ಐಎಸ್‌ಎಲ್‌ಗೆ ಅರ್ಹತೆ ಪಡೆದ 12ನೇ ತಂಡ: 2023-24ರ ಆವೃತ್ತಿಯಲ್ಲಿ ಭಾಗಿಯಾಗಲಿದೆ ಪಂಜಾಬ್ ಎಫ್‌ಸಿ
ಭಾರತದ ಪ್ರಖ್ಯಾತ ಫುಟ್ಬಾಲ್ ಲೀಗ್ ಟೂರ್ನಿಯಾದ ಇಂಡಿಯನ್ ಸೂಪರ್ ಲೀಗ್ ಈ ಬಾರಿ 12 ತಂಡಗಳ ಸ್ಪರ್ಧೆಯಾಗಿರಲಿದೆ. ಮುಂಬರುವ 2023-24ರ ಆವೃತ್ತಿಗೆ ಪಂಜಾಬ್ ಎಫ್‌ಸಿ ಕೂಡ ಅರ್ಹತೆಯನ್ನು ಪಡೆದುಕೊಂಡಿದ್ದು ತನ್ನ ಅದೃಷ್ಟವನ್ನು ಪರೀಕ್ಷಿಸಲಿದೆ. ಈ ಬಗ್ಗೆ ಬುಧವಾರ ಐಎಸ್‌ಎಲ್ ಖಚಿತಪಡಿಸಿದೆ.
ಹಲವಾರು ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಹೊಂದಿರುವ ಅತ್ಯಂತ ಯಶಸ್ವಿ ಭಾರತೀಯ ಫುಟ್‌ಬಾಲ್ ಕ್ಲಬ್‌ಗಳಲ್ಲಿ ಪಂಜಾಬ್ ಎಫ್‌ಸಿ ಕೂಡ ಒಂದು. ಇದೀಗ ಈ ಫುಟ್ಬಾಲ್ ಕ್ಲಬ್ ಕೂಡ ಭಾರತದ ಪ್ರತಿಷ್ಠಿತ ಫುಟ್ಬಾಲ್ ಲೀಗ್‌ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿದೆ. ಇದರಿಂದಾಗಿ ಯುವ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕೆಲವು ಅತ್ಯುತ್ತಮ ಪ್ರತಿಭೆಗಳ ಪ್ರತಿಭಾ ಪೂಲ್ ಅನ್ನು ವಿಸ್ತರಿಸಲು ದೇಶಕ್ಕೆ ಸಹಾಯ ಮಾಡುವುದಲ್ಲದೆ ಪಂಜಾಬ್ ಭಾಗದಲ್ಲಿ ಫುಟ್ಬಾಲ್ ಕ್ರೀಡೆಯನ್ನು ಮತ್ತಷ್ಟು ಜನಪ್ರಿಯ ಗೊಳಿಸಲು ಕೂಡ ಕೊಡುಗೆ ನೀಡಲಿದೆ.

ಈ ಬಗ್ಗೆ ಇಂಡಿಯನ್ ಸೂಪರ್ ಲೀಗ್ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಪಂಜಾಬ್ ಎಫ್‌ಸಿಯನ್ನು ಇಂಡಿಯನ್ ಸೂಪರ್ ಲೀಗ್ ಕುಟುಂಬಕ್ಕೆ ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಐಎಸ್‌ಎಲ್‌ಗೆ ಪಂಜಾಬ್ ಎಫ್‌ಯ ಸೇರ್ಪಡೆ ಭಾರತದಲ್ಲಿ ಬೆಳೆಯುತ್ತಿರುವ ಫುಟ್ಬಾಲ್ ಅಭಿಮಾನಿಗಳ ಬಾಂಧವ್ಯ ಮತ್ತು ಆಟದ ಹೆಜ್ಜೆಗುರುತನ್ನು ಮತ್ತಷ್ಟು ವೇಗಗೊಳಿಸುತ್ತದೆ. ಇದು ಪಂಜಾಬ್‌ನ ಅಭಿಮಾನಿಗಳಿಗೆ ಈ ಲೀಗ್‌ನ ಮೂಲಕ ಹೊಸ ಅವಕಾಶ ದೊರೆತಂತಾಗುತ್ತದೆ. ಐಎಸ್‌ಎಲ್ ಈ ಋತುವಿನ ಮೂಲಕ 10ನೇ ವರ್ಷವನ್ನು ಆಚರಿಸುತ್ತಿದ್ದು ಭಾರತೀಯ ಫುಟ್‌ಬಾಲನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದು ತನ್ನ ಈ ನಿಲುವಿಗೆ ಯಾವಾಗಲೂ ಬದ್ಧವಾಗಿರುತ್ತದೆ" ಎಂದಿದ್ದಾರೆ.
ಈ ಮೂಲಕ ಪಂಜಾಬ್ ಎಫ್‌ಸಿ ಈಗಾಗಲೇ ಲೀಗ್‌ನ ಭಾಗವಾಗಿರುವ ಬೆಂಗಳೂರು ಎಫ್‌ಸಿ, ಹೈದರಾಬಾದ್ ಎಫ್‌ಸಿ, ಮುಂಬೈ ಸಿಟಿ ಎಫ್‌ಸಿ, ಜಮ್‌ಶೆಡ್‌ಪುರ ಎಫ್‌ಸಿ, ಎಫ್‌ಸಿ ಗೋವಾ, ನಾರ್ತ್ ಈಸ್ಟ್ ಯುನೈಟೆಡ್, ಈಸ್ಟ್ ಬೆಂಗಾಲ್, ಮೋಹನ್ ಬಗಾನ್ ಸೂಪರ್ ಜೈಂಟ್, ಒಡಿಶಾ ಎಫ್‌ಸಿ, ಚೆನ್ನೈಯಿನ್ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳ ಜೊತೆಗೆ ಸೇರಿಕೊಳ್ಳಲಿದೆ.
ಪಂಜಾಬ್ ಎಫ್‌ಸಿಯ ಸೇರ್ಪಡೆಯಿಂದಾಗಿ ಉತ್ತರ ಭಾರತದ ಕ್ರೀಡಾ ಮಾರುಕಟ್ಟೆಗೆ ಪ್ರವೇಶಿಸುವ ಲೀಗ್‌ನ ಗುರಿಗೆ ವೇಗ ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ ಕ್ಲಬ್‌ನ ಮೂಲಕ ಹೊಸ ಪ್ರಾಯೋಜಕತ್ವಗಳನ್ನು ಪಡೆಯುತ್ತದೆ. ಇನ್ನಷ್ಟು ಅಂತರರಾಷ್ಟ್ರೀಯ ಆಟಗಾರರನ್ನು ಕೂಡ ಆಕರ್ಷಿಸುತ್ತದೆ. ಒಟ್ಟಾರೆಯಾಗಿ ಮೂಲಸೌಕರ್ಯದಲ್ಲಿ ಕೂಡ ಸುಧಾರಣೆಯಾಗುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications