ಐಎಲ್‌ಎಲ್: 1 ವರ್ಷದ ಬಳಿಕ, ಎಲ್ಲರ ಕನಸಿನ ಫೈನಲ್ ಮುಂಬೈಯಲ್ಲಿ

ಮುಂಬೈ, ಮಾರ್ಚ್ 13: ಹೀರೋ ಇಂಡಿಯನ್ ಸೂಪರ್ ಲೀಗ್ ಯಾವಾಗಲೂ ಅಚ್ಚರಿಯ ಫೈನಲಿಸ್ಟ್‌ಗಳನ್ನು ನೀಡುತ್ತಿದೆ. ಪ್ಲೇ ಆಫ್ ಆ ರೀತಿಯ ಫಲಿತಾಂಶಕ್ಕೆ ಕಾರಣವಾಗಿರಬಹುದು, ಆದರೆ ಮುಂಬೈ ಸಿಟಿ ತಂಡದ ವಿರುದ್ಧ 5-2 ಸರಾಸರಿಯಲ್ಲಿ ಜಯ ಗಳಿಸಿದ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್‌ನ ಫೈನಲ್ ಪ್ರವೇಶಿಸಿದೆ. ಕಳೆದ ಬಾರಿ ಈ ರೀತಿ ಲಿತಾಂಶಕ್ಕಾಗಿ ಕಾಯುತ್ತಿದ್ದ ಫುಟ್ಬಾಲ್ ಅಭಿಮಾನಿಗಳ ಆಸೆ ಕೊನೆಗೂ ಈಡೇರಿತು.
ಬೆಂಗಳೂರು ಹಾಗೂ ಗೋವಾ ತಂಡಗಳು ಇಂಡಿಯನ್ ಸೂಪರ್ ಲೀಗ್‌ನಲ್ಲಿ ಉತ್ತಮ ತಂಡಗಳು ಎಂದು ಹೇಳುತ್ತಿದ್ದರೂ ಅಲ್ಲೊಂದು ಸಣ್ಣ ಸಂಶಯ ಇರುವುದು ಸಹಜ. ಕಳೆದ ವರ್ಷವೂ ಈ ಎರಡು ತಂಡಗಳು ಬಹಳ ಆಕರ್ಷಣೀಯ ಹಾಗೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಾಗಿವೆ. ಕಳೆದ ಬಾರಿ ಎಲ್ಲರ ಪ್ರಾರ್ಥನೆ ಇದ್ದರೂ ಗೋವಾ ಕಳೆದ ಬಾರಿ ಚೆನ್ನೈಯಿನ್ ವಿರುದ್ಧ ಸೋತು ಫೈನಲ್ ತಲಪುವಲ್ಲಿ ವಿ ಫಲವಾಗಿತ್ತು. ಬೆಂಗಳೂರು ಕಳೆದ ಮೊದಲ ಫೈನಲ್ ಅನುಭವ ಕಂಡಿದ್ದರೂ, ಚೆನ್ನೈ ವಿರುದ್ಧ ಸೋಲನುಭವಿಸಿತ್ತು. ಈ ಬಾರಿ ನಾರ್ತ್ ಈಸ್ಟ್ ವಿರುದ್ಧದ ಎರಡನೇ ಲೆಗ್‌ನಲ್ಲಿ ಜಯ ಗಳಿಸಿದ ಬೆಂಗಳೂರು ಫೈನಲ್ ತಲುಪಿತು.
ಲೊಬೆರಾ ಅವರ ಗೋವಾ ಹಾಗೂ ಕ್ವಾಡ್ರಾಟ್ ಅವರ ಬೆಂಗಳೂರು ತಂಡಗಳ ನಡುವಿನ ಫೈನಲ್ ಹೋರಾಟ ಅತ್ಯಂತ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುವುದು ಖಚಿತ. ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅಟ್ಯಾಕಿಂಗ್‌ನಲ್ಲಿ ಬಲಿಷ್ಠ ಎನಿಸಿರುವ ಎರಡು ತಂಡಗಳು ಫೈನಲ್‌ನಲ್ಲಿ ಸೆಣಸುತ್ತಿರುವುದು ವಿಶೇಷ.

ಉತ್ತಮ ಆಟ ಪ್ರದರ್ಶಿಸಿವೆ
‘180 ನಿಮಿಷಗಳ ಆಟದ ನಂತರ ಯಾರು ಫೈನಲ್‌ನಲ್ಲಿ ಇದ್ದಾರೋ ಅವರು ಆ ಹಂತ ತಲುಪಲು ಅರ್ಹರು. ಈ ಋತುವಿನುದ್ದಕ್ಕೂ ಇತ್ತಂಡಗಳು ಉತ್ತಮ ಆಟ ಪ್ರದರ್ಶಿಸಿವೆ. ಫೈನಲ್‌ನಲ್ಲಿ ನಾವು ನಮ್ಮ ಬೆಂಬಲಿಗರಿಗೆ ಉತ್ತಮ ರೀತಿಯ ಫುಟ್ಬಾಲ್ ಸವಿಯನ್ನು ನೀಡಲಿದ್ದೇವೆ. ಅದೇ ರೀತಿ ನಾವು ಟ್ರೋಫಿಯನ್ನು ಗೆಲ್ಲಿದ್ದೇವೆ ಎಂಬ ನಂಬಿಕೆ ಇದೆ,‘ ಎಂದ ಲೊಬೆರಾ ಹೇಳಿದ್ದಾರೆ. ಗೋವಾ ಹಾಗೂ ಬೆಂಗಳೂರು ತಂಡಗಳಲ್ಲಿ ಯಾವುದೇ ತಂಡ ಇದುವರೆಗೂ ಐಎಸ್‌ಎಲ್ ಪ್ರಶಸ್ತಿ ಗೆದ್ದಿಲ್ಲ, ಆದ್ದರಿಂದ ಮೊದಲ ಬಾರಿಗೆ ಟ್ರೋಫಿ ಗೆಲ್ಲಬಬೇಕೆಂಬ ಉತ್ಸುಕತೆ ಇತ್ತಂಡಗಳಲ್ಲಿ ಮನೆಮಾಡಿರುವುದು ಸ್ಪಷ್ಟ.

ಯೋಜನೆಗೆ ಬದ್ಧ
‘ಎಲ್ಲ ಫೈನಲ್ ಪಂದ್ಯಗಳೂ ವಿಶೇಷವಾಗಿರುತ್ತವೆ. ಸಾಕಷ್ಟು ಒತ್ತಡ ಇರುವುದು ಸಾಮಾನ್ಯ, ನಾವು ನಮ್ಮ ಯೋಜನೆಗೆ ಬದ್ಧವಾಗಿರುತ್ತೇವೆ. ದೈಹಿಕ ಹಾಗೂ ಮಾನಸಿಕವಾಗಿ ಹೋರಾಟಕ್ಕೆ ಸಜ್ಜಾಗಿದ್ದೇವೆ. ಫುಟ್ಬಾಲ್‌ನಲ್ಲಿ ಪಂದ್ಯಕ್ಕೆ ತಿರುವು ನೀಡಬಲ್ಲ ಸಾಕಷ್ಟು ಘಟನೆಗಳು ನಡೆಯುತ್ತವೆ,‘ ಕ್ವಾಡ್ರಾಟ್ ಹೇಳಿದ್ದಾರೆ.

ಯಾವುದೇ ಸಂಶಯವಿಲ್ಲ
ಲೀಗ್ ಹಂತದ ಕೊನೆಯಲ್ಲಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದ ತಂಡಗಳು ಮುಖಾಮುಖಿಯ ಸಂಖ್ಯೆಯಲ್ಲಿ ಮಾತ್ರ ವ್ಯತ್ಯಾಸ ಹೊಂದಿವೆ. ಗೋವಾ ಹಾಗೂ ಬೆಂಗಳೂರು ಇಂಡಿಯನ್ ಸೂಪರ್ ಲೀಗ್‌ನ ಟಾಪ್ ಎರಡು ತಂಡಗಳು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಗೋವಾ ಅದ್ಭುತ ಆಟ
ಗೋವಾ ತಂಡ ಎಲ್ಲ ಎದುರಾಳಿಗಳ ವಿರುದ್ಧ ಅದ್ಭುತ ಆಟವಾಡಿ ಇದುವರೆಗೂ 42 ಗೋಲುಗಳನ್ನು ಗಳಿಸಿದೆ, ಅದೇ ರೀತಿ ಬೆಂಗಳೂರು 35 ಗೋಲುಗಳನ್ನು ಗಳಿಸಿದೆ. ಆಕ್ರಮಣಕಾರಿ ಆಟ ಇತ್ತಂಡಗಳ ಪ್ರಮುಖ ಅಸ್ತ್ರ. ಹೆಚ್ಚಿನ ತಂಡಗಳು ಅಟ್ಯಾಕ್ ವಿಭಾಗವನ್ನು ಹೊಂದಿದ್ದರೂ, ಪರ್ಯಾಯವಾಗಿ ಡಿೆನ್ಸ್ ಕಡೆಗೂ ಹೆಚ್ಚಿನ ಗಮನ ಹರಿಸುತ್ತವೆ. ಆದರೆ ಈ ಎರಡೂ ತಂಡಗಳು ಡಿಫೆನ್ಸ್ ಕಡೆಗೆ ಹೆಚ್ಚಿನ ಒತ್ತು ನೀಡಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications