತ್ತು ನೆಸ್ಟರ್ ಜೆಸಸ್ ಬೆನಿಟೇಜ್ ತಮ್ಮ ನೈಜವಾದ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ. ಜಯದ ಲಯ ಕಂಡುಕೊಂಡು ಉಳಿದಿರುವ ಪಂದ್ಯಗಳಲ್ಲಿ ಜಯ ಸಾಧಿಸಿ ಗೌರವ ಕಾಯ್ದುಕೊಳ್ಳುವ ಗುರಿಯೊಂದಿಗೆ ಹೈದರಾಬಾದ್ ಅಂಗಣಕ್ಕಿಳಿಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications